ದಾಸ ಈಗ ಫಿಟ್ ಆಂಡ್ ಫೈನ್! – ಡೆವಿಲ್ ಶೂಟಿಂಗ್ ಮಧ್ಯೆ ದರ್ಶನ್ ರೇಂಜ್ ರೋವರ್ ಕಾರ್‌ನಲ್ಲಿ ಬಿಂದಾಸ್ ಡ್ರೈವಿಂಗ್

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ದರ್ಶನ್ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದು ಹೊರ ದಾಸ ಸಿನಿಮಾ ಶೂಟಿಂಗ್ ನಲ್ಲೂ ಭಾಗಿಯಾಗಿದ್ರು. ಆದ್ರೆ ಕೋರ್ಟ್ ವಿಚಾರಣೆಗೆ ಕರೆದಾಗ ಬೆನ್ನು ನೋವಿನ ಕಾರಣ ಕೊಟ್ಟು ಗೈರಾಗಿದ್ರು. ಆದ್ರೀಗ ದರ್ಶನ್ ಕಾರು ಓಡಿಸುತ್ತಿರೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಾಮಾಯಣಕ್ಕೆ ಬಂದ ಯಶ್ - 1 ತಿಂಗಳು ʼರಾವಣʼನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಾಕಿ ಭಾಯ್
ಹೌದು, ಜೈಲಿನಿಂದ ಬಂದ ಬಳಿಕ ದಾಸ ಫುಲ್ ಬ್ಯುಸಿಯಾಗಿದ್ದಾರೆ. ಫ್ಯಾಮಿಲಿ ಜೊತೆ ಒಂದಷ್ಟು ಟೈಮ್ ಸ್ಪೆಂಡ್ ಮಾಡಿದ್ರೆ, ಮತ್ತೊಂದು ಸಮಯ ಸಿನಿಮಾಗೆ ನೀಡ್ತಿದ್ದಾರೆ, ಜೈಲಿನಿಂದ ರಿಲೀಸ್ ಆಗ್ತಿದ್ದಂತೆ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ರು. ಇದೀಗ ಸಿನಿಮಾ ಶೂಟಿಂಗ್ ಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಈ ನಡುವೆ ದರ್ಶನ್ ಸ್ನೇಹಿತರ ರೇಂಜ್ ರೋವರ್ ಹೊಸ ಕಾರು ಓಡಿಸಿ ವಿರಾಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ದರ್ಶನ್ ಫಿಟ್ ಆಂಡ್ ಫೈನ್ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ.
ಇನ್ನು ‘ಡೆವಿಲ್’ ಸಿನಿಮಾದ ಮುಂದಿನ ಹಂತದ ಶೂಟಿಂಗ್ ಮೇ 7ರಿಂದ ಬೆಂಗಳೂರಿನ ಹೆಚ್‌ಎಎಲ್ ನಡೆಯಲಿದೆ. ಇದರಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ.