ಮಗಳು ಮಾರಾಟಕ್ಕಿದ್ದಾಳೆ ಎಂದು ಅಪ್ಪನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್! – ತಂದೆಯನ್ನು ವಶಕ್ಕೆ ಪಡೆದ ಬಳಿಕ ಕೇಸ್‌ಗೆ ಟ್ವಿಸ್ಟ್!
ಇಲ್ಲೊಬ್ಬಳು ಮಲತಾಯಿ ಮಗಳು ಮಾರಾಟಕ್ಕಿದ್ದಾಳೆ ಎಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾಳೆ. ಆಕೆಯನ್ನು ಬಂಧಿಸಿದ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ಸಾಕಷ್ಟು ಸ್ಪೋಟಕ ಮಾಹಿತಿ ಹೊರಬೀಳುತ್ತಿದೆ.
ಘಟನೆಯ ವಿವರ..
ಕೇರಳದ ಇಡಿಕ್ಕಿ ಜಿಲ್ಲೆಯಲ್ಲಿ ಮಗಳು ಮಾರಾಟಕ್ಕಿದ್ದಾಳೆ ಎಂದು ಮಲತಾಯಿ ಪೋಸ್ಟ್ ಮಾಡಿದ್ದಾಳೆ. ಸೈಬರ್ ಸೆಲ್ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಇದು ಪತ್ತೆಯಾಗಿದೆ. ಪತಿ ಜತೆಗಿನ ಜಗಳದ ಹಿನ್ನೆಲೆಯಲ್ಲಿ 11 ವರ್ಷದ ಬಾಲಕಿಯ ಮಲತಾಯಿ ಎರಡು ದಿನಗಳ ಹಿಂದೆ ಈ ಕೃತ್ಯ ಎಸಗಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬರೋಬ್ಬರಿ 26 ಬೆರಳುಗಳಿರುವ ಶಿಶು ಜನನ! – ʼದೇವರ ಮಗುʼ ಎಂದ ಜನ!
ಫೇಸ್ ಬುಕ್ ಅಕೌಂಟ್ ಮಲತಾಯಿದಲ್ಲ!
ಬಾಲಕಿಯ ತಂದೆಯ ಫೇಸ್‌ಬುಕ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ಮಾದಕ ವಸ್ತುಗಳ ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಾಲಕಿಯ ತಂದೆಯನ್ನು ಪೊಲೀಸರು ಮೊದಲು ಶಂಕಿಸಿದ್ದರು. ವಿಚಾರಣೆ ವೇಳೆ ಆತ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಸೈಬರ್ ಸೆಲ್ ಸಹಾಯದಿಂದ ಎಲ್ಲಿಂದ ಪೋಸ್ಟ್ ಮಾಡಲಾಗಿದೆ ಎಂದು ಪರಿಶೀಲಿಸಿದಾಗ, ಆಕೆಯ ಮಲತಾಯಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಮೊದಲು ನಿರಾಕರಿಸಿದರೂ ಆನಂತರ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಪೊಲೀಸರಿಗೆ ಸವಾಲಾದ ಪ್ರಕರಣ!
ಈ ಪ್ರಕರಣ ಪೊಲೀಸರಿಗೆ ತಲೆನೋವು ತರಿಸಿದೆ. ಆರೋಪಿ ಮಲತಾಯಿಗೆ ಆರು ತಿಂಗಳ ಮಗು ಇದೆ. ಹೀಗಾಗಿ ಮಲತಾಯಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿದೆ. ಇದಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯ ಸಲಹೆ ಕೇಳಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳ ನಿರ್ದೇಶನದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಬಾಲಕಿ ಹಾಗೂ ಆಕೆಯ ಚಿಕ್ಕಮ್ಮ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ.
ಚಿಕ್ಕಪ್ಪ, ಚಿಕ್ಕಮ್ಮನ ಆಶ್ರಯದಲ್ಲಿರುವ ಬಾಲಕಿ
ತಾಯಿಯಿಂದ ಪರಿತ್ಯಕ್ತಳಾದ ಬಾಲಕಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿದ್ದಾಳೆ. ಬಾಲಕಿ ಈ ಘಟನೆಯಿಂದ ಮನನೊಂದಿದ್ದು, ಈ ಹಿನ್ನೆಲೆ ಆಕೆಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.