ಮಾರ್ಚ್ 1ರಿಂದ ತಿರುಪತಿ ತಿಮ್ಮಪ್ಪನ ದರ್ಶನ ಮತ್ತಷ್ಟೂ ಸುಲಭ – ಮುಖ ಗುರುತಿಸುವಿಕೆಯಿಂದ ಭಕ್ತರಿಗೆ ಆರಾಮ..!

ಮಾರ್ಚ್ 1ರಿಂದ ತಿರುಪತಿ ತಿಮ್ಮಪ್ಪನ ದರ್ಶನ ಮತ್ತಷ್ಟೂ ಸುಲಭ – ಮುಖ ಗುರುತಿಸುವಿಕೆಯಿಂದ ಭಕ್ತರಿಗೆ ಆರಾಮ..!

ಭಾರತದ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ದೇವರ ದರ್ಶನ ಮಾಡುವುದೇ ಭಕ್ತರಿಗೆ ಸವಾಲಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ತಿರುಪತಿ ವೆಂಕಟರಮಣನ ಸನ್ನಿಧಿಗೆ ಭೇಟಿ ನೀಡುತ್ತಾರೆ. ಜನಸಾಗರ ಹೆಚ್ಚಾದಂತೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಟಿಟಿಡಿ ತಂದಿತು. ಇದರಿಂದ ನೂಕು ನುಗ್ಗಲು, ವಸತಿ ಸಮಸ್ಯೆಗಳು ಕಡಿಮೆಯಾದವು. ಇದೀಗ ಮತ್ತೂ ಸುಲಭ ದರ್ಶನದ ಮೂಲಕ ಭಕ್ತರಿಗೆ ಉಪಯೋಗವಾಗುವಂತಹ ಸೇವೆಯನ್ನು ಟಿಟಿಡಿ ಪರಿಚಯಿಸುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಮಾರ್ಚ್ 1ರಿಂದ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ( facial recognition system)  ಟಿಟಿಡಿ ಜಾರಿಗೆ ತರಲಿದೆ.

ಇದನ್ನೂ ಓದಿ:  ಹೆಣ್ಣು ಸಿಕ್ತಿಲ್ಲ ಅಂತಾ ಮಹದೇಶ್ವರ ಬೆಟ್ಟಕ್ಕೆ ನಡಿಗೆ – ಬ್ರಹ್ಮಚಾರಿಗಳ ಪಾದಯಾತ್ರೆಗೆ ‘ಡಾಲಿ’ ಚಾಲನೆ

ಭಕ್ತರ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆಯ ತಂತ್ರಜ್ಞಾನವನ್ನು ಬಳಸಲು ಟಿಟಿಡಿ ನಿರ್ಧರಿಸಿದೆ. ಈ ಹೊಸ ತಂತ್ರಜ್ಞಾನವು ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಈ ಮುಖ ಗುರುತಿಸುವಿಕೆ ತಂತ್ರಜ್ಞಾನವು ದೇಗುಲ ಪ್ರವೇಶಿಸುವ ಮುಂಚೆ ಭಕ್ತರ ಮುಖಚಿತ್ರವನ್ನು ಗುರುತಿಸುತ್ತದೆ. ಈ ಹೊಸ ತಂತ್ರಜ್ಞಾನದ ಬಗ್ಗೆ ಟಿಟಿಡಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಈ ಮುಖ ಗುರುತಿಸುವಿಕೆಯು ಅನೇಕ ರೀತಿಯಲ್ಲಿ ಭಕ್ತರಿಗೆ ಉಪಯೋಗವಾಗಲಿದೆ. ಮುಖ್ಯವಾಗಿ ದರ್ಶನ ಹಾಗು ವಸತಿ ಹಂಚಿಕೆಯಲ್ಲಿ ಪಾರದರ್ಶಕತೆಯ ಮಟ್ಟವನ್ನು ಉತ್ತಮಗೊಳಿಸಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ. ಈ ಮುಖ ಗುರುತಿಸುವಿಕೆಯು ಭಕ್ತರು ಹೆಚ್ಚುವರಿ ಟೋಕನ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ವರದಿಗಳ ಪ್ರಕಾರ, ತಿರುಮಲವು ಸುಮಾರು 7,000 ವಸತಿ ಸೌಕರ್ಯಗಳನ್ನು ಹೊಂದಿದೆ. ಈ ಹೊಸ ತಂತ್ರಜ್ಞಾನವು ಟೋಕನ್ ಲೆಸ್ ದರ್ಶನವನ್ನು ಭಕ್ತರಿಗೆ ಒದಗಿಸುವುದು ಮಾತ್ರವಲ್ಲ, ವಸತಿ ಹಂಚಿಕೆ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

suddiyaana