ವಾಸಿಯಾಗದ ಬೆನ್ನು ನೋವು – ಆಪರೇಷನ್ಗೆ ಒಪ್ಪಿಗೆ ಕೊಟ್ಟ ದಾಸ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಬೇಲ್ ಪಡೆದಿದ್ದ ದರ್ಶನ್ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹೀರೋ – ಖಳನಾಯಕ ಈ ಇಬ್ಬರಲ್ಲಿ ವ್ಯತ್ಯಾಸ ಇಷ್ಟೇ! – ಕ್ಯಾಪ್ಟನ್ ರಜತ್ ಗೆ ಕಿಚ್ಚನ ಪತ್ರ
ಮೈಸೂರಿನ ಆಸ್ಪತ್ರೆಯೊಂದರಲ್ಲಿ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆಯ ದರ್ಶನ್‍ಗೆ ಆಪರೇಷನ್ ಫಿಕ್ಸ್ ಆಗಿದೆ ಎಂದು ಹೇಳಲಾಗ್ತಿದೆ. ಅಪರೇಷನ್ ಮಾಡಿದ ಒಂದೂವರೆ ತಿಂಗಳು ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ದರ್ಶನ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಅಜಯ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ಅಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆಪರೇಷನ್ ಬಳಿಕ 3 ದಿನ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಈಗ ದರ್ಶನ್ ವರ್ಕೌಟ್ ಶುರು ಮಾಡಿದ್ದಾರೆ. ಆದರೆ ಅಪ್ಪರ್ ಬಾಡಿ, ಲೋಯರ್ ಬಾಡಿ ವರ್ಕೌಟ್ ಮಾಡಲು ಬಿಟ್ಟಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.