ಡೇಟಿಂಗ್‌ ಆಪ್‌ನಲ್ಲಿ ಪರಿಚಯ.. ಬಾರ್‌ನಲ್ಲಿ ಮೀಟಿಂಗ್..‌ – ಯುವತಿ ಮಾತು ನಂಬಿ ಹೋದಾತನ ಕತೆ ಏನಾಯ್ತು ಗೊತ್ತಾ?

ಡೇಟಿಂಗ್‌ ಆಪ್‌ನಲ್ಲಿ ಪರಿಚಯ.. ಬಾರ್‌ನಲ್ಲಿ ಮೀಟಿಂಗ್..‌ – ಯುವತಿ ಮಾತು ನಂಬಿ ಹೋದಾತನ ಕತೆ ಏನಾಯ್ತು ಗೊತ್ತಾ?

ಇತ್ತೀಚೆಗಿನ ದಿನಗಳಲ್ಲಿ ಡೇಟಿಂಗ್ ಅನ್ನೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಲವ್ ರಿಲೇಷನ್ಶಿಪ್ ಹೊಂದುವ ಮೊದಲು ಡೇಟಿಂಗ್ ಮಾಡುವ ಮೂಲಕ ವ್ಯಕ್ತಿಯ ಇಷ್ಟ ಕಷ್ಟಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಎಲ್ಲರೂ ಇಷ್ಟ ಪಡುತ್ತಾರೆ. ಇತ್ತೀಚೆಗೆ ಡೇಟಿಂಗ್‌ ಆಪ್‌ಗಳು ಬೇಕಾದಷ್ಟು ಸಿಗುತ್ತವೆ. ಈ ಆಪ್‌ಗಳಲ್ಲಿ  ಹುಡುಗಿಯೂ ಹುಡುಗನನ್ನು ಡೇಟಿಂಗ್ ಕರೆದರೆ ಕಣ್ಣು ಮುಚ್ಚಿ ಓಕೆ ಎನ್ನುವವರೇ ಹೆಚ್ಚು. ಇದೀಗ ಇಲ್ಲೊಬ್ಬ ಡೇಟಿಂಗ್‌ ಆಪ್‌ ಮೂಲಕ ಪರಿಚಯವಾದ ಹುಡುಗಿ ಜೊತೆ ಬಾರ್‌ಗೆ ಹೋಗಿ ಇರೋ ದುಡ್ಡನ್ನೆಲ್ಲಾ ಕಳ್ಕೊಂಡಿದ್ದಾನೆ.

ಇದನ್ನೂ ಓದಿ: ಗಿಲ್ಲಿಗೆ ಕಾವ್ಯ ಮೇಲೆ ಲವ್?‌ – ಕಿಚ್ಚನ ಮುಂದೆಯೇ ಗುಟ್ಟು ರಿವೀಲ್‌ ಮಾಡಿದ  ಗಿಲ್ಲಿನಟ!  

ಏನಿದು ಘಟನೆ?

ಸಾಮಾನ್ಯವಾಗಿ ಹುಡುಗ ಹುಡುಗಿಯರು ಮೊದಲು ದೇವಸ್ಥಾನ, ಪಾರ್ಕ್‌, ಕಾಫಿಡೇಗಳಲ್ಲಿ ಮೀಟ್‌ ಮಾಡ್ತಾರೆ. ಅಲ್ಲೇ ಕೆಲ ಕಾಲ ಸಮಯ ಕಳೆಯುತ್ತಾರೆ. ಆದ್ರೆ ಥಾಣೆಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಯುವಕನನ್ನ ಬಾರ್‌ಗೆ ಕಡೆಸಿಕೊಂಡಿದ್ದಾಳೆ. ಬಳಿಕ ಬಾರ್‌ನಲ್ಲಿ ಮದ್ಯ ಆರ್ಡರ್‌ ಮಾಡಿ ಕುಡಿದು, ದುಬಾರಿ ಬಿಲ್ ಅನ್ನು ಆತನ ಕೈಗೆ ಒಪ್ಪಿಸಿದ್ದಾಳೆ. ಆಕೆ ಕೊಟ್ಟ ಬಿಲ್‌ ನೋಡಿ ಶಾಕ್‌ ಯುವಕ ಶಾಕ್‌ ಆಗಿದ್ದಾನೆ. ಯುವತಿ ಕುಡಿದ ಮದ್ಯದ ಬೆಲೆ ಐನೂರು, 1 ಸಾವಿರ ರೂಪಾಯಿ ಅಲ್ಲ.. ಬರೋಬ್ಬರಿ 24,000 ರೂ. ಬಿಲ್‌ ಕೊಟ್ಟಿದ್ದಾಳೆ. ಇದೀಗ ಆ ವ್ಯಕ್ತಿ ಯುವತಿಯಿಂದ ಮೋಸ ಹೋಗಿರುವ ಕುರಿತು  ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದು ಭಾರಿ ವೈರಲ್ ಆಗಿದೆ.

ಡೇಟಿಂಗ್ ಅಪ್ಲಿಕೇಶನ್ ಮೂಲಕ ಹುಡುಗಿಯೊಬ್ಬಳನ್ನು ಭೇಟಿಯಾದೆ. ಬಳಿಕ ಆಕೆ ಜೊತೆ ಕೆಲ ಸಮಯ ಚಾಟ್‌ ಮಾಡಿದ್ದೇನೆ. ಆಕೆ ಮೀಟ್‌ ಆಗೋಣ ಎಂದು ಹೇಳಿದ್ಲು. ಹೀಗಾಗಿ ಕೇವಲ ಮೀಟ್‌ ಮಾಡೋಣ ಎಂದು ಹೋಗಿದ್ದೆ. ನಾನು ಹೆಚ್ಚಿನ ಯೋಜನೆ ಹಾಕಿರಲಿಲ್ಲ. ಬಳಿಕ ಆಕೆ  ಪಾಬ್ಲೊ ಬಾರ್ ಮತ್ತು ಲೌಂಚ್‌ಗೆ ಬರುವಂತೆ ಹೇಳಿದಳು. ನಾವಿಬ್ಬರು ಕುಳಿತು ಉತ್ತಮ ರೀತಿಯಲ್ಲಿ ಸಂಭಾಷಣೆಗಳನ್ನು ನಡೆಸಿದೆವು. ಅವಳು ಎಷ್ಟು ಮಿಲಿ ಬೇಕು ಎಂದು ಕೂಡ ಕೇಳದೆ ನೀಲಿ ಲೇಬಲ್‌ಗಳ ಮದ್ಯವನ್ನು ಆರ್ಡರ್ ಮಾಡುತ್ತಲೇ ಇದ್ದಳು. ವಾರಾಂತ್ಯವಾದ್ದರಿಂದ ನಾನು ಸ್ವಲ್ಪ ಬಿಯರ್ ಮತ್ತು ವೋಡ್ಕಾವನ್ನು ಸೇವಿಸಿದೆ.

ಕೊನೆಗೆ ಬಿಲ್ ನೋಡಿದಾಗ ಶಾಕ್ ನೀಡಿತ್ತು. ಮದ್ಯ ಕುಡಿದ ಒಟ್ಟು ಬಿಲ್ 24,000 ರೂ. ಜೊತೆಗೆ ಸೇವಾ ಶುಲ್ಕ 2,000 ರೂ.ಗಳಾಗಿತ್ತು. ನನಗೆ ಕೇವಲ 2,000 ರೂ. ಆಗಿದ್ದರೆ ಉಳಿದದ್ದು ಆ ಯುವತಿ ಸೇವಿಸಿದ ಮದ್ಯದ ಬಿಲ್ ಆಗಿತ್ತು ಎಂಬುದನ್ನು ಯುವಕ ಹೇಳಿಕೊಂಡಿದ್ದಾನೆ. ಕೊನೆಗೆ ನಾನು 10,000 ರೂ. ಪಾವತಿಸಿ ಅಲ್ಲಿಂದ ಸದ್ದಿಲ್ಲದೆ ಹೊರಬಂದೆ ಎಂದು ಹೇಳಿಕೊಂಡಿದ್ದಾನೆ.

Shwetha M