ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಗೆ ಡೇಟ್ ಫಿಕ್ಸ್ – ಜನವರಿ 26ಕ್ಕೆ ವಿವಾಹ

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಗೆ ಡೇಟ್ ಫಿಕ್ಸ್ – ಜನವರಿ 26ಕ್ಕೆ ವಿವಾಹ

ಸ್ಯಾಂಡಲ್‌ವುಡ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ ಈಗ ಮದುವೆ ತಯಾರಿಯಲ್ಲಿದೆ. ಮದುವೆಗೆ ಡೇಟ್ ಫಿಕ್ಸ್ ಆಗಿದ್ದು,  ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವಿವಾಹ ಕಾರ್ಯಕ್ರಮ ನಡೆಯಲಿದೆ. ಮೈಸೂರು ಊಟಿ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು.

ಇದನ್ನೂ ಓದಿ:  ಕೇಸರಿ ಬಿಕಿನಿ ಹಾಕಿದ ದೃಶ್ಯಕ್ಕೆ ಬಿತ್ತು ಕತ್ತರಿ -‘ಪಠಾಣ್’ ಸಿನಿಮಾದ ವಿವಾದಕ್ಕೆ ಬ್ರೇಕ್ ಹಾಕಿದ ಶಾರುಖ್

ಜನವರಿ 26ರಂದು ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ ನೆರವೇರಲಿದೆ. ವಿವಾಹದ ವಿಚಾರವನ್ನು ಸಂಸದ ಪ್ರತಾಪ್ ಸಿಂಹ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಆಶ್ರಮದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರತಾಪ್ ಸಿಂಹ (Pratap Simha) ಕೂಡ ಜೊತೆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

suddiyaana