ಜೈಲಿನಲ್ಲಿ ಮಂಕಾದ ದರ್ಶನ್ ! – ಹೃದಯ ಚೂರಾಗಿದೆ ಎಂದು ವಿಜಯಲಕ್ಷ್ಮೀ ಪೋಸ್ಟ್!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ವಾಸ ಅನುಭವಿಸುಂತೆ ಆಗಿದೆ. ದಾಸ ಮತ್ತೆ ಜೈಲು ಸೇರ್ತಿದ್ದಂತೆ ಮಂಕಾಗಿದ್ದಾರೆ ಎನ್ನಲಾಗ್ತಿದೆ. ಇದೀಗ ಪತ್ನಿ ವಿಜಯಲಕ್ಷ್ಮೀ ಕೂಡ ಬೇಸರದಲ್ಲಿದ್ದಾರೆ. ಈ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ದರ್ಶನ್‌ಗೆ ಸ್ಟೇ ಸ್ಟ್ರಾಂಗ್ ಅಂತಾ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಮಳೆರಾಯನ ಆರ್ಭಟ – ವಿಮಾನ ನಿಲ್ದಾಣಕ್ಕೂ ನುಗ್ಗಿದ ಮಳೆ ನೀರು
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌ನನ್ನ ಬಿಡಿಸಿಕೊಂಡು ಬರಲು ವಿಜಯಲಕ್ಷ್ಮೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಪೊಲೀಸ್ ಸ್ಟೇಷನ್, ಕೋರ್ಟ್‌ಗೆ ಸಾಕಷ್ಟು ಬಾರಿ ಅಲೆದಾಡಿದ್ರು.. ಬಳಿಕ ದರ್ಶನ್‌ಗೆ ಜಾಮೀನು ಸಿಗುವಂತೆ ಮಾಡಿದ್ರು. ಮೊನ್ನೆಯವರೆಗೂ ಪತಿ ದರ್ಶನ್ ಜೊತೆ ವಿಜಯಲಕ್ಷ್ಮೀ ಅವರು ಹೆಚ್ಚಿನ ಸಮಯ ಕಳೆದಿದ್ದರು. ರಾಜಸ್ಥಾನ ಹಾಗೂ ವಿದೇಶದಲ್ಲಿ ‘ಡೆವಿಲ್’ ಸಿನಿಮಾ ಶೂಟಿಂಗ್ ಇದ್ದಾಗಲೂ ಕೂಡ ಅಲ್ಲಿ ವಿಜಯಲಕ್ಷ್ಮೀ ಅವರು ಹೋಗಿದ್ದರು. ಕಾಮಖ್ಯ ದೇವಾಲಯಕ್ಕೂ ಜೊತೆಯಾಗಿ ಭೇಟಿ ನೀಡಿದ್ದರು. ಹೊಸಕೆರೆಹಳ್ಳಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮೀ ಮನೆ ಇದ್ದರೆ, ಆರ್ ಆರ್ ನಗರದಲ್ಲಿ ದರ್ಶನ್ ಮನೆಯಿದೆ. ಜೈಲಿಗೆ ಹೋಗಿ ಬಂದಾಗಿನಿಂದ ದರ್ಶನ್ ಅವರು ಪತ್ನಿ ಜೊತೆಗೆ ಇದ್ದಿದ್ದೇ ಜಾಸ್ತಿ. ಈಗ ಮತ್ತೆ ದರ್ಶನ್ ಜೈಲಿಗೆ ಹೋಗಿದ್ದು, ವಿಜಯಲಕ್ಷ್ಮೀ ಮನಸ್ಸು ಕದಲಿಸಿದೆ. ಇದೀಗ ವಿಜಯಲಕ್ಷ್ಮಿ ಒಡೆದ ಹೃದಯದ ಎಮೋಜಿಯನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಫಾರಂ ಹೌಸ್‌ನಲ್ಲಿ ದರ್ಶನ್ ತಾವು ಸಾಕಿದ ಪ್ರಾಣಿಗಳ ನಡುವೆ ವಾಕಿಂಗ್ ಮಾಡುತ್ತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಫ್ಯಾನ್‌ಗಳು ʼಸ್ಟೇ ಸ್ಟ್ರಾಂಗ್ʼ ಎಂದು ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬಿದ್ದಾರೆ.
ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ಹೃದಯ ಒಡೆದಿದೆ ಎಂದು ಅರ್ಥ ಕೊಡುವ ಇಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಅವರು ಜೈಲಿಗೆ ಹೋಗಿರೋದು ಬೇಸರ ತಂದಿದೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗಲೂ ಅವರು ವಾರಕ್ಕೊಮ್ಮೆ ಜೈಲಿಗೆ ಹೋಗಿ ಗಂಡನನ್ನು ನೋಡಿಕೊಂಡು ಬರುತ್ತಿದ್ದರು.

ನೋಡಿರಿ

