ಪೋಲೀಸರ ಬಿಗಿ ಭದ್ರತೆಯಲ್ಲಿ ದಸರಾ ಗಜಪಡೆಯ ತೂಕ ಪರೀಕ್ಷೆ – ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ಫಸ್ಟ್!‌

ಪೋಲೀಸರ ಬಿಗಿ ಭದ್ರತೆಯಲ್ಲಿ ದಸರಾ ಗಜಪಡೆಯ ತೂಕ ಪರೀಕ್ಷೆ – ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ಫಸ್ಟ್!‌

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳು ಈಗಾಗಲೇ ಅರಮನೆ ನಗರಿಗೆ ಆಗಮಿಸಿದ್ದು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಗಿದೆ. ಇದೀಗ ಕಾಡಿನಿಂದ ಅರಮನೆಯ ಆವರಣಕ್ಕೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: ಅರಮನೆ ನಗರಿಗೆ ಎಂಟ್ರಿಕೊಟ್ಟ ಅಭಿಮನ್ಯು ಟೀಂ – ಅಭಿಜಿತ್​​​​​​ ಲಗ್ನದಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳನ್ನು ತೂಕ ಪರೀಕ್ಷೆಗೆ ಒಳ ಪಡಿಸಲಾಗಿದೆ. ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ. ಮೈಸೂರು ಅರಮನೆಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಗಜಪಡೆಗೆಯನ್ನು ಕರೆತರಲಾಯಿತು. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 5,160 ಕೆಜಿ ತೂಗಿದ್ದಾನೆ. ಈ ಮೂಲಕ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ಗುರುತಿಸಲಾಗಿದೆ.

ಆನೆಗಳ ತೂಕದ ಆಧಾರದ ಮೇಲೆ ಅವುಗಳ ಆಹಾರ ಮತ್ತು ತರಬೇತಿ ನಿಗದಿಯಾಗುತ್ತದೆ. ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ.

ದಸರಾ ಗಜಪಡೆಯ ತೂಕದ ವಿವರ ಹೀಗಿದೆ..

ವಿಜಯ – 2,830 ಕೆಜಿ

ಭೀಮ – 4,370 ಕೆಜಿ

ವರಲಕ್ಷ್ಮಿ – 3,020 ಕೆಜಿ

ಮಹೇಂದ್ರ – 4,530 ಕೆಜಿ

ಧನಂಜಯ – 4,940 ಕೆಜಿ

ಕಂಜನ್ – 4,240 ಕೆಜಿ

ಗೋಪಿ – 5,080 ಕೆಜಿ

suddiyaana