ಸರ್ಜರಿ ತಪ್ಪಿಸೋಕಾಗಲ್ವಾ ದಾಸ? -ತೂಕವೇ ದೊಡ್ಡ ಶತ್ರುವಾಯ್ತಾ?
ದರ್ಶನ್ ಸಿನಿಮಾ ಲೆಕ್ಕ ಉಲ್ಟಾ?
ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಈಗಾಗಲೇ ರೆಗ್ಯುಲರ್ ಬೇಲ್ ಸಿಕ್ಕಿದ್ದು, ತಮ್ಮ ಪತ್ನಿ, ಮಗ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಬೇಲ್ ಸಿಕ್ಕ ಬಳಿಕ ಆಸ್ಪತ್ರೆಯಿಂದ ನಟ ದರ್ಶನ್ ಅವರು ಡಿಸ್ಚಾರ್ಜ್ ಆಗಿದ್ರು, ಇದೀಗ ಅವರನ್ನ ಬೆನ್ನು ನೋವು ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಆಪರೇಷನ್ ಮಾಡಿಸಿಕೊಳ್ಳಲೇ ಬೇಕಾದ ಪರಿಸ್ಥಿತಿಗೆ ದರ್ಶನ್ ಬಂದು ನಿಂತಿದ್ದಾರೆ.
ಆಪರೇಷನ್‌ಗೆ ದರ್ಶನ್ ಗ್ರೀನ್ ಸಿಗ್ನಲ್
ಬೆನ್ನುನೋವು ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದ ದರ್ಶನ್ ಆಪರೇಷನ್ ಮಾಡಿಸಬೇಕಾ, ಬೇಡವೇ ಎಂಬ ಗೊಂದಲದಲ್ಲಿದ್ದರು. ಈಗ ಆಪರೇಷನ್ ಮಾಡಿಸೋದು ಅನಿವಾರ್ಯ ಆಗಿದೆ. ಅವರಿಗೆ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಆಪರೇಷನ್‌ಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಸಂಕ್ರಾಂತಿ ಹಬ್ಬದ ವೇಳೆ ಆಪರೇಷನ್ ಗೆ ಒಳಗಾಗುವ ಸಾಧ್ಯತೆಯಿದೆ. ನಟ ದರ್ಶನ್ ಗೆ ಆಪರೇಷನ್ ಮಾಡುವ ವೈದ್ಯರಾದಂತಹ ಅಜಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಪರೇಷನ್ ಗೆ ನಟ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆ ದರ್ಶನ್ ಆಪರೇಷನ್ ಫಿಕ್ಸ್ ಆಗಿದೆ. ಆಪರೇಷನ್ ಬಳಿಕ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ .
ದರ್ಶನ್ ಸಿನಿಮಾ ಲೆಕ್ಕ ಉಲ್ಟಾ?
ದರ್ಶನ್ ಸಿನಿಮಾ ರಿಲೀಸ್ ಆದ್ರೆ ಅದು ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯೋದು ಫಿಕ್ಸ್.. ಈಗಾಗಲೇ ಡೆವಿಲ್ ಕೂಡ ತೆರೆ ಮೇಲೆ ಬರಬೇಕಿತ್ತು.. ಆದ್ರೆ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಲಾಕ್ ಆಗಿದ್ದ ದಾಸ್ 7 ತಿಂಗಳ ನಂತ್ರ ಜೈಲಿನಿಂದ ಹೊರ ಬಂದಿದ್ದಾರೆ.. ರೆಗ್ಯೂಲರ್ ಬೇಲೆ ಸಿಕ್ಕಿ ತಿಂಗಳು ಕಳೆದ್ರು ಕೂಡ ದರ್ಶನ್ ಸಿನಿಮಾ ಸೆಟ್ ಕಡೆ ಮುಖಮಾಡಿಲ್ಲ. ಅದಕ್ಕೆ ಕಾರಣ ಅವರಿಗೆ ಕಾಡುತ್ತಿರೋ ಬೆನ್ನು ನೋವು.. ಫಾರ್ಮ್‌ಹೌಸ್‌ನಲ್ಲಿ ರೆಸ್ಟ್ ಮಾಡ್ತಿರೋ ದರ್ಶನ್‌ಗೆ ಬೆನ್ನು ಬಿಟ್ಟು ಬಿಡದೆ ಕಾಡುತ್ತಿದೆ.. ಬೆನ್ನು ಮೂಳೆ ಸರಿದ ಕಾರಣ ಸಾಕಷ್ಟು ನೋವುನ್ನ ಅನುಭವಿಸುತ್ತಿದ್ದಾರೆ. ಹೀಗಾಗಿ ಶೂಟಿಂಗ್‌ಗೆ ಹೋಗದೆ ರೆಸ್ಟ್ ಮಾಡುತ್ತಿದ್ದಾರೆ.. ದಿನ ಸುಮ್ಮನೆ ಕುಳಿತ್ರೆ ಆಗಲ್ಲ ಎಂದು ತಿರ್ಮಾನ ಮಾಡಿದ ದಾಸ ಆಪರೇಷನ್ ಮಾಡಿಸಿಕೊಳ್ಳೋಕೆ ಓಕೆ ಎಂದಿದ್ದು, ಸಂಕಾಂತ್ರಿಯೊಳಗೆ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ. ಬೆನ್ನು ನೋವಿನ ಆಪರೇಷನ್ ತುಂಬಾ ಡೇಂಜರ್ ಆಗಿದ್ದು, ಸ್ವಲ್ಪ ಹೆಚ್ಚು ಕಮ್ಮಿಯಾದ್ರೆ ಜೀವನ ಪರ್ಯಾಂತ ಬೆಡ್‌ರೆಸ್ಟ್ ನಲ್ಲಿ ಇರಬೇಕಾಗುತ್ತೆ. ಹೀಗಾಗಿ ಇಷ್ಟು ದಿನ ಸರ್ಜರಿಗೆ ದರ್ಶನ್ ಒಪ್ಪಿಗೆ ಕೊಟ್ಟಿರಲಿಲ್ಲ.. ಆದ್ರೆ ಈಗ ಅನಿವಾರ್ಯವಾಗಿ ಗ್ರೀನ್ ಸಿಗ್ನಲ್ ನೀಡಿದ್ದು, ಆಪರೇಷನ್ ನಡೆಯಲಿದೆ. ಸಾಕಷ್ಟು ಸಿನಿಮಾಗಳು ಅವರ ಕೈಯಲ್ಲಿದ್ದು, ಆಪರೇಷನ್ ಎನ್ನುತ್ತಿದ್ದಂತೆ ಅವರನ್ನ ನಂಬಿದ ಡೈರೆಕ್ಟರ್ ಮತ್ತು ನಿರ್ಮಾಪಕರಿಗೆ ಭಯ ಶುರುವಾಗಿದೆ. ದರ್ಶನ್ ಸರ್ಜರಿ ಸಕ್ಸಸ್ ಆಗ್ಲಿ ಅಂತ ಬೇಡಿಕೊಳ್ಳುತ್ತಿದ್ದಾರೆ. ಆಪರೇಷನ್ ಬಳಿಕ ಅಂದ್ರೆ ಫೆಬ್ರವರಿಯಲ್ಲಿ ಚಿತ್ರೀಕರಣದಲ್ಲಿ ನಟ ದರ್ಶನ್ ಅವರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆಪರೇಷನ್ ಮಾಡಿಸಿಕೊಂಡು ಮೂರು ದಿನ ವಿಶ್ರಾಂತಿಯಲ್ಲಿ ಇರಬೇಕು ಎಂದು ನಟ ದರ್ಶನ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಂತಹ ವೈದ್ಯ ಅಜಯ್ ಮಾಹಿತಿ ನೀಡಿದ್ದಾರೆ ಒಂದುವರೆ ತಿಂಗಳುವರೆಗೂ ಫೈಟ್ ದೃಶ್ಯದಲ್ಲಿ ಭಾಗಿ ಆಗುವಂತೆ ಇಲ್ಲ, ಆದರೆ ಕೇವಲ ಚಿತ್ರಿಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ತಿಳಿದು ಬಂದಿದೆ
ದರ್ಶನ್‌ಗೆ ತೂಕವೇ ದೊಡ್ಡ ಶತ್ರುವಾಯ್ತಾ?
ದರ್ಶನ್ ದೇಹದಲ್ಲಿ ಮಸಲ್ ಕಮ್ಮಿ ಆಗಿದ್ದೇ ನೋವು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಜೈಲಿಗೆ ಹೋಗೋಕು ಮುಂಚೆ 100 ಕೆ.ಜಿ ಗಿಂತ ಹೆಚ್ಚು ತೂಕವಿದ್ದ ದರ್ಶನ್ ಅವರು ಜೈಲಿಗೆ ಹೋಗಿ ಕೆಲವೇ ದಿನಗಳಲ್ಲಿ ತೂಕ ಇಳಿಕೆಯಾಗಿತ್ತು. ಜೈಲಿನಿಂದ ಹೊರ ಬರುವ ವೇಳೆಗೆ 10 -15 ಕೆಜಿ ತೂಕ ಕಮ್ಮಿಯಾಗಿತ್ತು. ಹೊರಗಡೆ ಇದ್ದಾಗ ದರ್ಶನ್ ಅವರು ಜಿಮ್ ಮತ್ತು ಸರಿಯಾದ ಊಟದ ಮೂಲಕ ಮಸಲ್ಸ್ ಬಿಲ್ಡ್ ಮಾಡಿದ್ದರು. ಆರೋಗ್ಯವನ್ನು ಕೂಡಾ ಕಾಪಾಡಿಕೊಂಡಿದ್ದರು. ಆದರೆ ಕೋಲೆ ಆರೋಪದ ಮೇಲೆ ಜೈಲು ಸೇರಿದ ಮೇಲೆ ದರ್ಶನ್ ದೇಹದ ತೂಕ ಇಳಿಕೆಯಾಗಿತ್ತು. ಇದ್ದಕ್ಕಿದ್ದಂತೆ ದೇಹದ ತೂಕ ಇಳಿಕೆ ಆಗುತ್ತಿದ್ದಂತೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿಂದೆ ಬೆನ್ನು ನೋವಿನಿಂದ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದ ದರ್ಶನ್ ಅವರು ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಸದ್ಯ ಮತ್ತೆ ಮಸಲ್ಸ್ ಕಡಿಮೆ ಆಗುತ್ತಿದ್ದಂತೆ ನಟನಿಗೆ ಬೆನ್ನು ನೋವು ಹೆಚ್ಚಾಗಿದೆ. ಸೊಂಟದ ಸುತ್ತಲಿನ ಮಾಂಸಕಂಡ ಕಮ್ಮಿ ಆಗಿದ್ದು ಬೆನ್ನು ನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ದರ್ಶನ್‌ಗೆ ವಿಪರೀತ ಬೆನ್ನು ನೋವು ಕಾಡುತ್ತಿದ್ದು, ಆಪರೇಷನ್ ನಂತ್ರ ನಮ್ಮ ಬಾಸ್ ಮೊದಲಿನಂತೆ ಆಗಲಿ ಅಂತ ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ.