ಗಜಪಡೆಯ ಸೌಂದರ್ಯವತಿ ರೂಪ – ಮೊದಲ ಬಾರಿ ಜಂಬೂಸವಾರಿಗೆ ಬಂದ ಚೆಲುವೆ

ಮೈಸೂರು ದಸರೆಯಲ್ಲಿ ಈ ಬಾರಿ ಗಜಪಡೆ ನೋಡೋದೇ ಚೆಂದ. ಅಭಿಮನ್ಯು, ಭೀಮ, ಸುಗ್ರೀವ, ಬಳ್ಳೇಲಕ್ಷ್ಮೀ ಜೊತೆ ಮತ್ತೊಂದು ಆನೆ ಎಲ್ಲರನ್ನು ಆಕರ್ಷಿಸುತ್ತಿದ್ದಾಳೆ. ಈಕೆ ಗಜಪಡೆಯಲ್ಲಿರುವ ಚೆಂದುಳ್ಳಿ ಚೆಲುವೆ. ಹೆಸರಿಗೆ ತಕ್ಕಂತೆ ರೂಪವತಿ.
ಇದನ್ನೂ ಓದಿ: ಅಂದು ನರಹಂತಕ, ಇಂದು ಎಲ್ಲರ ಪ್ರೀತಿಯ ಸುಗ್ರೀವ – ಗಜಪಡೆಯ ಬಲಿಷ್ಠ ಆನೆ ಸುಗ್ರೀವನ ಕಥೆಯೇ ರೋಚಕ
ಇದೇ ಮೊದಲ ಬಾರಿಗೆ 44 ವರ್ಷ ರೂಪ ಆನೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ರೂಪ ಹೆಸರಿಗೆ ತಕ್ಕಂತೆ ರೂಪವತಿ. ತನ್ನ ಸೌಂದರ್ಯದಿಂದಲೇ ಎಲ್ಲರ ಮನಸೆಳೆಯುವ ಗಟ್ಟಿಗಿತ್ತಿ. ಸರ್ಕಸ್ ಕಂಪನಿಯಿಂದ 2016ರಲ್ಲಿ ಅರಣ್ಯ ಇಲಾಖೆ ಈಕೆಯನ್ನು ರಕ್ಷಿಸಿತ್ತು. ನಂತರ ಭೀಮನಕಟ್ಟೆ ಆನೆ ಶಿಬಿರಕ್ಕೆ ಈಕೆಯನ್ನು ಸ್ಥಳಾಂತರ ಮಾಡಲಾಗಿತ್ತು. ಈಗ ಆಕೆ ನಾಡಹಬ್ಬಕ್ಕಾಗಿ ಮೈಸೂರಿಗೆ ಆಗಮಿಸಿದ್ದು ಅನೇಕ ವರ್ಷಗಳ ನಂತರ ಮತ್ತೆ ನಾಡನ್ನು ನೋಡುತ್ತಿದ್ದಾಳೆ.
ರೂಪ ನಗರದ ವಾತಾವರಣ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಯಾವಾಗಲೂ ಇವಳದ್ದು ಶಾಂತ ಸ್ವಭಾವ. ಎರಡನೇ ಹಂತದ ಆನೆಗಳ ಜೊತೆ ಆಗಮಿಸಿದ ರೂಪ, ಅಭಿಮನ್ಯು ಅಂಡ್ ಟೀಮ್ ಎಲ್ಲಾ ಆನೆಗಳ ಜೊತೆ ತಾಲೀಮಿನಲ್ಲಿ ಯಾವುದೇ ಕಿರಿಕಿರಿ ಮಾಡದೇ ಭಾಗವಹಿಸುತ್ತಿದೆ. ರೂಪ ಆನೆ ಮಾವುತ ಮಂಜುನಾಥ ಹಾಗೂ ಕಾವಾಡಿ ಮಂಜು ಆರೈಕೆಯಲ್ಲಿ ಬೆಳೆಯುತ್ತಿದ್ದಾಳೆ. ಮಾವುತ ಹಾಗೂ ಕಾವಾಡಿಗಳ ನೆಚ್ಚಿನ ಆನೆಯಾಗಿದೆ.

ನೋಡಿರಿ

