ದತ್ತಪೀಠದ ಗೋರಿ ಧ್ವಂಸ ಕೇಸ್‌ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

ದತ್ತಪೀಠದ ಗೋರಿ ಧ್ವಂಸ ಕೇಸ್‌ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮ ಹತ್ತಿರವಾಗುತ್ತಿದ್ದಂತೆ ಹಿಂದೂ ಹೋರಾಟಗಾರರ ಮೇಲಿನ ಹಳೆ ಕೇಸುಗಳಿಗೆ ಜೀವ ನೀಡುವ ಕೆಲಸ ಆಗ್ತಿದೆ ಅಂತಾ ಹಿಂದೂ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ 31 ವರ್ಷದ ಕರಸೇವಕನನ್ನ ಅರೆಸ್ಟ್ ಮಾಡಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಈಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದೆ.  7 ವರ್ಷಗಳ ಹಿಂದಿನ ದತ್ತಪೀಠ ಕೇಸ್ ರಿ ಓಪನ್ ಆಗಿದ್ದು, 14 ಜನ ಆರೋಪಿಗಳಿಗೆ ಸಮಸ್ಸ್‌ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಮೈಕಲ್ ಔಟ್ – ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ

2017ರ ಡಿ.3 ರಂದು ನಡೆದಿದ್ದ ದತ್ತಪೀಠದ ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ 14 ಜನ  ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

2017ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿಯ ದರ್ಗಾದ ವಿಚಾರವಾಗಿ ದತ್ತಜಯಂತಿ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಉದ್ರಿಕ್ತರ ಗುಂಪು ಗೋರಿಗಳನ್ನು ಧ್ವಂಸಗೊಳಿಸಿತ್ತು. ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ, 2023ರ ಅ.24ರಂದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ಕಲಾಪ ಮುಗಿದ ಬಳಿಕ ಕೋರ್ಟ್ ಪಕ್ಕದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಹಿಂದೂ ಕಾರ್ಯಕರ್ತರು ಸಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

Shwetha M