ಕೋರ್ಟ್‌ನಲ್ಲಿ ಇಂದು ದರ್ಶನ್ ಭವಿಷ್ಯ ನಿರ್ಧಾರ – ಥಾಯ್ಲೆಂಡ್‌ನಿಂದ ದಾಸ ವಾಪಸ್ ಬರೋದು ಯಾವಾಗ?

ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಥೈಲಾಂಡ್‌ನಲ್ಲಿ ದಾಸ ಸದ್ಯ ಮೂಡ್‌ನಲ್ಲಿದ್ದಾರೆ. ಮತ್ತೊಂದ್ಕಡೆ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಇದನ್ನೂ ಓದಿ: ರಿಷಭ್ ಪಂತ್ ಕಾಲಲ್ಲಿ ಹರಿಯಿತು ರಕ್ತ – ಕಣ್ಣೀರಿಡುತ್ತಲೇ ಹೊರ ನಡೆದ ಪಂತ್ ಮತ್ತೆ ಆಡ್ತಾರಾ?
ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ರು. ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಸಾಂಗ್ ಶೂಟಿಂಗ್‌ಗಾಗಿ ದಾಸ ಥೈಲಾಂಡ್‌ಗೆ ತೆರಳಿದ್ದು, ಹಾಡಿನ ಚಿತ್ರೀಕರಣ ಮುಗಿದಿದ್ದು ಸಿನಿಮಾ ತಂಡ ವಾಪಸ್ಸಾಗಿದೆ. ಆದ್ರೆ ದರ್ಶನ್ ಫುಕೆಟ್ ಪಟ್ಟಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪತ್ನಿ ಮಗನ ಜೊತೆ ರಿಲ್ಯಾಕ್ಸ್ ಆಗಲೆಂದು ಚಿತ್ರೀಕರಣದ ಬಳಿಕವೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ಆದ್ರೀಗ ದರ್ಶನ್ ಭವಿಷ್ಯ ಇಂದು ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ. ಒಂದುವೇಳೆ ಜಾಮೀನು ರದ್ದಾದ್ರೂ ಅಥವಾ ಜಾಮೀನು ಮುಂದುವರೆದರೂ ದರ್ಶನ್ ಮಾತ್ರ ಬೆಂಗಳೂರಿಗೆ ವಾಪಸ್ ಬರಲೇಬೇಕು.
ಇದೀಗ ದರ್ಶನ್ ಥಾಯ್ಲೆಂಡ್‌ನಿಂದ ವಾಪಸ್ ಬರುವ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಇದೀಗ ಜುಲೈ 25ಕ್ಕೆ ದರ್ಶನ್ ಬೆಂಗಳೂರಿಗೆ ವಾಪಸ್ಸಾಗುವ ದಿನಾಂಕ ಫಿಕ್ಸ್ ಆಗಿದೆ. ಇಂದು ಹೊರಬೀಳಲಿರುವ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಕೊಲೆ ಆರೋಪಿ ದರ್ಶನ್ ತಾತ್ಕಾಲಿಕ ನೆಮ್ಮದಿ ನಿರ್ಧಾರವಾಗುತ್ತೆ.

ನೋಡಿರಿ

