ಸುಮಕ್ಕ, ಅಭಿ, ವಿನೋದ್ ಎಲ್ಲೋದ್ರು? – ದಚ್ಚುಗೆ ಜೈಲೇ ಫಿಕ್ಸ್ ಮಾಡ್ತಾರಾ ಸಿಎಂ?

ಸುಮಕ್ಕ, ಅಭಿ, ವಿನೋದ್ ಎಲ್ಲೋದ್ರು? – ದಚ್ಚುಗೆ ಜೈಲೇ ಫಿಕ್ಸ್ ಮಾಡ್ತಾರಾ ಸಿಎಂ?

ಕೋಪದಲ್ಲಿ ಆದ ತಪ್ಪೂ ಅಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಅಲ್ಲವೇ ಅಲ್ಲ. ಮನುಷ್ಯತ್ವ ಮರೆತ ಮೃಗಗಳು ಎಸಗಿದ ಕ್ರೌರ್ಯ ಅದು. ಒಂಟಿಯಾಗಿ ಸಿಕ್ಕವನ ಮೇಲೆ ತೋಳಗಳಂತೆ ಮುಗಿಬಿದ್ದ ರಕ್ಕಸರು ಕೊನೆಗೇ ಆತನ ರಕ್ತವನ್ನೇ ಕುಡಿದು ಬಿಟ್ಟಿದ್ದರು. ದರ್ಶನ್ ಌಂಡ್ ಗ್ಯಾಂಗ್ ಕೈಗೆ ಸಿಕ್ಕಿದ್ದ ರೇಣುಕಾಸ್ವಾಮಿಗೆ ಭೂಮಿ ಮೇಲೆಯೇ ನರಕ ತೋರಿಸಿದ್ರು. ಕೋಟಿ ಕೋಟಿ ಕನ್ನಡಿಗರು ಡಿಬಾಸ್ ಡಿ ಬಾಸ್ ಅಂತಾ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದ ಅದೇ ನಟ ನಿಜಜೀವನದಲ್ಲಿ ಅಕ್ಷರಶಃ ಹಾರರ್ ಕಿಲ್ಲರ್ ಆಗಿ ಬದಲಾಗಿದ್ದ. ರೇಣುಕಾಸ್ವಾಮಿಯನ್ನ ಅದೆಷ್ಟು ಕ್ರೂರವಾಗಿ ಕೊಂದಿದ್ರು? ದರ್ಶನ್ ಜೀವನಪೂರ್ತಿ ಜೈಯಲ್ಲೇ ಕೊಳೀಬೇಕಾ? ಬಾಸ್ ಬಾಸ್ ಅಂತಾ ಜೈಕಾರ ಹಾಕ್ತಿದ್ದವ್ರೆಲ್ಲಾ ಎಲ್ಲೋದ್ರು? ಸ್ಯಾಂಡಲ್​ವುಡ್​ನ ವಿಲನ್ ಒಂಟಿಯಾದ್ರಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಈಗಾಗ್ಲೇ ದರ್ಶನ್ ಌಂಡ್ ಗ್ಯಾಂಗ್ ಅಂದರ್ ಆಗಿದೆ. ದಿನದಿನಕ್ಕೂ ಕೇಸ್​ನ ಕರಾಳತೆ ಬಿಚ್ಚಿಕೊಳ್ತಿದೆ. ಪ್ರಭಾವಿಗಳ ಸಪೋರ್ಟ್ ಇದೆ.. ಏನ್ ಮಾಡಿದ್ರೂ ನಡೆಯುತ್ತೆ. ಹಣ ಕೊಟ್ರೆ ಕೇಸ್ ಮುಚ್ಚಿ ಹಾಕ್ತಾರೆ ಅನ್ಕೊಂಡಿದ್ದ ದರ್ಶನ್​ಗೆ ಇದೀಗ ಪೊಲೀಸರು ನೀರಿಳಿಸ್ತಿದ್ದಾರೆ. ಪ್ರಕರಣ ಸಂಬಂಧ ಪೊಲಿಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇವತ್ತು ದರ್ಶನ್ ಸೇಡಿ ಒಟ್ಟು 13 ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಇದೀಗ ಮತ್ತಷ್ಟು ತನಿಖೆಯ ಅಗತ್ಯ ಇರೋದ್ರಿಂದ ಕೋರ್ಟ್  ದರ್ಶನ್‌ ಸೇರಿದಂತೆ 4 ಆರೋಪಿಗಳನ್ನು ಮೂರನೇ ಬಾರಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ದರ್ಶನ್‌, ವಿನಯ್‌, ಪ್ರದೂಶ್‌, ಧನರಾಜ್ ಅವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಮತ್ತೊಂದೆಡೆ ಎ1 ಆರೋಪಿ ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂಲಕ ಪವಿತ್ರಾ ಜೈಲು ಪಾಲಾಗಿದ್ರೆ ದರ್ಶನ್ ಮತ್ತೆ ಪೊಲೀಸರ ವಶಕ್ಕೆ ಬಂದಿದ್ದಾರೆ. ದಿನದಿಂದ ದಿನಕ್ಕೆ ಕೊಲೆಯ ಗಂಟು ಕಗ್ಗಂಟಾಗ್ತಿದ್ದು, ದರ್ಶನ್ ಗ್ಯಾಂಗ್​ಗೆ ಉರುಳಾಗೋದು ಪಕ್ಕಾ ಆಗ್ತಿದೆ. ಅಷ್ಟಕ್ಕೂ ಡಿ ಗ್ಯಾಂಗ್​ಗೆ ಇಷ್ಟೊಂದು ಕಂಟಕ ಎದುರಾಗೋಕೆ ಕಾರಣವೇ ಅವ್ರ ಕ್ರೌರ್ಯ. ಮೃಗೀಯ ವರ್ತನೆ. ಮಾನವೀಯತೆಯನ್ನೇ ಮರೆತವರ ಅಟ್ಟಹಾಸ.

ಡಿ ಗ್ಯಾಂಗ್ ಕ್ರೌರ್ಯ!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರ ತನಿಖೆ ವೇಳೆ ಬೆಚ್ಚಿ ಬೀಳಿಸೋ ರಹಸ್ಯಗಳು ಹೊರ ಬೀಳ್ತಿವೆ. ಅದ್ರಲ್ಲೂ ಮೃತದೇಹದ ಫೋಟೋಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿ ನೋಡಿ ಪೊಲೀಸರೇ ಆಘಾತಗೊಂಡಿದ್ದಾರೆ. ನಿತ್ಯ ಹತ್ತಾರು ಕೇಸ್ ನೋಡುವ ಪೊಲೀಸ್ರೇ ಆ ಮಟ್ಟಿಗೆ ಶಾಕ್ ಆಗಿದ್ದಾರೆ ಅಂದ್ರೆ ದರ್ಶನ್ & ಗ್ಯಾಂಗ್ ಅದ್ಯಾವ ಮಟ್ಟಿಗೆ ಕೊಲೆ ಮಾಡಿರಬಹುದು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ. ಕೋಣಗಳಂತೆ ಕೊಬ್ಬಿದ್ದ ದರ್ಶನ್ ಮತ್ತು ಅವ್ರ ಹಿಂಬಾಲಕರ ಕೈಗೆ ರೇಣುಕಾಸ್ವಾಮಿ ಬೆಕ್ಕಿನ ಮರಿಯಂತೆ ಸಿಕ್ಕಿದ್ರು. ಫೋಟೋ ಕಳ್ಸಿದ್ದೀಯಾ ಅಂತಾ ತಮ್ಮ ಬೆಲ್ಟ್ ಬಿಚ್ಚಿಕೊಂಡು ರೇಣುಕಾಸ್ವಾಮಿ ಬೆನ್ನಿಗೆ ಬಾರಿಸಿದ್ದಾರೆ. ಅವ್ರ ಒಂದೊಂದು ಹೊಡೆತಕ್ಕೂ ರೇಣುಕಾಸ್ವಾಮಿ ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟಿದ ಮಾರ್ಕ್​ಗಳೇ ಇವೆ. ಹಾಗೇ ಕೈಗೆ ಕರೆಂಟ್ ಶಾಕ್ ಕೊಟ್ಟು ಸುಟ್ಟಿದ್ದಾರೆ. ತಲೆಯನ್ನ ಶೆಡ್​ನಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದ್ದಾರೆ. ಅದೆಲ್ಲಕ್ಕಿಂತ ಭೀಕರ ಅಂದ್ರೆ ಮರ್ಮಾಂಗಕ್ಕೆ ಒದ್ದು ಒದ್ದು ಕೊಂದಿದ್ದಾರೆ. ಚಾಕುವಿನಿಂದ ಕೊಯ್ದಿದ್ದಾರೆ. ನಿಜಕ್ಕೂ ಕೂಡ ರೇಣುಕಾಸ್ವಾಮಿಯ ಫೋಟೋಗಳೇ ಹತ್ಯೆಯ ಭೀಕರತೆಯನ್ನ ಬಿಚ್ಚಿಡ್ತಿದೆ. ಅಸಲಿಗೆ ದರ್ಶನ್ ಸಿನಿಮಾಗಳಲ್ಲಿ ಹೀರೋ. ಬಟ್ ಆ ಹೀರೋಯಿಸಂ ರಿಯಲ್ ಲೈಫಲ್ಲೂ ನೆತ್ತಿಗೇರಿತ್ತು ಅನ್ಸುತ್ತೆ. ಅದೇ ಕಾರಣಕ್ಕೆ ಆ ಪವಿತ್ರಾಗೌಡ ಮುಂದೆ ತಾನು ದೊಡ್ಡ ದಾದಾ ಅನ್ನೋ ಥರ ಬಿಲ್ಡಪ್ ಕೊಟ್ಟಿದ್ದಾನೆ. ಥರಗೆಲೆಯಂತಿದ್ದ ರೇಣುಕಾಸ್ವಾಮಿಯನ್ನ ಗಿರಗಿಟ್ಟಲೆಯಂತೆ ತಿರುಗಿಸಿ ನೋಡು ಹೆಂಗೆ ನಾನು ಅಂತಾ ಪೋಸ್ ಕೊಟ್ಟಿದ್ದಾನೆ. ವಿಪರ್ಯಾಸ ಅಂದ್ರೆ ಆವತ್ತು ದರ್ಶನ್ ಆ ಮಟ್ಟಿಗೆ ಹಿಂಸೆ ಕೊಟ್ಟು ಕೊಂದಿದ್ದು ತನ್ನದೇ ಅಭಿಮಾನಿಯನ್ನ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ದರ್ಶನ್ ಗ್ಯಾಂಗ್ ಕೃತ್ಯ ನೋಡಿ ಕುದ್ದು ಹೋಗಿದ್ದಾರೆ. ಖುದ್ದು ಬೆಂಗಳೂರು ಕಮೀಷನರ್ ಬಿ.ದಯಾನಂದ್, ದರ್ಶನ್ ಅಟ್ಟಹಾಸದ ವಿಡಿಯೋವನ್ನ ಸಿಎಂಗೆ ತೋರಿಸಿದ್ದಾರೆ. ದರ್ಶನ್ ಕ್ರೌರ್ಯದ ವಿಡಿಯೋ ನೋಡಿದ ಸಿಎಂ, ದರ್ಶನ್ ಮನುಷ್ಯನ ರಾಕ್ಷಸನಾ ಅಂತಾ ಪ್ರಶ್ನೆ ಮಾಡಿದ್ದರಂತೆ. ನಂತ್ರವೇ ದರ್ಶನ್​ ಅರೆಸ್ಟ್​ಗೆ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು ಎನ್ನಲಾಗಿದೆ.

ಅಲ್ದೇ ಇವತ್ತು ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ದರ್ಶನ್ ಕ್ರೌರ್ಯದ ವಿಡಿಯೋ ನೋಡಿದ್ದ ಸಿಎಂ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ, ಯಾವುದೇ ಶಾಸಕ, ಸಚಿವರು ಕೊಲೆ ಪ್ರಕರಣದಲ್ಲಿ ಯಾರ ಪರ ಅಥವಾ ವಿರೋಧವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ. ಹಾಗೇ ದರ್ಶನ್ ಹೀನಕೃತ್ಯಕ್ಕೆ ಅವ್ರ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಚಾಲಕರಂತೂ ತಮ್ಮ ವಾಹನಗಳ ಮೇಲೆ ಹಾಕಿದ್ದ ದರ್ಶನ್ ಭಾವಚಿತ್ರದ ಸ್ಟಿಕ್ಕರ್ ಹಾಗೂ ದರ್ಶನ್ ಪೆಟ್ ನೇಮ್ ಬರಹಗಳನ್ನು ಅಳಿಸಿ ಹಾಕ್ತಿದ್ದಾರೆ. ಇಲ್ಲಿ ಇನ್ನೊಂದು ವಿಚಾರ ಹೇಳ್ಬೇಕು. ದರ್ಶನ್ ಅಂದ್ರೆನೇ ಅವ್ರ ಸುತ್ತ ಒಂದಷ್ಟು ಗ್ಯಾಂಗ್ ಇರುತ್ತೆ. ಜೊತೆಗೆ ಆಪ್ತ ಬಳಗ ಕೂಡ ಕಾಣಿಸಿಕೊಳ್ಳುತ್ತೆ. ಆದ್ರೆ ಕೊಲೆ ಕೇಸ್​ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದೇ ಆಗಿದ್ದು. ಅತ್ಯಾಪ್ತ ವಲಯದಲ್ಲಿ ಕಾಣಿಸಿಕೊಳ್ತಿದ್ದ ಯಾರೋಬ್ಬರೂ ದರ್ಶನ್ ಬಗ್ಗೆ ತುಟಿ ಬಿಚ್ಚಿಲ್ಲ. ಎಲ್ಲೂ ಕಾಣಿಸಿಕೊಂಡೂ ಇಲ್ಲ. ಅದ್ರಲ್ಲೂ ಸುಮಲತಾ ಅಂಬರೀಶ್. ದರ್ಶನ್‌ ಸುಮಲತಾ ಅವರನ್ನು ಮದರ್‌ ಇಂಡಿಯಾ ಎಂದೇ ಕರೆಯುತ್ತಿದ್ರು. ನಮ್ಮ ಎರಡನೇ ತಾಯಿ ಅಂತಾ ಸಾಕಷ್ಟು ಸಲ ಹೇಳಿಕೊಂಡಿದ್ರು. ಅಷ್ಟೇ ಸುಮಲತಾ ಕೂಡ ದರ್ಶನ್ ನನ್ನ ಹಿರಿಯ ಮಗ ಅಂದಿದ್ರು.  ಇನ್ನು ಅಭಿಷೇಕ್ ಅಂಬರೀಶ್ ಕೂಡ ದರ್ಶನ್ ನಮ್ಮಣ್ಣ ಅಂತಾ ಜೊತೆಗೇ ತಿರುಗುತ್ತಿದ್ರು, ಬಟ್ ದರ್ಶನ್ ಲಾಕ್ ಆದ್ಮೇಲೆ ಅಮ್ಮ ಮಗ ಪತ್ತೆನೇ ಇಲ್ಲ. ಹಾಗೇ ನಟರಾದ ವಿನೋದ್ ಪ್ರಭಾಕರ್, ಧನ್ವೀರ್‌ ಗೌಡ ಮತ್ತು ಯಶಸ್‌ ಸೂರ್ಯ ಸಹ  ದರ್ಶನ್‌ ಅರೆಸ್ಟ್ ಆದ್ಮೇಲೆ ಏನೂ ಮಾತನಾಡಿಲ್ಲ. ಸೋ ಇದನ್ನೆಲ್ಲಾ ನೋಡ್ತಿದ್ರೆ ದರ್ಶನ್ ಇದೀಗ ಏಕಾಂಗಿಯಾದಂತೆ ಕಾಣ್ತಿದೆ. ಸದ್ಯ ಪ್ರಕರಣದ ಗಂಭೀರತೆ ನೋಡ್ತಿದ್ರೆ ದರ್ಶನ್ ಸದ್ಯಕ್ಕಂತೂ ಕೇಸ್​ನಿಂದ ಹೊರಬರೋಕೆ ಚಾನ್ಸೇ ಇಲ್ಲ. ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ದರ್ಶನ್‌ಗೆ ಶಿಕ್ಷೆಯಾಗೋದೂ ಪಕ್ಕಾ ಆಗ್ತಿದೆ. 6 ತಿಂಗಳವರೆಗೂ ಬೇಲ್ ಕೂಡ ಸಿಗಲ್ಲ. ಅಲ್ದೇ ಆರೋಪ ಸಾಬೀತಾದ್ರೆ ಸಾಯುವವರೆಗೂ ಜೈಲು ಶಿಕ್ಷೆಯಾದ ಉದಾಹರಣೆಗಳೂ ಸಾಕಷ್ಟಿವೆ. ಏನೇ ಹೇಳಿ ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ರು. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ರು. ಆದ್ರೆ ಸಿನಿಮಾದಲ್ಲಷ್ಟೇ ಹೀರೋ ಆಗಿ ರಿಯಲ್ ಲೈಫಲ್ಲಿ ಮೃಗ ಆಗೊ ಬದಲಾಗಿದ್ದು ನಿಜಕ್ಕೂ ದುರಂತ.

 

Shwetha M