ಸರ್ಜರಿ ಇಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್ – ಹಾಸ್ಪಿಟಲ್‌ನಿಂದ ಹೋಗಿದ್ದೆಲ್ಲಿಗೆ ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಾಮೀನು ಸಿಕ್ಕ ಬೆನ್ನಲ್ಲೇ ಶಸ್ತ್ರಚಿಕಿತ್ಸೆ ಮಾಡಿಸದೇ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ.
ಇದನ್ನೂ ಓದಿ:ನಿನ್ ಜಾಗದಲ್ಲಿ ಗಂಡ್‌ಮಕ್ಳು ಇರ್ತಿದ್ರೆ ಕಥೆನೇ ಬೇರೆ ಆಗ್ತಿತ್ತು!.. ಚೈತ್ರಾ ಮೇಲೆ ಸಿಡಿಮಿಡಿಗೊಂಡ ಹನುಮಂತ!
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ದರ್ಶನ್‌ಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವಿನ ಕಾರಣ ಕೊಟ್ಟು ದರ್ಶನ್ ಕೋರ್ಟ್ ನಲ್ಲಿ ಜಾಮೀನು ಪಡೆದು ಆಸ್ಪ್ರತ್ರೆಗೆ ದಾಖಲಾಗಿದ್ರು. 7 ವಾರಗಳ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿಸದೇ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಪತ್ನಿ ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯ ಫ್ಲ್ಯಾಟ್‌ಗೆ ದರ್ಶನ್ ಆಗಮಿಸಿದ್ದಾರೆ. ಪತ್ನಿ, ಮಗ ಮತ್ತು ಧನ್ವೀರ್ ಜೊತೆ ಮನೆಗೆ ಬಂದಿದ್ದಾರೆ.
ದರ್ಶನ್ ಬರುತ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ಗೇಟ್ ಅನ್ನು ಕ್ಲೋಸ್ ಮಾಡಿದ್ದಾರೆ. ದರ್ಶನ್ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ನೆಚ್ಚಿನ ನಟನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶೀಘ್ರದಲ್ಲಿ ಗುಣಮುಖರಾಗಲಿ, ಈ ಪ್ರಕರಣಕ್ಕೊಂದು ಅಂತ್ಯ ಸಿಗಲಿ ಎಂಬುದು ಅಭಿಮಾನಿಗಳ ಆಶಯ.