ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಚಿನ್ನಾಭರಣ ಹಸ್ತಾಂತರಕ್ಕೆ ದಿನ ನಿಗದಿ – 6 ಟ್ರಂಕ್ಗಳನ್ನು ತರುವಂತೆ ಕೋರ್ಟ್ ಸೂಚನೆ!
ಅಕ್ರಮ ಹಣ ಹಾಗೂ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಹಾಗೂ ಇತರರಿಂದ ಜಪ್ತಿ ಮಾಡಿದ್ದ ಚಿನ್ನಾಭರಣವನ್ನು ತಮಿಳು ನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತಮಿಳು ನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿದೆ. ಮಾರ್ಚ್ 6 ಮತ್ತು 7 ರಂದು ಅಧಿಕಾರಿಗಳನ್ನು ನಿಯೋಜಿಸಿ ತೆಗೆದುಕೊಂಡು ಹೋಗುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಇದನ್ನೂ ಓದಿ: ವಿಮಾನ ದುರಂತದಿಂದ ಪಾರಾದ ಮಾರ್ಟಿನ್ ಚಿತ್ರ ತಂಡ – ಮೊದಲ ಬಾರಿಗೆ ಸಾವನ್ನು ಹತ್ತಿರ ನೋಡಿ ವಾಪಸ್ ಬಂದೆ ಎಂದ ನಟ ಧ್ರುವ ಸರ್ಜಾ
ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಆರು ಟ್ರಂಕ್ಗಳನ್ನು ತರುವಂತೆ ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿದೆ. ಮತ್ತು ಹಸ್ತಾಂತರವನ್ನು ದಾಖಲಿಸಿಕೊಳ್ಳಲು ಇಬ್ಬರು ಅಧಿಕೃತ ಅಧಿಕಾರಿಗಳು ಛಾಯಾಗ್ರಾಹಕ ಮತ್ತು ವೀಡಿಯೊಗ್ರಾಫರ್ನೊಂದಿಗೆ ಬರುವಂತೆ ಆದೇಶ ನೀಡಿದ್ದಾರೆ.
ಇದಲ್ಲದೆ, ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬೆಲೆಬಾಳುವ ವಸ್ತುಗಳ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ನ್ಯಾಯಾಲಯವು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 6 ರಂದು ನಡೆಯಲಿದೆ.
ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳಲ್ಲಿ 7,040 ಗ್ರಾಂ ಚಿನ್ನಾಭರಣಗಳಿದ್ದು, 468 ಬಗೆಯ ಚಿನ್ನ ಮತ್ತು ವಜ್ರಾಭರಣಗಳು, 700 ಕೆಜಿ ಬೆಳ್ಳಿ ಆಭರಣಗಳು, 11,344 ರೇಷ್ಮೆ ಸೀರೆಗಳು, 740 ದುಬಾರಿ ಚಪ್ಪಲಿಗಳು, 250 ಶಾಲುಗಳು, 12 ರೆಫ್ರಿಜರೇಟರ್ಗಳು, ಎಂಟು ವಿಸಿಆರ್ಗಳು, 10 ಟಿವಿ, 10 ಟಿವಿ ಸೆಟ್ಗಳು, 4 ಸಿಡಿ ಪ್ಲೇಯರ್ಗಳು, 2 ಆಡಿಯೊ ಡೆಕ್ಗಳು, 24 ಟು-ಇನ್-ಒನ್ ಟೇಪ್ ರೆಕಾರ್ಡರ್ಗಳು, 1,040 ವಿಡಿಯೋ ಕ್ಯಾಸೆಟ್ಗಳು, ಮೂರು ಕಬ್ಬಿಣದ ಲಾಕರ್ಗಳು ಹಾಗೂ 1,93,202 ನಗದು ಒಳಗೊಂಡಿವೆ.