ಪರಪ್ಪನ ಅಗ್ರಹಾರದಲ್ಲಿ ಮಾರಾಮಾರಿ! – ಸಹ ಕೈದಿಗೆ ಥಳಿಸಿದ ನಟ ದರ್ಶನ್!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ದರ್ಶನ್ ಖ್ಯಾತೆ ತೆಗೆಯುತ್ತಿದ್ದಾರೆ. ಇತ್ತೀಚೆಗಷ್ಟೇ ದರ್ಶನ್ ಪೊಲೀಸರ ವಿರುದ್ದ ಆರೋಪ ಮಾಡಿದ್ರು. ಇದೀಗ ದರ್ಶನ್ ಸಹ ಖೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಜೈಲಿನ ನಿಯಮಗಳು ಕಠಿಣವಾಗಿದ್ದು, ದರ್ಶನ್ ತತ್ತರಿಸಿ ಹೋಗಿದ್ದಾರಂತೆ. ಇವರಲ್ಲದ್ರ ನಡುವೆ ಇದೀಗ ದರ್ಶನ್ ಮೇಲೆ ಹೊಸ ಆರೋಪ ಕೇಳಿಬಂದಿದೆ. ಸಹ ಕೈದಿಗಳಿಗೆ ದಾಸ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಸದ್ಯ ದರ್ಶನ್ ಜೊತೆ ಒಂದೇ ಸೆಲ್‌ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಜೈಲು ಸೇರಿದವರೇ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಇದ್ರಿಂದಾಗಿ ಕೆಲ ದಿನದ ಹಿಂದೆ ದರ್ಶನ್ ಸೆಲ್‌ನಲ್ಲಿ ದೊಡ್ಡ ಜಗಳ ನಡೆದು ಹೋಗಿದೆ. ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ಆಗಿದೆಯಂತೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರೆ. ಇನ್ನು, ಮಲಗಿದ್ದ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸಿರೋ ದರ್ಶನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗ್ತಿದೆ.
ಇನ್ನು ವಕೀಲರ ನೇಮಕ ವಿಚಾರವಾಗಿಯೂ ಎಲ್ಲರ ನಡುವೆ ಗಲಾಟೆ ಶುರುವಾಗಿದೆ. ಅಲ್ಲದೇ ನಾನು ಇಲ್ಲೆ ಇದ್ದರೆ ಸಾಯೋದಾಗಿ ಅನುಕುಮಾರ್ ಹೇಳಿಕೊಂಡಿದ್ದಾರಂತೆ. ಅನುಕುಮಾರ್ಗೆ ಜಾಮೀನು ಸಿಗುತ್ತಿಲ್ಲ ಎಂಬುದು ಒಂದು ಕಡೆಯಾದರೆ, ದರ್ಶನ್ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ ಅನ್ನೋದು ಮತ್ತೊಂದು ಕಡೆ. ಹೀಗಾಗಿ, ದರ್ಶನ್ ಸೆಲ್ ಮೇಲೆ ವಿಶೇಷ ಕಾಳಜಿ ಇಡಲಾಗಿದೆ. ಟಾರ್ಚರ್ ತಡೆಯಲಾರದೆ ಅನುಕುಮಾರ್, ಜಗದೀಶ್ ಅವರು ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿದ್ದಾರೆ.

ನೋಡಿರಿ

