ಪ್ರೇಯಸಿ ಜೊತೆ ಬ್ರೇಕ್‌ಅಪ್.. ಆಕೆ ತಾಯಿ ಜೊತೆ ಡೇಟಿಂಗ್! – ಅಮ್ಮ, ಮಗಳ ಬಾಳಲ್ಲಿ ಬಾಯ್‌ಫ್ರೆಂಡ್ ಕಳ್ಳಾಟ!

ಈಗಿನ ಕಾಲದಲ್ಲಿ ಯಾರನ್ನು ನಂಬೋ ಹಾಗಿಲ್ಲ. ಪ್ರೀತಿ, ಪ್ರೇಮ ಅನ್ನೋದು ಬರೀ ಬಾಯಿ ಮಾತಿಗೆ ಅನ್ನೋತರ ಆಗಿದೆ. ಒಬ್ಬರ ಜೊತೆ ಓಡಾಡಿ ಮತ್ತೊಬ್ಬರನ್ನು ಮದುವೆ ಆಗುವ ಕಾಲ. ರಿಲೇಶನ್‌ಶಿಪ್ ಕುರಿತು ಹಲವು ಶಾಕಿಂಗ್ ವಿಚಾರಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ವಿಲಕ್ಷಣಕಾರಿ ಘಟನೆ ನಡೆದಿದೆ. ಇಲ್ಲೊಬ್ಬ ಗರ್ಲ್‌ಫ್ರೆಂಡ್ ಜೊತೆ ಬ್ರೇಕ್‌ಅಪ್ ಮಾಡಿ, ಆಕೆಯ ಮಲತಾಯಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ರಿವೀಲ್ ಆಗಿದೆ.
ಇದನ್ನೂ ಓದಿ: ಡ್ರಾಮಾ ಕ್ವೀನ್ ರಾಖಿ ಸಾವಂತ್ ಶಾಕಿಂಗ್ ಹೇಳಿಕೆ – ಜ್ಯೋತಿಷಿ ಹೇಳಿದಮೇಲೆ ಒಳ ಉಡುಪು ಹಾಕೋದೇ ಇಲ್ವಂತೆ..!
ಯುವತಿಯೊಬ್ಬಳು ತನ್ನ ಮಾಜಿ ಬಾಯ್‌ಫ್ರೆಂಡ್ ಕಳ್ಳಾಟ ಬಯಲು ಮಾಡಿದ ಕತೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತನ್ನ ಜೊತೆ ಬ್ರೇಕ್ ಅಪ್ ಮಾಡಿದ ಬಾಯ್‌ಫ್ರೆಂಡ್ ಬಳಿಕ ಪತ್ತಯೇ ಇರಲಿಲ್ಲ. ಆದರೆ ಡೇಟಿಂಗ್ ಆ್ಯಪ್ ಪ್ರಮೋಶನ್ ಕಾರ್ಯಕ್ರಮದಲ್ಲಿ ತನ್ನ ಮಾಜಿ ಬಾಯ್‌ಫ್ರೆಂಡ್ ಕಳ್ಳಾಟ ಬಯಲಾಗಿದೆ. ತನ್ನ ಜೊತೆ ಬ್ರೇಕ್‌ಅಪ್ ಮಾಡಿ, ಬಳಿಕ ತನ್ನ ಮಲ ತಾಯಿ ಜೊತೆ ಡೇಟಿಂಗ್ ಮಾಡುತ್ತಿರುವುದು ಗೊತ್ತಾಗಿದೆ.
ದೆಹಲಿಯಲ್ಲಿ ನಡೆದ ಡೇಟಿಂಗ್ ಆ್ಯಪ್ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಪ್ರಿಯಕರನ ಶಪಿಸಿ, ಕ್ರಶ್ ಒಪ್ಪಿಕೊಳ್ಳಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಯುವತಿ ಸ್ಟಿಕ್ಕಿ ಬೋರ್ಡ್ ಮೇಲೆ ಬರೆದ ಸುದೀರ್ಘ ನೋಟ್ ಇದೀಗ ಭಾರಿ ವೈಲ್ ಆಗಿದೆ. ಈ ಪತ್ರದಲ್ಲಿ ತನ್ನ ಮಾಜಿ ಪ್ರಿಯಕರ ಮಾಡಿದ ಮೋಸ, ತನ್ನ ತಾಯಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ವಿಚಾರಗಳನ್ನು ಬೋರ್ಡ್ ಮೇಲಿನ ಪತ್ರದಲ್ಲಿ ಬರೆದಿದ್ದಾಳೆ.
ಡೇಟಿಂಗ್ ಆ್ಯಪ್ ಮೂಲಕ ಗೆಳೆಯ ಪರಿಚಯವಾಗಿದ್ದ. ಆತನ ಜೊತೆಗಿನ ಪರಿಚಯ ಪ್ರೀತಿಯಾಗಿ ತಿರುಗಿತ್ತು.ಬಳಿಕ ಸುತ್ತಾಟ, ಪಾರ್ಟಿ ಎಲ್ಲವೂ ನಡೆಯುತ್ತಿತ್ತು. ಯುವತಿ ತನ್ನ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾಳೆ. ಇತ್ತ ಗೆಳೆಯನಿಗೆ ಎಲ್ಲವೂ ಟೈಮ್ ಪಾಸ್ ಆಗಿತ್ತು. ಇದೇ ವಿಚಾರವಾಗಿ ಮನಸ್ತಾಪಗಳು ಶುರುವಾಗತ್ತು. ಪ್ರೀತಿ ಮುಂದುವರಿಸಲು ಸಾಧ್ಯವಾಗದೇ ಆತ ಬ್ರೇಕ್ ಅಫ್ ಮಾಡಿಕೊಂಡ. ಬಳಿಕ ನೋವಿನಿಂದ ಹೊರಬರಲು ತುಂಬಾ ದಿನಗಳನ್ನು ತೆಗೆದುಕೊಂಡೆ. ಆದರೆ ಕೆಲ ದಿನಗಳ ಬಳಿಕ ಅಚ್ಚರಿ ವಿಚಾರ ಗೊತ್ತಾಗಿತ್ತು. ಆತ ನನ್ನ ಮಲತಾಯಿ ಜೊತೆಗೆ ಡೇಟಿಂಗ್ ಮಾಡುತ್ತಿರುವುದು ಪತ್ತೆಯಾಗಿತ್ತು. ನನ್ನ ಬ್ರೇಕ್ ಅಪ್ ಬಳಿ ಹಲವು ಯುವತಿಯರ ಜೊತೆ ಸಂಪರ್ಕವಿಟ್ಟುಕೊಂಡಿದ್ದ. ಇದರ ನಡುವೆ ಮಲ ತಾಯಿ ಜೊತೆಗೂ ಡೇಟಿಂಗ್ ಆ್ಯಪ್ ಮೂಲಕ ರಿಲೇಶನ್‌ಶಿಪ್ ಆರಂಭಿಸಿದ್ದ ಎಂದು ಯುವತಿ ಸ್ಟಿಕ್ಕಿ ನೋಟ್‌ನಲ್ಲಿ ಬೆರೆದುಕೊಂಡಿದ್ದಳೆ ಎಂದು ವರದಿಯಾಗಿದೆ. ಈ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೋಡಿರಿ

