ಸ್ವಾಮಿಯನ್ನ ಒದ್ದು ಕೊಂದಿದ್ದೇ ದರ್ಶನ್ – ಪತ್ನಿ ಗರ್ಭಿಣಿ ಅಂದ್ರೂ ಬಿಡ್ಲಿಲ್ವಾ ನಟ?
ಪವಿತ್ರಾಗಾಗಿ ಕೀಳು ಮಟ್ಟಕ್ಕಿಳಿದ್ರಾ ಡಿಬಾಸ್ ?

ಸ್ವಾಮಿಯನ್ನ ಒದ್ದು ಕೊಂದಿದ್ದೇ ದರ್ಶನ್ – ಪತ್ನಿ ಗರ್ಭಿಣಿ ಅಂದ್ರೂ ಬಿಡ್ಲಿಲ್ವಾ ನಟ?ಪವಿತ್ರಾಗಾಗಿ ಕೀಳು ಮಟ್ಟಕ್ಕಿಳಿದ್ರಾ ಡಿಬಾಸ್ ?

ಸ್ಯಾಂಡಲ್​ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಒಂಥರಾ ಕಾಂಟ್ರವರ್ಸಿ ಸೆಲೆಬ್ರಿಟಿ ಅಂದ್ರುನೂ ತಪ್ಪಾಗಲ್ಲ. ಬಟ್ ಈ ಸಲ ನಟನಿಗೆ ಸುತ್ತಿಕೊಂಡಿರೋ ಆರೋಪ ಇಡೀ ಕರ್ನಾಟಕ ಚಿತ್ರರಂಗವನ್ನೇ ನಡುಗಿಸಿದೆ. ಅದೂ ಕೂಡ ಕೊಲೆ ಕೇಸ್​. ಪವಿತ್ರಾಗೌಡ ಅವ್ರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್, ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನ ಭೀಕರವಾಗಿ ಕೊಂದು ಮೋರಿಗೆ ಬಿಸಾಕಿರೋ ಆರೋಪದಲ್ಲಿ ದರ್ಶನ್​ ಲಾಕ್ ಆಗಿದ್ದಾರೆ. ಬಟ್ ಈ ಕೊಲೆ ಕೇಸ್​ನ ತನಿಖೆ ವೇಳೆ ಬೆಚ್ಚಿ ಬೀಳಿಸೋ ಮಾಹಿತಿಗಳೂ ಹೊರ ಬಂದಿವೆ. ದರ್ಶನ್ ಅವ್ರೇ ಕೊಲೆ ಮಾಡಿದ್ರಾ? ಕೇಸ್ ಮುಚ್ಚಿ ಹಾಕೋಕೆ ಏನೆಲ್ಲಾ ಮಾಡಿದ್ರು? ಈ ಕೇಸ್​ನಲ್ಲಿ ಪವಿತ್ರಾಗೌಡ ಕೂಡ ಇನ್ವಾಲ್ವ್ ಆಗಿದ್ರಾ? ಬೆಂಗಳೂರಿಂದ ಮೈಸೂರಿಗೆ ಹೋಗಿದ್ದೇಕೆ ದರ್ಶನ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಹೊಸ ಲೋಕ ತೆರೆದಿಟ್ಟ Kalki – ವಿಶ್ವದ ಮೊದಲ, ಕೊನೆಯ ನಗರ ಕಾಶಿ

ದರ್ಶನ್.. ಡಿ ಬಾಸ್.. ದಚ್ಚು.. ಸ್ಯಾಂಡಲ್​ವುಡ್​ನ ಮಾಸ್ ಹೀರೋ ಅಂತಾನೇ ಕರೆಸಿಕೊಳ್ಳೋ ದರ್ಶನ್​ಗೆ ಇರೋ ಫ್ಯಾನ್ ಬೇಸ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ಪ್ರತೀ ಸಲ ದರ್ಶನ್ ಬಗ್ಗೆ ಯಾವುದಾದ್ರೂ ವಿವಾದಗಳು ಉಂಟಾದಾಗ ಕರ್ನಾಟಕದ ಕೋಟ್ಯಂತರ ಅಭಿಮಾನಿಗಳು ದರ್ಶನ್ ಪರ ನಿಲ್ತಾರೆ. ನಮ್ಮ ಬಾಸ್ ಅಂತಾ ಸಪೋರ್ಟ್ ಮಾಡ್ತಾರೆ. ಬಟ್ ಈ ಸಲ ದರ್ಶನ್ ಸಿಲುಕಿರೋದು ಮರ್ಡರ್ ಕೇಸ್​ನಲ್ಲಿ. ಅದೂ ಕೂಡ ತಮ್ಮ ಗೆಳತಿ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ. ಸದ್ಯ ಪೊಲೀಸರ ವಶದಲ್ಲಿರೋ ದರ್ಶನ್ ವಿರುದ್ಧ ಸಾಲು ಸಾಲು ಆರೋಪಗಳಿವೆ.

ಪವಿತ್ರಾಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಹತ್ಯೆ!

ಪವಿತ್ರಾ ಗೌಡ ಹಾಗೂ ದರ್ಶನ್ ನಡುವಿನ ಸಂಬಂಧ ಎಂಥಾದ್ದು ಅನ್ನೋದು ಎಲ್ರಿಗೂ ಗೊತ್ತೇ ಇದೆ. ಪವಿತ್ರಾ ಕೂಡ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  ಬಟ್ ಇದಾದ ಬಳಿಕ ಫ್ಯಾಮಿಲಿ ಹಾಗೇ ಪವಿತ್ರಾ ವಿಚಾರವಾಗಿ ಸಾಕಷ್ಟು ವಿವಾದಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಪವಿತ್ರಾಗೆ ದರ್ಶನ್ ಸಂಸಾರವನ್ನ ಹಾಳು ಮಾಡಿದೆ ಅಂತೆಲ್ಲಾ ಕಮೆಂಟ್ಸ್ ಬರ್ತಿತ್ತು. ಇದೇ ವಿಚಾರವಾಗಿ ರೇಣುಕಾಸ್ವಾಮಿ ಎಂಬಾತ ಕೂಡ ಪವಿತ್ರಾಗೆ ಅಶ್ಲೀಲವಾಗಿ ಮೆಸೇಜ್ ಮಾಡಿರೋ ಆರೋಪ ಇದೆ. ಪದೇ ಪದೇ ಪವಿತ್ರಾ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡೋದು, ಫೋಟೋ ಕಳಿಸೋದು ಮಾಡ್ತಿದ್ನಂತೆ. ಇದ್ರಿಂದ ಸಿಟ್ಟಾದ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದೆ.

ಕಾಮಾಕ್ಷಿಪಾಳ್ಯದ ಶೆಡ್ ನಲ್ಲಿ ಕೂಡಿ ಹಾಕಿ ಕೊಲೆ!

ಮೊದಲು ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಘಟನೆ ಅಧ್ಯಕ್ಷನನ್ನ ಸಂಪರ್ಕಿಸಿ ದರ್ಶನ್ ರೇಣುಕಾಸ್ವಾಮಿ ಬಗ್ಗೆ ಮಾಹಿತಿ ಪಡೆದಿದ್ರು. ಬಳಿಕ ಆತನನ್ನ ಬೆಂಗಳೂರಿಗೆ ಕರೆ ತರುವಂತೆ ಸೂಚನೆ ನೀಡಿದ್ರು. ಜೂನ್ 8ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಇರಿಸಿ ಹಲ್ಲೆ ಮಾಡಲಾಗಿದೆ.  ಈ ಕೊಲೆಯನ್ನು ನಟ ದರ್ಶನ್ ಸೂಚನೆ ಮೇರೆಗೆ ಮಾಡಲಾಗಿದೆ ಎನ್ನುವ ಆರೋಪ ಇದೆ. ಅಲ್ದೇ ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರೋ ಆರೋಪ ಇದೆ. ದರ್ಶನ್ ಸೂಚನೆಯಂತೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಹಾಗೇ ಪವಿತ್ರಾಗೌಡ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ.

ಕೊಲೆ ಮುಚ್ಚಿ ಹಾಕಲು ಹಣಕಾಸಿನ ಕಥೆ ಕಟ್ಟಿದ್ರಾ?

ಈ ಕೇಸ್​ನಲ್ಲಿ ಮತ್ತೊಂದು ಮೇಜರ್ ಟ್ವಿಸ್ಟ್ ಅಂದ್ರೆ ಕೊಲೆ ಪ್ರಕರಣವನ್ನ ಮುಚ್ಚಿ ಹಾಕೋಕೆ ಭರ್ಜರಿ ಪ್ಲ್ಯಾನ್ ಅನ್ನೇ ಮಾಡಿಕೊಂಡಿದ್ದಾರೆ. ಕೊಲೆ ಬಳಿಕ ಮೋರಿಗೆ ಶವ ಬಿಸಾಕಿ ಎಲ್ರೂ ಕೂಡ ಎಸ್ಕೇಪ್ ಆಗಿದ್ರು. ಬಟ್ ಮೋರಿಯಲ್ಲಿ ಶವ ಪತ್ತೆಯಾದ ಬಳಿಕ ಪೊಲೀಸರು ತನಿಖೆ ನಡೆಸ್ತಿರೋದು ಗೊತ್ತಾಗಿದೆ. ಇದಾದ ಮೇಲೆ ಮೂವರು ವ್ಯಕ್ತಿಗಳು ಸೀದಾ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ನಾವೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ನಮ್ಮ ನಡುವೆ ಜಗಳ ನಡೆದಿತ್ತು. ಅದಕ್ಕೇ ಕೊಲೆ ಮಾಡಿ ಶವ ಬಿಸಾಕಿದ್ವಿ ಅಂದಿದ್ದಾರೆ. ಬಟ್ ಪೊಲೀಸರಿಗೆ ಡೌಟ್ ಶುರುವಾಗಿದೆ. ಹೀಗಾಗಿ ಒಬ್ಬೊಬ್ಬರನ್ನೂ ಒಂದೊಂದು ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಎಷ್ಟು ಹಣದ ವ್ಯವಹಾರ, ಎಷ್ಟು ದಿನದಿಂದ ಪರಿಚಯ, ಯಾವಾಗ ಕೊಟ್ಟಿದ್ರೆ ಎಂಬೆಲ್ಲಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಮೂವರೂ ಕೂಡ ಒಂದೊಂದು ರೀತಿ ಉತ್ತರ ಕೊಟ್ಟಿದ್ದಾರೆ. ಇದ್ರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ಬೆಂಡೆತ್ತಿದಾಗ ಅಸಲಿ ಸತ್ಯಾಂಶ ಬಾಯ್ಬಿಟ್ಟಿದ್ದಾರೆ. ದರ್ಶನ್ ಸೂಚನೆ ಮೇರೆಗೆ ಕೊಲೆ ಪ್ರಕರಣದಲ್ಲಿ ಶರಣಾಗಿದ್ದಾಗಿ ಹೇಳಿದ್ದಾರೆ.

ಮೆಡಿಕಲ್ ಫಾರ್ಮಸಿಯಲ್ಲಿ ಕೆಲಸ.. ಪತ್ನಿ ಗರ್ಭಿಣಿ!

ಅಷ್ಟಕ್ಕೂ ಕೊಲೆಯಾದ ರೇಣುಕಾಸ್ವಾಮಿ ಯಾರು ಅಂದ್ರೆ ಆತ ಚಿತ್ರದುರ್ಗ ಮೂಲದವರು. ಅಪೋಲೋ ಮೆಡಿಕಲ್​ನಲ್ಲಿ ರೇಣುಕಾಸ್ವಾಮಿ ಕೆಲಸ ಮಾಡ್ತಿದ್ದರು. ತಂದೆ ಬೆಸ್ಕಾನಲ್ಲಿ ಕೆಲಸ ನಿರ್ವಹಿಸಿ ರಿಟೈರ್ಡ್ ಆಗಿದ್ದರು. ವರ್ಷದ ಹಿಂದಷ್ಟೇ ರೇಣುಕಾಸ್ವಾಮಿ ಮದುವೆಯಾಗಿದ್ದ ಪತ್ನಿ ಗರ್ಭಿಣಿ ಎನ್ನಲಾಗಿದೆ. ಈ ನಡುವೆ ಶನಿವಾರ ಎಂದಿನಂತೆ ಮನೆಯಿಂದ ಹೊರ ಹೋದ  ರೇಣುಕಾಸ್ವಾಮಿ ನಾಪತ್ತೆಯಾಗಿದ್ರು. ಶನಿವಾರವೇ ದರ್ಶನ್ ಸಂಘಟನೆಯ ಕೆಲವರು ಬೆಂಗಳೂರಿಗೆ ಕರೆ ತಂದು ಶೆಡ್​ನಲ್ಲಿ ಇರಿಸಿದ್ರು. ಈ ವೇಳೆ ದರ್ಶನ್ ಹಾಗೇ ಪವಿತ್ರಾಗೌಡ ಇಬ್ಬರೂ ಕೂಡ ಬಂದಿದ್ದಾರೆ. ಎಲ್ಲರ ಮುಂದೆಯೇ ಚೆನ್ನಾಗಿ ಥಳಿಸಿದ್ದಾರೆ. ದರ್ಶನ ಸಹ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಬಳಿಕ ದರ್ಶನ್ ಮುಂದೆ ಮೂವರು ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ಬಳಿಕ ಚರಂಡಿಗೆ ಬಿಸಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಿಸ್ಸಿಂಗ್ ಕಂಪ್ಲೇಂಟ್​ದಾಖಲಾಗಿತ್ತು. ಇತ್ತ ಕಾಮಾಕ್ಷಿಪಾಳ್ಯದ ಮೋರಿಯಲ್ಲಿ 30 ರಿಂದ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಪೊಲೀಸರು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರ ವರದಿ ಪಡೆದಿದ್ದರು. ಮುಖ, ತಲೆ ಹಾಗೂ ಕಿವಿಗೆ ತೀವ್ರವಾದ ಹಲ್ಲೆಯಾಗಿರೋದು ತಿಳಿದುಬಂದಿತ್ತು. ಬಳಿಕ ಮೃತದೇಹ ರೇಣುಕಸ್ವಾಮಿಯದ್ದೇ ಅನ್ನೋದು ಗೊತ್ತಾಗಿತ್ತು.

ವಿವಾಹೇತರ ಸಂಬಂಧದಿಂದಲೇ ದರ್ಶನ್ ಜೈಲಿಗೆ!

ನಟ ದರ್ಶನ್ ಹಾಗೇ ಪವಿತ್ರಾಗೌಡ ಸಂಬಂಧದ ವಿಚಾರವಾಗಿ ಸಾಕಷ್ಟು ಕಾಂಟ್ರವರ್ಸಿಗಳು ನಡೆದಿದ್ವು. ಅಷ್ಟೇ ಯಾಕೆ ಪವಿತ್ರಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲೇ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು. ದರ್ಶನ್ ಫ್ಯಾನ್ಸ್ ಕೂಡ ಈ ವಿಚಾರದಲ್ಲಿ ಭೇಸರಗೊಂಡಿದ್ರು. ಬಟ್ ಈ ಸಲ ಈ ವಿವಾದ ಇನ್ನೂ ಒಂದು ಹಂತಕ್ಕೆ ಮೇಲೆ ಹೋಗಿ ಮರ್ಡರ್ ಕೂಡ ಆಗಿದೆ. ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ, ಕಾಮೆಂಟ್ ಮಾಡುತ್ತಿದ್ದ ಹಾಗೂ ವಿಡಿಯೋ ಫೋಟೋ ಕೂಡ ಕಳುಹಿಸುತ್ತಿದ್ದ ಎನ್ನುವ ಆರೋಪದ ಮೇಲೆ ದರ್ಶನ್ ಅವರು ರೇಣುಕಾಸ್ವಾಮಿಯನ್ನ ಕಿಡ್ಮ್ಯಾನ್ ಮಾಡಿ ಹಲ್ಲೆ ಮಾಡಿ ಕೊಂದಿರೋ ಆರೋಪ ಕೇಳಿ ಬಂದಿದೆ.

ಸದ್ಯ ಕೊಲೆ ಹಿಂದೆ ದರ್ಶನ್ ಕೈವಾಡವಿದ್ದು, ಮೈಸೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಒದಗಿಸಲಾಗಿದೆ. ಪವಿತ್ರಾಗೌಡ ಅವ್ರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏನೇ ಹೇಳಿ. ದರ್ಶನ್ ಕನ್ನಡ ಚಿತ್ರರಂಗದ ಒಬ್ಬ ಒಳ್ಳೇ ಕಲಾವಿದ. ಆದ್ರೆ ಸಿನಿಮಾಗಳಿಗಿಂದ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡ್ತಿದ್ದಾರೆ. ಅದ್ರಲ್ಲೂ ಇದೀಗ ಕೊಲೆ ಹಂತಕ್ಕೆ ಹೋಗಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹಾಗೇನಾದ್ರೂ ಕೆಟ್ಟದಾಗಿ ಕಮೆಂಟ್ ಮಾಡಿದ್ದೇ ಆಗಿದ್ರೆ ಕಾನೂನಿನ ಮೂಲಕ ಶಿಕ್ಷೆ ಕೊಡಿಸಬಹುದಿತ್ತು. ಅದನ್ನ ಬಿಟ್ಟು ಈ ರೀತಿ ದಾರಿ ಹಿಡಿದಿದ್ದು ನಿಜಕ್ಕೂ ಶಾಕಿಂಗ್ ವಿಚಾರ. ಒಟ್ಟಾರೆ ಹೈಪ್ರೊಫೈಲ್ ಕೇಸ್ ಆಗಿರೋದ್ರಿಂದ ಪೊಲೀಸರು ಕೂಡ ನಿಸ್ಟಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಿದೆ. ಹಾಗೇನಾದ್ರೂ ದರ್ಶನ್ ಪಾತ್ರ ಇಲ್ಲ ಅನ್ನೋದೇ ಆದ್ರೆ ಖಂಡಿತ ಆರೋಪಗಳಿಂದ ಹೊರ ಬರ್ತಾರೆ. ಇಲ್ದಿದ್ರೆ ಕಾನೂನಿನಲ್ಲಿ ಏನು ಶಿಕ್ಷೆ ಇದಿಯೋ ಅದನ್ನ ಅನುಭವಿಸಲೇಬೇಕು. ಸೋ ಇಲ್ಲಿ ದರ್ಶನ್ ಫ್ಯಾನ್ಸ್ ಕೂಡ ಒಂದನ್ನ ಅರ್ಥ ಮಾಡಿಕೊಳ್ಳಬೇಕು. ದರ್ಶನ್ ವಿರುದ್ಧ ಬಂದಿರೋದು ಗಂಭೀರ ಆರೋಪ. ಅದೂ ಕೂಡ ಕೊಲೆ ಪ್ರಕರಣ. ಸೋ ಇಂಥಾ ವಿಚಾರಗಳಲ್ಲಿ ಅವ್ರ ಮನೆ ಬಳಿ ಹೋಗೋದು, ದರ್ಶನ್ ಕೊಲೆ ಮಾಡಿಲ್ಲ ಅನ್ನೋದೆಲ್ಲಾ ಬೇಡ. ಯಾಕಂದ್ರೆ ಇಂಥಾ ದೊಡ್ಡ ಸೆಲೆಬ್ರಿಟಿಯನ್ನ ಸುಖಾಸುಮ್ಮನೆ ಅರೆಸ್ಟ್ ಮಾಡೋಲ್ಲ. ಸೋ ನೀವು ಕೂಡ ತನಿಖೆ ಮುಗಿಯೋವರೆಗೂ ಕಾನೂನು ತನಿಖೆಗೆ ತೊಡಕಾಗದಂತೆ ವರ್ತಿಸಬೇಕಿದೆ.

Shwetha M