ಜಮ್ಮುವಿನಲ್ಲೂ ಸಿಗುತ್ತೆ ತಿರುಪತಿ ಬಾಲಾಜಿಯ ದರ್ಶನ – ನೂತನ ದೇವಸ್ಥಾನ ಲೋಕಾರ್ಪಣೆ

ಜಮ್ಮುವಿನಲ್ಲೂ ಸಿಗುತ್ತೆ ತಿರುಪತಿ ಬಾಲಾಜಿಯ ದರ್ಶನ – ನೂತನ ದೇವಸ್ಥಾನ ಲೋಕಾರ್ಪಣೆ

ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಲೋಕಾರ್ಪಣೆಗೊಂಡಿದೆ. ನೂತನವಾಗಿ ನಿರ್ಮಾಣವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನವನ್ನು ಗೃಹ ಸಚಿವ ಅಮಿತ್ ಶಾ ಜೂನ್ 8ರಂದು ಉದ್ಘಾಟಿಸಿದ್ದಾರೆ. ಜಮ್ಮು ದೇವಾಲಯವು ಆಂಧ್ರಪ್ರದೇಶದ ಹೊರಗೆ ನಿರ್ಮಿಸಲಾದ ಆರನೇ ಬಾಲಾಜಿ ದೇವಾಲಯವಾಗಿದೆ. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಈ ಹಿಂದೆ ಹೈದರಾಬಾದ್, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ಬಾಲಾಜಿ ದೇವಸ್ಥಾನಗಳನ್ನು ನಿರ್ಮಿಸಿದೆ.

ಇದನ್ನೂ ಓದಿ:  ‘ದೇವಸ್ಥಾನಕ್ಕೆ ಹೋಗುವವರು ಚಪ್ಪಲಿ ಹಾಕುತ್ತಾರೆಯೇ’? – ಫ್ಯಾನ್ಸ್ ಭೇಟಿ ವೇಳೆ ಚಪ್ಪಲಿ ಹಾಕದ ಗುಟ್ಟು ತಿಳಿಸಿದ ಅಮಿತಾಬ್ ಬಚ್ಚನ್!

ಜಮ್ಮುವಿನ ತಿರುಪತಿ ಬಾಲಾಜಿ ದೇವಸ್ಥಾನ ದರ್ಶನಕ್ಕೆ ತೆರೆದಿರುವುದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಜಮ್ಮುವಿನ ತಿರುಪತಿ ಬಾಲಾಜಿ ದೇವಸ್ಥಾನವನ್ನು 62 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಆವರಣದಲ್ಲಿ ವೇದ ಪಾಠಶಾಲೆ, ಹಾಸ್ಟೆಲ್​, ಕೊಠಡಿಗಳು, ಕಲ್ಯಾಣಮಂಟಪವನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಗರ್ಭಗುಡಿಯಲ್ಲಿ 8 ಅಡಿ ಎತ್ತರದ ವೆಂಕಟೇಶ್ವರನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಭೂಮಿಯನ್ನು ಟಿಟಿಡಿ ಮಂಡಳಿಗೆ 40 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದೆ. ಅದರ ನಂತರ ತಿರುಪತಿ ದೇವಸ್ಥಾನವು ಇಲ್ಲಿ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಈ ದೇವಾಲಯದ ಭೂಮಿ ಪೂಜೆಯನ್ನು 2021ರ ಜೂನ್ 13ರಂದು ಮಾಡಲಾಗಿತ್ತು.

suddiyaana