ದರ್ಶನ್‌ಗೆ ಜೈಲು ಶಿಕ್ಷೆ ಮತ್ತಷ್ಟು ಕಠಿಣ – ಇನ್ಮುಂದೆ ದಾಸ ಊಟಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕು!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ಗೆ ಸಂಕಷ್ಟ ತಪ್ಪಿದ್ದಲ್ಲ. ಹೊರಗೆ ಸೆಲೆಬ್ರಿಟಿ ಆಗಿದ್ರೂ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ನೋಡಿಕೊಳ್ಳಲಾಗ್ತಿದೆ. ಇದೀಗ ಜೈಲಾಧಿಕಾರಿಗಳು ದಾಸನಿಗೆ ಮತ್ತಷ್ಟು ಕಟ್ಟುನಿಟ್ಟಾದ ರೂಲ್ಸ್ ಮಾಡಿದ್ದಾರೆ. ಇನ್ಮುಂದೆ ದರ್ಶನ್ ಊಟಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕು.
ಇದನ್ನೂ ಓದಿ: ಮದುವೆ ಮನೆಯಲ್ಲಿ ಕುಸಿದು ಬಿದ್ದ ವೇದಿಕೆ – ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ದರ್ಶನ್‌ನ ಸಾಮಾನ್ಯ ಖೈದಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಇದೀಗ ಜೈಲು ಸೂಪರಿಂಟೆಂಡೆಂಟ್ ಆಗಿ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ನೇಮಕಾತಿ ಆಗಿರೋ ಅಂಶುಕುಮಾರ್ ಮತ್ತಷ್ಟು ಹೊಸ ರೂಲ್ಸ್ ತಂದಿದ್ದಾರೆ. ಇಷ್ಟು ದಿನ ಬ್ಯಾರಕ್ ಅಲ್ಲಿ ಊಟ ಪಡೆದು ಊಟ ಮಾಡುತ್ತಾ ಇದ್ದ ದರ್ಶನ್ ಈಗ ಎಲ್ಲಾ ಆರೋಪಿಗಳಂತೆ ಸರತಿ ಸಾಲಿನಲ್ಲಿಯೇ ನಿಂತು ಊಟ ಪಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ದರ್ಶನ್ ಜೈಲಿನಲ್ಲಿ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಜೈಲಾಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ರು. ಅಷ್ಟೇ ಅಲ್ಲದೇ ಬೆನ್ನು ನೋವಿನ ಕಾರಣ ಕೂಡ ನೀಡಿದ್ದಾರೆ. ಇದೀಗ ಜೈಲಿನಲ್ಲಿ ದಾಸನ ಕಳ್ಳಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲೇಬೇಕೆಂದು ಜೈಲಾಧಿಕಾರಿಗಳು ರೂಲ್ಸ್ ಮಾಡಿದ್ದಾರೆ. ಇದೀಗ ದರ್ಶನ್ ಬ್ಯಾರಕ್ ಇಂದ ಹೊರಗೆ ಬಂದು ಊಟ ಪಡೆಯಬೇಕು. ಬಳಿಕ ಊಟ ಮುಗಿಸಿಯೇ ಬ್ಯಾರಕ್‌ಗೆ ತೆರಳಬೇಕಿದೆ. ಇನ್ನು ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಸಿಕ್ಕಿದ್ದ ವಾಕಿಂಗ್ ಅವಕಾಶವನ್ನೂ ಕಡಿತಗೊಳಿಸಿದ್ದಾರೆ. ಬಟ್ಟೆ ತೊಳೆದು ಒಣ ಹಾಕೋಕೆ ಮಾತ್ರ ಸ್ವಲ್ಪ ಕಾಲಾವಕಾಶ ನೀಡಿದ್ದು, ಮತ್ಯಾವುದಕ್ಕೂ ಅವಕಾಶ ಇಲ್ಲದೇ ದರ್ಶನ್ ಪರದಾಡುವಂತೆ ಆಗಿದೆ. ಈಗ ಈ ಎಲ್ಲಾ ಶಿಕ್ಷೆಯಿಂದ ಮತ್ತೆ ದರ್ಶನ್ ಕೋರ್ಟ್ ಅಲ್ಲಿ ನ್ಯಾಯಾಧೀಶರ ಮುಂದೆ ಏನು ಹೇಳ್ತಾರೆ? ಏನು ನೋವು ತೋಡಿಕೊಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

ನೋಡಿರಿ

