ರೇಣುಕಾಸ್ವಾಮಿ ಕೊ*ಲೆ  ಕೇಸ್‌ಗೆ ಬಿಗ್ ಟ್ವಿಸ್ಟ್ – ದಶರ್ನ್ ಬಗ್ಗೆ ಸತ್ಯ ಬಾಯಿ ಬಿಡೋಕೆ A14 ಪ್ರದೋಷ್ ರೆಡಿ  

ರೇಣುಕಾಸ್ವಾಮಿ ಕೊ*ಲೆ  ಕೇಸ್‌ಗೆ ಬಿಗ್ ಟ್ವಿಸ್ಟ್ – ದಶರ್ನ್ ಬಗ್ಗೆ ಸತ್ಯ ಬಾಯಿ ಬಿಡೋಕೆ A14 ಪ್ರದೋಷ್ ರೆಡಿ   

ರೇಣುಕಾಸ್ವಾಮಿ ಕೊಲೆ  ಕೇಸ್‌ಗೆ   ಪ್ರಕರಣದ 14ನೇ ಆರೋಪಿಯಾಗಿರೋ ಪ್ರದೋಷ್ ಕೇಸ್​ಗೆ ಬಿಗ್ ಟ್ವಿಸ್ಟ್​ ಕೊಟ್ಟಿದ್ದಾನೆ. ಈ ಕೊಲೆ ಪ್ರಕರಣದ ಎಲ್ಲಾ ಸತ್ಯ ಹೇಳುತ್ತೇನೆ. ಕ್ಷಮೆ ನೀಡುವಂತೆ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಎ 14 ಪ್ರದೋಷ್ ಪರ ವಕೀಲರು 59 ನೇ ಸಿಸಿಹೆಚ್ ಕೋರ್ಟ್​ಗೆ  ಅರ್ಜಿ ಸಲ್ಲಿಸಿದ್ದಾರೆ. ಪ್ರತ್ಯೇಕ ಜೈಲು ಕೊಠಡಿಯಿಂದ ಕೋರ್ಟ್ ಗೆ ಪ್ರದೋಷ್ ಹಾಜರುಪಡಿಸಲು ಮನವಿ ಮಾಡಲಾಗಿದೆ.

ದರ್ಶನ್ ಇರುವ ಕೊಠಡಿ ಬಿಟ್ಟು ಬೇರೆ ಜೈಲು ಕೊಠಡಿಯಿಂದ‌ ಹಾಜರುಪಡಿಸಲು ಮನವಿ ಮಾಡಿದ್ದು. ಮನವಿ ಸಲ್ಲಿಸಿದ ಪ್ರದೋಷ್ ಪರ ವಕೀಲರು  ಈ ಬಗ್ಗೆ ಪ್ರಾಸಿಕ್ಯೂಷನ್ ನಿಲುವು ತಿಳಿಸಲು ಕೋರ್ಟ್ ಸೂಚನೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​​ನ ಎ14 ಆಗಿರುವ ಆರೋಪಿ ಪ್ರದೋಶ್, ಪಟ್ಟಣಗೆರೆ ಶೆಡ್ ನಲ್ಲಿ ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದ್ದ ಎನ್ನುವ ಆರೋಪ ಆತನ ಮೇಲಿದೆ. ಅಷ್ಟೇ ಅಲ್ಲದೆ ದರ್ಶನ್ ಜೊತೆಗೆ ವ್ಯವಹಾರ ನಡೆಸಿರೋದು ಪೊಲೀಸ್​ ತನಿಖೆ ವೇಳೆ ಬಯಲಾಗಿದೆ.
ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ನೀಡಿದ್ದ ಪ್ರದೋಶ್. ಹಣ ಪಡೆದ ನಂತ್ರ ದೀಪಕ್ ಮೂಲಕ ವ್ಯವಹಾರ ಮಾಡಿಸಿದ್ದರಂತೆ ದರ್ಶನ್. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಭೇಟಿ ಮಾಡಿಸಿದ್ದು ಇದೇ ಪ್ರದೋಶ್ ಎನ್ನಲಾಗ್ತಿದೆ. ಸರೆಂಡರ್ ಆಗೋ ಆರೋಪಿಗಳನ್ನ ಮೈಸೂರಿನಲ್ಲಿ ದರ್ಶನ್ ನ ಭೇಟಿ ಮಾಡಿಸಿದ್ದ ಪ್ರದೋಶ್.  ಬಳಿಕ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಮಾಡಿಸಿದ್ದ ಎನ್ನಲಾಗ್ತಿದೆ.

Kishor KV

Leave a Reply

Your email address will not be published. Required fields are marked *