ದಚ್ಚು ಶಿಫ್ಟ್ ಮಾಡಿದವ್ರಿಗೆ ಸಂಕಷ್ಟ – ಬಳ್ಳಾರಿ ಜೈಲು ದಾಸನ ಪಾಲಿಗೆ ವನವಾಸ
ಪೊಲೀಸರ ರೂಟ್ ಚೇಂಜ್ ಸೀಕ್ರೆಟ್

ದಚ್ಚು ಶಿಫ್ಟ್ ಮಾಡಿದವ್ರಿಗೆ ಸಂಕಷ್ಟ – ಬಳ್ಳಾರಿ ಜೈಲು ದಾಸನ ಪಾಲಿಗೆ ವನವಾಸಪೊಲೀಸರ ರೂಟ್ ಚೇಂಜ್ ಸೀಕ್ರೆಟ್

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ರಾಜಾತಿಥ್ಯ ಸಿಗ್ತಿರೋ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ದರ್ಶನ್ & ಗ್ಯಾಂಗ್​ನ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ನಟ ದರ್ಶನ್​ನ ಬಳ್ಳಾರಿ ಜೈಲಿಗೆ ಇಂದು ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಿಂದ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರಗೊಂಡ ನಟ ದರ್ಶನ್, ಭರ್ಜರಿ ಉಡುಗೆ ತೊಡುಗೆಗಳೊಂದಿಗೆ ಜೈಲಿನೊಳಕ್ಕೆ ಎಂಟ್ರಿಯಾಗಿದ್ದಾರೆ. ಅದೂ ಕೂಡ ಯಾವುದೋ ಸಿನಿಮಾ ಶೂಟಿಂಗ್​ಗೆ ಒಬ್ಬ ಹೀರೋ ಹೇಗೆ ಬರುತ್ತಾರೋ ಹಾಗೆಯೇ ದರ್ಶನ್ ಎಂಟ್ರಿಯಾಗಿದೆ. ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್​​ ಜೈಲಿನ ಒಳಕ್ಕೆ ಎಂಟ್ರಿ ನೀಡಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್​ ಅಷ್ಟು ಸ್ಟೈಲ್​ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ

ಕಾಂಟ್ರವರ್ಸಿ ಕಾಟೇರ!

ಪೊಲೀಸ್ ವ್ಯಾನ್​ನಿಂದ ಇಳಿದು ಜೈಲಿಗೆ ಎಂಟ್ರಿಯಾದ ದರ್ಶನ್​ ಬ್ರಾಂಡೆಡ್ ಟೀಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ಅವರು ಧರಿಸಿದ್ದ ಪೂಮಾ ಟೀಶರ್ಟ್ ಬೆಲೆ 10 ಸಾವಿರ ರೂಪಾಯಿ. ಅವರು ಧರಿಸಿದ್ದ ಕೂಲಿಂಗ್ ಗ್ಲಾಸ್ ನ ಬೆಲೆ ಏನಿಲ್ಲವೆಂದರೂ 1 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. 25 ಸಾವಿರ ಮೌಲ್ಯದ ಪುಲ್ ಓವರ್ ಧರಿಸಿದ್ದರು. ಇನ್ನು ಬ್ರಾಂಡೆಡ್ ಜೀನ್ಸ್ ಏನಿಲ್ಲವೆಂದರೂ 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ತಮ್ಮ ಎಡಗೈಗೆ ತೊಟ್ಟಿದ್ದ ವ್ರಾಪ್ ಬ್ಯಾಂಡ್ ನ ಬೆಲೆ ಕಮ್ಮಿ ಅಂದ್ರೂ 5 ಸಾವಿರ. ಅಲ್ಲಿಗೆ, ದರ್ಶನ್   ಜೈಲು ಪ್ರವೇಶಿಸುವಾಗ 1 ಲಕ್ಷದ 70 ಸಾವಿರ ರೂಪಾಯಿಗಳಷ್ಟು ಮೌಲ್ಯದ ಬಟ್ಟೆ ಹಾಗೂ ಗ್ಯಾಜೆಟ್ ಧರಿಸಿದ್ದರೆಂದು ಹೇಳಲಾಗಿದೆ. ಇದೇ ಈಗ ಆಕ್ರೋಶಕ್ಕೆ ಕಾರಣವಾಗಿದೆ. ಜೈಲಿಗೆ ಬಂದವರಂತೆ ದರ್ಶನ್ ಬಂದೇ ಇಲ್ಲ. ಅವರು ಸಿನಿಮಾ ಶೂಟಿಂಗ್ ಗೆ ಬಂದಂತೆ ಬಂದಿದ್ದಾರೆ. ಮೊದಲೇ ರಾಜಾತಿಥ್ಯದ ಆರೋಪಕ್ಕೆ ಗುರಿಯಾಗಿರುವ ದರ್ಶನ್ ಅವರು ಇನ್ನು ಬಳ್ಳಾರಿಯಲ್ಲೂ ಐಷಾರಾಮಿಯಾಗೇ ಬದುಕಲು ಅವಕಾಶ ಕೊಡ್ತಾರೆ ಅಂತಾ ಕಿಡಿ ಕಾರಿದ್ದಾರೆ.  ಇದೇ ಕಾರಣಕ್ಕೆ ಕರ್ತವ್ಯ ಲೋಪ ಎಸಗಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷ ಅವರು ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರಿಗೆ 6106 ಎಂಬ ನಂಬರ್ ನೀಡಲಾಗಿತ್ತು. ಬಳ್ಳಾರಿ ಕಾರಾಗೃಹಕ್ಕೆ ತೆರಳಿದ ನಂತರ ದರ್ಶನ್ ಅವರ ಕೈದಿ ನಂಬರ್ ಬದಲಾಗಿದ್ದು, 511 ಎಂಬ ನಂಬರ್ ನೀಡಲಾಗಿದೆ. ಇನ್ನು ಆರಂಭದಲ್ಲಿ ದರ್ಶನ್​ರನ್ನ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಕರ್ಕೊಂಡು ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಅಭಿಮಾನಿಗಳನ್ನ ನಿಯಂತ್ರಿಸುವ ಹಾಗೂ ದರ್ಶನ್​ ಸೆಕ್ಯೂರಿಟಿ ಪರ್ಪಸ್​ಗಾಗಿ ಬೇರೆ ಮಾರ್ಗದ ಮೂಲಕ ಪೊಲೀಸರು ಕರೆದೊಯ್ದಿದ್ದಾರೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿದ್ದ ದಾಸ ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ ಫುಲ್ ಶಾಕ್ ಆಗಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ಕಂಡು ನಟ ದರ್ಶನ್‌ ಕಂಗಾಲಾಗಿದ್ದಾರೆ. ಮೊದಲ ಗೇಟ್‌ಗೆ ಎಂಟ್ರಿಯಾಗುತ್ತಿದ್ದಂತೆ ತಲೆ ಚಚ್ಚಿಕೊಂಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್‌ನಲ್ಲಿ ದರ್ಶನ್‌ ಇದ್ದಾರೆ. ಇದರ ಜೊತೆಗೆ ಕಟ್ಟಿನಿಟ್ಟಿನ ಕ್ರಮಕ್ಕೂ ಆದೇಶಿಸಲಾಗಿದೆ. ಸೂಕ್ತ ನಿಗಾ ವಹಿಸಲು 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಇರಲಿದೆ. ದರ್ಶನ್ ಪತ್ನಿ, ರಕ್ತ ಸಂಬಂಧಿಗಳು ಮತ್ತು ಪ್ರಕರಣದ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಕಾರಾಗೃಹದ ನಿಯಮಾನುಸಾರ ಮೀಟ್ ಮಾಡಲು ಅವಕಾಶ ನೀಡಲಾಗಿದೆ.  ದರ್ಶನ್ ಸಂದರ್ಶನಕ್ಕಾಗಿ ಕನ್ನಡ ಚಿತ್ರರಂಗದ ಕಲಾವಿದರು, ಅಭಿಮಾನಿ ಬಳಗದವರು ಮತ್ತು ಪ್ರಭಾವಿ/ರಾಜಕೀಯ ವ್ಯಕ್ತಿಗಳಿಗೆ ಚಾನ್ಸ್ ನೀಡಬಾರದು. ಯಾವುದೇ ವಿಶೇಷ ಆತಿಥ್ಯ ನೀಡಬಾರದು ಅಂತಾ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

Shwetha M