ದಸರಾಗೆ ಡೆವಿಲ್ ರಿಲೀಸ್? – ದರ್ಶನ್ ಮುಂದಿನ ಚಿತ್ರ ರಕ್ಷಿತಾ ಪ್ರೇಮ್ ಜೊತೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಆಚೆ ಬಂದ ಬಳಿಕ ಫುಲ್ ಆಕ್ಟಿವ್ ಆಗಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲೂ ಬ್ಯುಸಿಯಾಗಿರೋ ದಾಸ.. ಫ್ರೀ ಟೈಮ್‌ನಲ್ಲಿ ಪತ್ನಿ ವಿಜಯಲಕ್ಷ್ಮೀ ಜೊತೆ ಟೆಂಪಲ್ ರನ್ ಮಾಡ್ತಿದ್ದಾರೆ.. ಇದೀಗ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗಿದ್ದಾರೆ. ಆದ್ರೀಗ ಡೆವಿಲ್ ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ದರ್ಶನ್ ಫ್ಯಾನ್ಸ್‌ಗೆ ಕಾಡ್ತಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ವರುಣನ ಶಾಕ್ – ನಿರಂತರ ಮಳೆ.. ಪ್ರವಾಹಕ್ಕೆ ನಲುಗಿ ಹೋದ ಪಾಕ್
ಕಾಟೇರ ಸಿನಿಮಾ ಸಕ್ಸಸ್ ನಂತ್ರ ಕೈತುಂಬಾ ಸಿನಿಮಾಗಳನ್ನ ಒಪ್ಪಿಕೊಂಡಿದ್ದ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ರು.. 6 ತಿಂಗಳ ಕಾಲ ಸೆರೆವಾಸದಲ್ಲಿದ್ದಿದ್ರಂದ ದಾಸ ಕ್ಯಾಮೆರಾದಿಂದ ಹಿಂದೆ ಸರಿಯೋ ಹಾಗಾಯ್ತು. ಇದ್ರಿಂದ ಒಪ್ಪಿಕೊಂಡಿದ್ದ ಸಿನಿಮಾಗಳೆಲ್ಲಾ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು.. ಇದೀಗ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಫುಲ್ ಆಕ್ಟಿವ್ ಆಗಿದ್ದಾರೆ.. ಕೋರ್ಟ್, ಕೇಸು.. ಓಡಾಟ ಒಂದ್ಕಡೆಯಾದ್ರೆ.. ಬೆನ್ನು ನೋವಿದ್ರೂ ಕೂಡ ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗ್ತಿದ್ದಾರೆ.. ಮೈಸೂರು , ಉದಯಪುರ , ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಶೂಟಿಂಗ್ ಮುಗಿಸಿದ್ದಾರೆ.. ಡೆವಿಲ್ ಸಿನಿಮಾದ ಟಾಕಿ ಪೋಷನ್ ಕಂಪ್ಲೀಟ್ ಆಗಿದೆ. ಇನ್ನು ಕೇವಲ ಸಾಂಗ್ ಶೂಟಿಂಗ್ ಮಾತ್ರ ಬಾಕಿ ಇದೆ. ಸಾಂಗ್ ಶೂಟಿಂಗ್ ಆದಷ್ಟು ಬೇಗ ಮುಗಿದ್ರೆ, ಡೆವಿಲ್ ಸಿನಿಮಾ ದಸರಾ ವೇಳೆ ರಿಲೀಸ್ ಆಗೋದು ಪಕ್ಕಾ ಅಂತಾ ಹೇಳಲಾಗ್ತಿದೆ.. ಡೆವಿಲ್ ಸಿನಿಮಾ ಬಳಿಕ ದರ್ಶನ್ ಮುಂದಿನ ಪ್ರಾಜೆಕ್ಟ್ ಯಾವುದು ಅಂತಾ ಫ್ಯಾನ್ಸ್ ಕೇಳ್ತಿದ್ದಾರೆ.. ಇದೀಗ ಅದಕ್ಕೂ ಉತ್ತರ ಸಿಕ್ಕಿದೆ.
ನಟ ದರ್ಶನ್ ಒಂದು ಸಿನಿಮಾ ಮುಗೊಯೋದ್ರಳಗೆ ಮತ್ತೊಂದು ಪ್ರಾಜೆಕ್ಟ್‌ಗೆ ಒಪ್ಪಿಕೊಳ್ಳೋದು ಕಾಮನ್.. ಶೂಟಿಂಗ್ ಮುಗಿಯೋದ್ರೊಳಗೆ ಮತ್ತೊಬ್ಬ ನಿರ್ಮಾಪಕನ ಜೊತೆ ದಾಸ ಟೈಅಪ್ ಆಗಿರ್ತಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಕೆಲವು ನಿರ್ಮಾಪಕರಿಗೆ ದರ್ಶನ್ ಹಣವನ್ನು ಹಿಂತಿರುಗಿಸಿದ್ದರು. ಮುಂದಿನ ದಿನಗಳಲ್ಲಿ ಸಿನಿಮಾಗಳನ್ನು ಮಾಡುವ ಭರವಸೆಯನ್ನು ನೀಡಿದ್ದರು. ಹೀಗಾಗಿ ಕೆಲವು ಸಿನಿಮಾಗಳಿಂದ ದರ್ಶನ್ ಖುದ್ದು ಹೊರ ಬಂದಿದ್ದಾರೆ ಅಂತ ಹೇಳಲಾಗ್ತಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ಯಾರಿಗೆ ಕಾಲ್ ಶೀಟ್ ಕೊಡ್ತಾರೆ ಅನ್ನೊ ಕ್ಯೂರಿಯಾಸಿಟಿ ಎಲ್ಲರನ್ನ ಕಾಡ್ತಿದೆ. ಇದೀಗ ಪ್ರಾಣ ಸ್ನೇಹಿತೆ ಸಿನಿಮಾದಲ್ಲಿ ದಾಸ ನಟಿಸಲಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.
ಸ್ಯಾಂಡಲ್ ವುಡ್ ಕ್ವೀನ್ ರಕ್ಷಿತಾ ಹಾಗೂ ದರ್ಶನ್ ಕ್ಲೋಸ್ ಫ್ರೆಂಡ್ಸ್.. ತಮ್ಮ ಕಷ್ಟದ ಕಾಲದಲ್ಲಿ ಜೊತೆಯಾಗಿದ್ದ ರಕ್ಷಿತಾ ಕನಸಿನಂತೆ ಪ್ರೇಮ್ ಜೊತೆಗೆ ಸಿನಿಮಾ ಮಾಡ್ತಿನಿ ಅಂತ ಈ ಹಿಂದೆ ದರ್ಶನ್ ಹೇಳಿದ್ರು. ಜೈಲಲ್ಲಿದ್ದಾಗ ಕೂಡ ರಕ್ಷಿತಾ, ಪ್ರೇಮ್ ಜೊತೆಗೆ ಹೋಗಿ ದರ್ಶನ್ ರನ್ನ ನೋಡಿಕೊಂಡು ಬಂದಿದ್ದರು. ದಾಸನ ಪರಿಸ್ಥಿತಿ ಕಂಡು ರಕ್ಷಿತಾ ಕಣ್ಣೀರು ಹಾಕಿದ್ದರು.. ಆ ದಿನವನ್ನ ದಾಸ ಎಂದೂ ಮರೆಯಲ್ಲ. ಅಲ್ಲದೆ ಜೈಲಿಂದ ಹೊರ ಬಂದ್ಮೇಲೆ.. ರಕ್ಷಿತಾ ತಮ್ಮ ರಾಣಾ ಮದುವೆಯಲ್ಲಿ ಭಾಗಿಯಾಗಿದ್ದರು. ಜೈಲಿನಿಂದ ಬಂದ್ಮೇಲೆ ದರ್ಶನ್‌ಗೆ ಇದೇ ಮೊದಲ ಸಾರ್ವಜನಿಕ ಸಮಾರಂಭ ಆಗಿತ್ತು.. ಇದನ್ನೆಲ್ಲಾ ನೋಡಿದ್ರೆ ದರ್ಶನ್, ರಕ್ಷಿತಾ ನಿರ್ಮಾಣದಲ್ಲಿ, ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರೋ ಸಿನಿಮಾದಲ್ಲಿ ನಟಿಸೋದು ಫಿಕ್ಸ್ ಅಂತಾ ಹೇಳಲಾಗ್ತಿದೆ. ಆದ್ರೆ ಕೆವಿಎನ್ ಬ್ಯಾನರ್ ಈಗಾಗಲೇ ಒಂದಷ್ಟು ಸಿನಿಮಾ ಮಾಡ್ತಿದೆ. ಹೀಗಾಗಿ ಆ ಸಂಸ್ಥೆಯ ಜೊತೆಗೆ ದರ್ಶನ್ ಸದ್ಯಕ್ಕೆ ಸಿನಿಮಾ ಮಾಡೋದು ಡೌಟ್ ಅಂತ ಹೇಳಲಾಗ್ತಿದೆ. ಆದರೆ ದರ್ಶನ್ ಮಾತ್ರ ಡೆವಿಲ್ ಸಿನಿಮಾ ರಿಲೀಸ್ ತನಕ ಬೇರೆ ಸಿನಿಮಾದ ಅಪ್ಡೇಟ್ ಕೊಡೋದು ಡೌಟ್ ಅಂತಾ ಹೇಳಲಾಗ್ತಿದೆ.
ಇನ್ನು ಇವೆಲ್ಲದ್ರ ನಡುವೆ ದರ್ಶನ್ ತೆಲುಗಿನ ಆರ್ ಆರ್ ಆರ್ ಸಿನಿಮಾ ನಿರ್ಮಾಣ ಮಾಡಿದ ದಾನಯ್ಯ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಯಿತ್ತು. ಆದರೆ ಆ ಚಿತ್ರ ಮುಂದಕ್ಕೆ ಹೋಗಿದೆ ಅನ್ನೋ ಮಾತು ಕೇಳಿ ಬಂದಿದೆ. ಮುಂದಿನ ವರ್ಷ ದರ್ಶನ್ ತೆಲುಗು ನಿರ್ಮಾಪಕರ ಜೊತೆಗೆ ಕೈ ಜೊಡಿಸಲಿದ್ಧಾರೆ ಎನ್ನಲಾಗ್ತಿದೆ. ಆದ್ರೆ ಇವೆಲ್ಲ ಜಸ್ಟ್ ಅಂತೆ ಕಂತೆಗಳಷ್ಟೇ.. ಇದ್ಯಾವುದ್ರ ಬಗ್ಗೆಯೂ ಅಧಿಕೃತ ಮಾಹಿತಿ ಇಲ್ಲ.. ಆದ್ರೆ ದಾಸ ಜೈಲಿನಿಂದ ಹೊರ ಬರ್ತಿದ್ದಂತೆ ಫ್ಯಾನ್ಸ್ ಡೆವಿಲ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಡೆವಿಲ್ ತೆರೆ ಮೇಲೆ ಬರ್ತಿದ್ದಂಗೆ ದರ್ಶನ್ ಹೊಸ ಸಿನಿಮಾ ಅನೌನ್ಸ್ ಮಾಡೋದು ಫಿಕ್ಸ್.. ಆದ್ರೆ ತಮ್ಮ ಪ್ರಾಣ ಸ್ನೇಹಿತೆ ಜೊತೆ ಸಿನಿಮಾ ಮಾಡ್ತಾರಾ? ಅಥವಾ ಬೇರೆ ಯಾರಿಗಾದ್ರೂ ಕಾಲ್ ಶೀಟ್ ಕೊಡ್ತಾರಾ ಅಂತಾ ಕಾದುನೋಡ್ಬೇಕು.

ನೋಡಿರಿ

