ದರ್ಶನ್‌ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್‌ ರಿಲೀಫ್‌

ದರ್ಶನ್‌ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್‌ ರಿಲೀಫ್‌

ಸ್ಯಾಂಡಲ್‌ ವುಡ್‌ ನಟ ದರ್ಶನ್‌ ಕೊಲೆ ಕೇಸ್‌ ನಲ್ಲಿ ಜೈಲು ಸೇರಿ ನಾಲ್ಕು ತಿಂಗಳೇ ಕಳೆದಿದೆ.. ಹೊರ ಬರಲು ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದಾರೆ.. ಆದ್ರೆ ಇದ್ರ ಜೊತೆಗೆ ನಟ ಬೆನ್ನು ನೋವಿನಿಂದಲೂ ಬಳಲುತ್ತಿದ್ದಾರೆ. ಇದ್ರಿಂದಾಗಿ ದರ್ಶನ್‌ ಸಾಕಷ್ಟು ಕುಗ್ಗಿ ಹೋಗಿದ್ರು.. ಇದೀಗ  ಬೆನ್ನು ನೋವಿನಿಂದ ಬಳಲುತ್ತಿದ್ದ ನಟನಿಗೆ ಕೊಂಚ ರಿಲೀಫ್‌ ಸಿಕ್ಕಿದೆ.. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್​ಗೆ ಫಿಜಿಯೋ ಥೆರಪಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿರೋ ದರ್ಶನ್‌ಗೆ ಬಿಗ್ ಶಾಕ್ – ಹೊಸ ಕೇಸ್‌, D ಬಾಸ್‌ ಕತೆ ಖತಂ!

ಶುಕ್ರವಾರ (ಅಕ್ಟೋಬರ್ 19) ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ ಚಿಕಿತ್ಸೆ ಕೊಡಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್​ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್​ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿದೆ.

ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ದರ್ಶನ್ ಅವರ ದೇಹವನ್ನು ಸ್ಕ್ಯಾನಿಂಗ್ ಮಾಡಿದ್ದರು. ಈ ವೇಳೆ ಸರ್ಜರಿ ಹಾಗೂ ಫಿಜಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಸದ್ಯ ಸರ್ಜರಿಯನ್ನು ಅವರು ಬೆಂಗಳೂರಿಗೆ ಹೋಗಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಫಿಜಿಯೋಥೆರೆಪಿ ಆರಂಭಿಸಲಾಗಿದೆ.

ದರ್ಶನ್​ಗೆ ಬುಧವಾರವೇ ಫಿಜಿಯೋಥೆರೆಪಿ ಆರಂಭ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಫಿಜಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ. ಈಗ ಅವರು ಫಿಜಿಯೋಥೆರೆಪಿ ಮಾಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್​ಗಳನ್ನು ಕೊಡಲಾಗಿದೆ.

ದರ್ಶನ್ ಅವರು ಜಾಮೀನು ನೀಡಬೇಕು ಎಂದು ಕೆಳ ಹಂತದ ಕೋರ್ಟ್​ನಲ್ಲಿ ಕೋರಿದ್ದರು. ಆದರೆ, ಇದಕ್ಕೆ ಕೋರ್ಟ್ ಒಪ್ಪಿಗೆ ಕೊಟ್ಟಿಲ್ಲ. ದರ್ಶನ್ ಅವರ ಜಾಮೀನು ಅರ್ಜಿ ವಜಾ ಆಗಿದೆ. ಈ ಬೆನ್ನಲ್ಲೇ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *