ಪೊನ್ನಿಯನ್ ಸೆಲ್ವನ್ ಸೀಕ್ವೆಲ್ 2 ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್

ಪೊನ್ನಿಯನ್ ಸೆಲ್ವನ್ ಸೀಕ್ವೆಲ್ 2 ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್

ಮಣಿರತ್ನ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಪಾರ್ಟ್ -1 ಚಿತ್ರ ಸೂಪರ್ ಹಿಟ್ ಆಗಿತ್ತು. ಐತಿಹಾಸಿಕ ಸ್ಟೋರಿ, ಅದ್ದೂರಿ ಮೇಕಿಂಗ್, ಜನಪ್ರಿಯ ನಟ ನಟಿಯರು ನಟಿಸಿದ್ದ ಪೊನ್ನಿಯನ್ ಸೆಲ್ವನ್ ಪಾರ್ಟ್ -1 ಚಿತ್ರ ಥಿಯೇಟರ್‌ಗಳಲ್ಲೂ ಮ್ಯಾಜಿಕ್ ಮಾಡಿತ್ತು. ಇದೀಗ ಪೊನ್ನಿಯನ್ ಸೆಲ್ವನ್ ಚಿತ್ರತಂಡದಿಂದ ಅಭಿಮಾನಿಗಳು ಕಾಯುತ್ತಿದ್ದ ದಿನಕ್ಕೆ ಉತ್ತರ ಸಿಕ್ಕಿದೆ. ‘ಪೊನ್ನಿಯನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.

ಇದನ್ನೂ ಓದಿ :  ಟಾಲಿವುಡ್‌ಗೆ ಜಾನ್ವಿಕಪೂರ್ ಎಂಟ್ರಿ – ಬಾಲಿವುಡ್ ಬಾಲೆಗೆ ಅದೃಷ್ಟತರುತ್ತಾ ತೆಲುಗು ಚಿತ್ರ?

ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡಿತ್ತು. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಈ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮಣಿರತ್ನಂ ನಿರ್ದೇಶನ ಚಿತ್ರದ ಹೈಲೆಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್ ಕೂಡಾ ಚಿತ್ರದ ಯಶಸ್ಸಿಗೆ ಕಾರಣವಾಗಿತ್ತು. ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ತೆರೆ ಮೇಲೆ ಕಮಾಲ್ ಮಾಡಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ. ಸೀಕ್ವಲ್ 2 ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

suddiyaana