ಜೈಲೇ ಗತಿ! ಬೇಲ್ ಆಪ್ಸನ್ ಇಲ್ವಾ? – ಎಷ್ಟು ವರ್ಷ ಶಿಕ್ಷೆ? ಸೆಕ್ಷನ್ ಏನ್ ಹೇಳುತ್ತೆ?
ದರ್ಶನ್ ಕರಿಯರ್ ಕಂಬಿ ಹಿಂದೆ END?

ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಗೌಡಗೆ ಅಶ್ಲೀಲ ಮೆಸೇಜ್ ಮಾಡಬಾರದಿತ್ತು.. ತನಗೆ ಬಂದ ಮೆಸೇಜ್‌ನ ದರ್ಶನ್‌ಗೆ ತೋರಿಸಿ ರೇಣುಕಾಸ್ವಾಮಿಗೆ ಏನಾದ್ರೂ ಮಾಡು ಅಂತ ದರ್ಶನ್‌ಗೆ ಪವಿತ್ರಗೌಡ ಹೇಳಬಾರದಿತ್ತು.. ಸುಮ್ಮನೆ ಇದ್ದಿದ್ದಕ್ಕೆ ಪವಿತ್ರಗೌಡ 20 ದಿನ ದರ್ಶನ್ ಜೊತೆ ಮಾತು ಬಿಡಬಾರದಿತ್ತು.. ಪವಿತ್ರಗೌಡ ಮಾತು ಬಿಟ್ಲು ಅಂತ ದರ್ಶನ್ ತನ್ನ ಹುಡುಗರಿಗೆ ಹೇಳಿ ರೇಣುಕಾಸ್ವಾಮಿನ ಕಿಡ್ನ್ಯಾಪ್ ಮಾಡಬಾರದಿತ್ತು.. ಕಿಡ್ನ್ಯಾಪ್ ಮಾಡಿದ ಮೇಲೆ ಬುದ್ಧಿ ಹೇಳಿ ಕಳಿಸೋದು ಬಿಟ್ಟು ಕೊಲೆ ಮಾಡಲೇ ಬಾರದಿತ್ತು. ರೇಣುಕಾಸ್ವಾಮಿ ಕೊಲೆಯಿಂದ ಶುರುವಾಗಿ ದರ್ಶನ್, ಪವಿತ್ರಗೌಡ, ಉಳಿದ 5 ಜನ ಆರೋಪಿಗಳ ಜೊತೆ ಚಿತ್ರರಂಗದ ಸಾಕಷ್ಟು ಜನರ ಜೀವನ ಈ ಕೇಸ್‌ನಿಂದ ಹಾಳಾಗಿ ಹೋಗಿದೆ.. ಪವಿತ್ರಗೌಡಗೆ ರೇಣುಕಾಸ್ವಾಮಿ ಮೇಸೆಜ್ ಬಂದಾಗಲೇ ದರ್ಶನ್ ಚಿತ್ರದುರ್ಗದ ಎಸ್ಪಿಗೋ ಅಥವಾ ಬೇರೆ ಯಾವುದೋ ಪೊಲೀಸರಿಗೆ ಈ ಬಗ್ಗೆ ಒಂದೇ ಕ್ಲೂ ಕೊಟ್ಟಿದ್ರೆ ಸಾಕಿತ್ತು. ಅವರ ಎಲ್ಲಾ ನೋಡಿಕೊಳ್ಳುತ್ತಿದ್ದರು. ಹಾಗೇ ಮಾಡಿದ್ರು ರೇಣುಕಾಸ್ವಾಮಿನೂ ತನ್ನ ಮಗು ಜೊತೆ ಇವತ್ತು ಇರ್ತಿದ್ದ.. ದರ್ಶನ್ ಪವಿತ್ರಗೌಡ ಜೊತೆ ಉಳಿದ 5 ಜನ ಕೂಡ ಜೈಲಿಗೆ ಹೋಗದೆ ಮನೆಯವರ ಜೊತೆ ಇರ್ತಿದ್ರು. ಈಗ ಎಲ್ಲವೂ ನಡೆದು ಹೋಗಿದ್ದು, ಡಿ ಗ್ಯಾಂಗ್ ಜೈಲಿನಲ್ಲಿ ಒದ್ದಾಡುತ್ತಿದೆ. ಕಾನೂನು ಮುಂದೆ ಯಾರು ದೊಡ್ಡವರಲ್ಲ ಅನ್ನೋದ್ದಕ್ಕೆ ಪ್ರಜ್ವಲ್ ರೇವಣ್ಣ ಮತ್ತು ದರ್ಶನ್ ಕೇಸ್ ಸಾಕ್ಷಿ.. ಅದ್ರಲ್ಲೂ ದರ್ಶನ್ ಮಾತ್ರ ದೊಡ್ಡ ಯಡವಟ್ಟ ಮಾಡಿಕೊಂಡಿದ್ದಾರೆ. ಸಿನಿಮಾ, ಪಾರ್ಟಿ, ಫ್ರೆಂಡ್ಸ್ ಅಂತ ಚೆನ್ನಾಗಿದ್ದ ಜೀವನವನ್ನ ಹಾಳು ಮಾಡಿಕೊಂಡು ಜೈಲಿನಲ್ಲಿ ಕಳೆಯುವಂತಾಗಿದೆ. ಈ ಹಿಂದೆ 5 ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಹೈಕೋರ್ಟ್‌ನಲ್ಲಿ ಬೇಲ್ ಸಿಗುತ್ತಿದ್ದಂತೆ ಹೊರ ಬಂದಿದ್ರು.. ಆದ್ರೆ ಈಗ ಅಂತ ಅವಕಾಶ ಇದ್ಯಾ? ದರ್ಶನ್ ಜೈಲಿನಲ್ಲಿ ಇನ್ನೂ ಎಷ್ಟು ಟೈಂ ಕಳಿಬೇಕು ಅನ್ನೋ ಪ್ರಶ್ನೆ ಸಾಕಷ್ಟು ಜನರಲ್ಲಿದೆ.
ದರ್ಶನ್ ಮುಂದಿನ ದಾರಿ ಏನು?
ನನಗೆ ಬೆನ್ನು ನೋವು ಇದೆ ನಾನು ಆಪರೇಷನ್ ಮಾಡ್ಕೊಬೇಕು ಅಂತ ಹೈಕೋರ್ಟ್‌ನಲ್ಲಿ ಬೇಲ್ ಪಡೆದು ಹೊರ ಬಂದ ದರ್ಶನ್, ಯಾವುದೇ ಆಪರೇಷನ್ ಮಾಡಿಸದೆ ಹೊರಗಡೆ ಚೆನ್ನಾಗಿ ಓಡಾಡಿಕೊಂಡಿದ್ರು. ಇದು ಸುಪ್ರೀಂ ಕೋರ್ಟ್ ಕಣ್ಣು ಕೆಂಪಾಗಿಸಿ ದರ್ಶನ್ ಬೇಲ್ ಕ್ಯಾನ್ಸಲ್ ಮಾಡಿದೆ. ಈಗ ದರ್ಶನ್ ಮುಂದಿನ 6 ತಿಂಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಲ್ಲಿಸೋಕೆ ಅವಕಾಶ ಇರಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠಕ್ಕೆ ಅರ್ಜಿ ಹಾಕಿದ್ರೂಕೋರ್ಟ್ ಮಾನ್ಯ ಮಾಡೋ ಸಾಧ್ಯತೆಕಮ್ಮಿ ಇದೆ. ಹೀಗಾಗಿ ಮುಂದಿನ 6 ತಿಂಗಳೊಳಗೆ ಸೆಷನ್ಸ್ ಕೋರ್ಟ್ ವಿಚಾರಣೆ ಮುಗಿಸಿ ತೀರ್ಪು ಪ್ರಕಟ ಮಾಡೋ ಸಾಧ್ಯತೆ ಇದೆ.. ಹೀಗಾಗಿ ದರ್ಶನ್ ಜಾಮೀನು ಅರ್ಜಿ ಸಲ್ಲಿಸೋ ಮುಂಚೆ ತೀರ್ಪು ಪ್ರಕಟವಾಗಿ ಶಿಕ್ಷೆಯಾದ್ರೆ ದರ್ಶನ್ ಜೈಲಿನಿಂದ ಹೊರ ಬರುವುದು ಡೌಟ್.. ಯಾಕಂದ್ರೆ ಪ್ರಜ್ವಲ್ ರೇವಣ್ಣನಲ್ಲಿ ಫಾಟಾಫಟ್ ಅಂತ ಶಿಕ್ಷೆ ಪ್ರಕಟ ಆದ ಹಾಗೇ ದರ್ಶನ್ ಕೇಸ್‌ನಲ್ಲೂ ಆಗಬಹುದು. ಶಿಕ್ಷೆಯ ಪ್ರಮಾಣ ಏನಿಲ್ಲಾ ಅಂದ್ರೂ 5 ರಿಂದ 14 ವರ್ಷ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿಗೆ. ಹಾಗಿದ್ರೆ ದರ್ಶನ್ ಮೇಲೆ ಯಾವೆಲ್ಲಾ ಸೆಕ್ಷನ್‌ಗಳನ್ನ ಹಾಕಲಾಗಿದೆ ಅನ್ನೋದ್ದನ್ನ ನೋಡೋಣ ಬನ್ನಿ..
ಡಿ ಗ್ಯಾಂಗ್ ಮೇಲೆ ಇರೋ ಸೆಕ್ಷನ್
IPC ಸೆಕ್ಷನ್ 302 -– ಹಿಂಸೆ ನೀಡಿ ಕೊಲೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆ -ದಂಡ ಅಥವಾ ಎರಡೂ
IPC ಸೆಕ್ಷನ್ 201 -– ಸಾಕ್ಷಿ ನಾಶ , ತಪ್ಪು ಮಾಹಿತಿ 7 ವರ್ಷದ ತನಕ ಜೈಲು- ದಂಡ ಅಥವಾ ಎರಡೂ
IPC ಸೆಕ್ಷನ್ 364 – ಕೊಲೆ ಮಾಡೋ ಉದ್ದೇಶಕ್ಕೆ ಕಿಡ್ನ್ಯಾಪ್ – 2ರಿಂದ 10 ವರ್ಷ ಜೈಲು ಅಥವಾ ಜೀವಾವಧಿ
IPC ಸೆಕ್ಷನ್ 384- ಹಲ್ಲೆ ನಡೆಸಿ ವ್ಯಕ್ತಿಯ ಸುಲಿಗೆ – 3 ವರ್ಷದ ತನಕ ಜೈಲು – ದಂಡ ಅಥವಾ ಎರಡೂ
IPC ಸೆಕ್ಷನ್ 120 B- ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದು – 6 ತಿಂಗಳು ಜೈಲು- ದಂಡ ಅಥವಾ ಎರಡೂ
IPC ಸೆಕ್ಷನ್ 355 – ಉದ್ದೇಶಪೂರ್ವಕ ಹಲ್ಲೆ ಮತ್ತು ಅವಮಾನ -2 ವರ್ಷದ ತನಕ ಜೈಲು -ದಂಡ ಅಥವಾ ಎರಡೂ
IPC ಸೆಕ್ಷನ್ 143 – ಕಾನೂನು ಬಾಹಿರ ಗುಂಪಿನ ಜೊತೆ ಸಭೆ -6 ತಿಂಗಳು ಜೈಲು- ದಂಡ ಅಥವಾ ಎರಡೂ
IPC ಸೆಕ್ಷನ್ 147, IPC ಸೆಕ್ಷನ್ 148 , IPC ಸೆಕ್ಷನ್ 149 IPC , ಸೆಕ್ಷನ್34
ಇಷ್ಟು ಸೆಕ್ಷನ್ ಹಾಕಲಾಗಿದೆ. ಒಂದು ಈ ಎಲ್ಲಾ ಸೆಕ್ಷನ್‌ಗಳು ಸಾಭಿತಾದ್ರೆ ಡಿ ಗ್ಯಾಂಗ್ ಏನಿಲ್ಲಾ ಅಂದ್ರೂ 10 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲೇ ಕೊಳೆಯಬೇಕಾಗುತ್ತೆ. ಜೀವಾವಧಿ ಶಿಕ್ಷೆ ಕೂಡ ಆದ್ರೂ ಆಗಬಹುದು. ಈ ಕೇಸ್ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿರೋದ್ರಿಂದ ಮತ್ತಷ್ಟು ರೋಚಕತೆ ಪಡೆದಿದೆ.

ನೋಡಿರಿ

