ಕೋರ್ಟ್‌ಗೆ ಚಕ್ಕರ್..‌ ಸಿನಿಮಾಗೆ ಹಾಜರ್!‌ – ವಿಚಾರಣೆ ತಪ್ಪಿಸಲು ನಟ ದರ್ಶನ್‌ ಸುಳ್ಳು ಹೇಳಿದ್ರಾ?

ಕೋರ್ಟ್‌ಗೆ ಚಕ್ಕರ್..‌ ಸಿನಿಮಾಗೆ ಹಾಜರ್!‌ – ವಿಚಾರಣೆ ತಪ್ಪಿಸಲು ನಟ ದರ್ಶನ್‌ ಸುಳ್ಳು ಹೇಳಿದ್ರಾ?

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ ಬೇಲ್‌ ಮೂಲಕ ಹೊರ ಬಂದಿದ್ದಾರೆ. ಇತ್ತೀಚೆಗೆ ಶೂಟಿಂಗ್‌ ನಲ್ಲೂ ಭಾಗಿಯಾಗಿದ್ರು. ಆದ್ರೆ ಕೋರ್ಟ್‌ ವಿಚಾರಣೆಗೆ ಮಾತ್ರ ಬೆನ್ನು ನೋವಿನ ಕಾರಣ ನೀಡಿ ಗೈರಾಗಿದ್ದ ದರ್ಶನ್‌ ಸಿನಿಮಾ ನೋಡಲು ಬಂದಿದ್ದಾರೆ. ಇದೀಗ ದರ್ಶನ್‌ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್​ಗೆ ಗೆಲುವು – ಪಾಯಿಂಟ್ಸ್​ ಪಟ್ಟಿಯಲ್ಲಿ No.1ಸ್ಥಾನ ಪಡೆದ GT

ಏ.8 ರಂದು ದರ್ಶನ್‌ 57ನೇ ಸಿಸಿಹೆಚ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್‌ಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದ್ದರು. ಈ ವೇಳೆ ನ್ಯಾಯಾಧೀಶರು ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೀಗ ದರ್ಶನ್‌ ಗೆಳೆಯನ ಸಿನಿಮಾ ನೋಡಲು ಬಂದಿದ್ದಾರೆ. ಧನ್ವೀರ್‌ ಅಭಿನಯದ ವಾಮನ  ಸಿನಿಮಾವನ್ನು ವೀಕ್ಷಿಸಿದ್ದಾರೆ.

ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಈ ಶೋ ವೀಕ್ಷಿಸಲು ದರ್ಶನ್‌ ರಾತ್ರಿ 8 ಗಂಟೆಯ ವೇಳೆಗೆ ಮಾಲ್‌ಗೆ ಆಗಮಿಸಿದ್ದರು. ಬೆನ್ನು ನೋವನ್ನು ಲೆಕ್ಕಿಸದೇ ಆಪ್ತನ ಸಿನಿಮಾವನ್ನು ದರ್ಶನ್‌ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ಬೆನ್ನು ನೋವಿದ್ರೆ ಹೆಚ್ಚು ಸಮಯ ಕೂರಲು ಸಾಧ್ಯವಾಗಲ್ಲ. ಆದ್ರೆ ದರ್ಶನ್‌ ಮೂರು ಗಂಟೆ  ಸಿನಿಮಾ ಹೇಗೆ ನೋಡಿದ್ರು? ಕೋರ್ಟ್‌ ವಿಚಾರಣೆಯಿಂದ ತಪ್ಪಿಸಲು ದರ್ಶನ್‌ ಬೆನ್ನು ನೋವಿನ ಕಾರಣ ನೀಡಿದ್ರಾ ಅನ್ನೋ ಪ್ರಶ್ನೆ ಕಾಡ್ತಿದೆ.

Shwetha M

Leave a Reply

Your email address will not be published. Required fields are marked *