ದರ್ಶನ್ಗೆ ಬಂತಾ ಗುಡ್ ಟೈಂ?- ಫಾರ್ಮ್ ಹೌಸ್ನಲ್ಲಿ ದಾಸ ಜಾಲಿ..
ಮೈಸೂರಿಗೆ ಡಿ ಬಾಸ್ ರೀ ಎಂಟ್ರಿ

ದರ್ಶನ್ಗೆ ಬಂತಾ ಗುಡ್ ಟೈಂ?- ಫಾರ್ಮ್ ಹೌಸ್ನಲ್ಲಿ ದಾಸ ಜಾಲಿ..ಮೈಸೂರಿಗೆ ಡಿ ಬಾಸ್ ರೀ ಎಂಟ್ರಿ

ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ದರ್ಶನ್‌ಗೆ ಬೇಲ್ ಸಿಕ್ಕಿದ್ದು ಆಯ್ತು.. ಆಸ್ಪತ್ರೆಯಿಂದ ಮನೆಗೆ ಬಂದಿದ್ದು ಆಯ್ತು.. ಈಗ ದರ್ಶನ್‌ಗೆ ಹೊಸ ಜೀವನ ಸಿಕ್ಕಿದೆ. ಕಹಿ ಘಟನೆಗಳನ್ನ ಮರೆತು ಹೊಸ ಲೈಫ್ ಸಿಕ್ಕಿದೆ. ದಾಸನಿಗೆ ಕೋರ್ಟ್‌ ಒಂದಷ್ಟು ನಿಯಮಗಳನ್ನ ನೀಡಿ ಬೇಲ್ ನೀಡಿದೆ. ಈ ನಡುವೆ ದರ್ಶನ್‌ಗೆ ತಾಯಿನ್ನ ಹಾಗೂ ಫಾರ್ಮ್ ಹೌಸ್‌ನಲ್ಲಿರೋ ತಮ್ಮ ನೆಚ್ಚಿನ ಪ್ರಾಣಗಳನ್ನ ನೋಡೋ ಆಸೆ ಹೆಚ್ಚಾಗಿದೆ. ಹೀಗಾಗಿ ದರ್ಶನ್‌ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಹಾಗಿದ್ರೆ ದರ್ಶನ್‌ಗೆ ಎಷ್ಟು ದಿನ ಕೋರ್ಟ್ ಅನುಮತಿ ನೀಡಿದೆ..

ಜೈಲು, ಆಸ್ಪತ್ರೆ ಅಂತಾ ಕಳೆದ 6-7 ತಿಂಗಳಿಂದ ದರ್ಶನ್‌ಗೆ ತಲೆ ಕೆಟ್ಟು ಹೋಗಿದೆ. ಬಣ್ಣದ ಬದುಕಿನಿಂದ ದೂರ ಆಗಿದ್ದು ದರ್ಶನ್‌ನನ್ನ ಕುಗ್ಗಿಸಿದೆ.. 6 ತಿಂಗಳು ಕಂಬಿ ಹಿಂದೆ ಕುಳಿತು ಕತ್ತಲೇ ಕೋಣೆಯಲ್ಲಿ ಜೀವನ ನಡೆಸಿದ್ರು. ಇದ್ರಿಂದ ದಾಸ ಹೊರ ಬರಬೇಕಿದೆ.. ಮೊದಲಿನಂತ ತನ್ನ ಜೀವನವನ್ನ ಸರಿಮಾಡಿಕೊಳ್ಳಬೇಕಿದೆ. ಹೀಗಾಗಿ ದರ್ಶನ್ ತೋಟದ ಮನೆಯಲ್ಲಿ ಸ್ಪಲ್ಪ ದಿನಗಳ ಕಾಲ ಕಾಲ ಕಳೆಯೋಕೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ದರ್ಶನ್ ನಾಲ್ಕು ವಾರಗಳ ಕಾಲ ಮೈಸೂರಿಗೆ ಹೋಗಲು ಅನುಮತಿ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ರು.

ಇದನ್ನೂ ಓದಿ : ಫೈರ್‌ ಬ್ರ್ಯಾಂಡ್‌ ‌ಹ್ಯಾಟ್ರಿಕ್‌ ಕಳಪೆ – ಚೈತ್ರಾ ಕುಂದಾಪುರಗೆ ಮತ್ತೆ ಜೈಲು

ದರ್ಶನ್‌ ಕೋರ್ಟ್‌ಗೆ ಕೊಟ್ಟ ಕಾರಣವೇನು?

ಮೈಸೂರಿನಲ್ಲಿ ವಾಸಿಸುತ್ತಿರುವ, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವ 76 ವರ್ಷದ ತನ್ನ ತಾಯಿ ಕಂಡು ಆರೈಕೆ ಮಾಡಬೇಕಿದೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ತನ್ನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಅಭಿಪ್ರಾಯ ಪಡೆಯಬೇಕಿದೆ. ಹಾಗಾಗಿ, ನಾಲ್ಕು ವಾರಗಳ ಕಾಲ ಮೈಸೂರಿಗೆ ಹೋಗಿ ನೆಲೆಸಲು ಅನುಮತಿ ನೀಡಬೇಕು,” ಎಂದು ಕೋರಿ ದರ್ಶನ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಮೈಸೂರಿಗೆ ತೆರಳಿ, ಎರಡು ವಾರಗಳ ಕಾಲ ನೆಲೆಸಲು ಅನುಮತಿ ನೀಡಿದೆ. ”ದರ್ಶನ್‌  2025ರ ಜನವರಿ.5ರವರೆಗೆ ಮೈಸೂರಿನಲ್ಲಿಯೇ ನೆಲೆಸಬಹುದು,” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಇದರಿಂದ ಪ್ರಕರಣ ಸಂಬಂಧ ಮೈಸೂರಿನಿಂದಲೇ ಬಂಧನವಾಗಿದ್ದ ದರ್ಶನ್‌, ಆರು ತಿಂಗಳ ನಂತರ ಮರಳಿ ಮೈಸೂರಿಗೆ ಹೋಗಲು ಅವಕಾಶ ಸಿಕ್ಕಿದೆ.

ಮೆಚ್ಚಿನ ಪ್ರಾಣಿಗಳ ಜೊತೆ ಕಾಲ ಕಳೆಯಲಿದ್ದಾರೆ ದಾಸ

ಜಾಮೀನು ಸಿಕ್ಕ ಬೆನ್ನಲ್ಲೇ, ಮೈಸೂರಿಗೆ ಕೂಡಾ ಹೋಗಲು ಅನುಮತಿ ಸಿಕ್ಕಿರುವುದು ಬಿಗ್ ರಿಲೀಫ್ ಸಿಕ್ಕಂತಾಗಿದೆ. ಟಿ ನರಸೀಪುರ ರಸ್ತೆಯ ದರ್ಶನ್‌ ಫಾರ್ಮಮ್‌ಹೌಸ್‌ಗೆ ದರ್ಶನ್ ಹೋಗಿ, ಪ್ರಾಣಿಗಳನ್ನ ಮದ್ದಾಡಲಿದ್ದಾರೆ.. ಸಿನಿಮಾ ಶೂಟಿಂಗ್‌ ಬಿಡುವು ಸಿಕ್ಕಾಗಲೆಲ್ಲ ದರ್ಶನ್ ತೋಟದ ಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅದೇ ತೋಟದಲ್ಲಿ ತಮ್ಮ ಇಷ್ಟದ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆಯನ್ನೂ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಮತ್ತೆ 6 ತಿಂಗಳ ನಂತ್ರ ತಮ್ಮ ಮುದ್ದಿನ ಪ್ರಾಣಿ ಪಕ್ಷಿಗಳ ಜೊತೆ ಒಂದಷ್ಟು ದಿನ ಸಮಯವನ್ನ ದಾಸ ಕಳೆಯಲಿದ್ದಾರೆ. ಹಾಗೇ ಮೈಸೂರಿನಲ್ಲಿರೋ ಅಮ್ಮನನ್ನ ಕೂಡ ದರ್ಶನ್ ಮಾತನಾಡಿಸಿ ಅವರ ಜೊತೆ ಕೂಡ ಕಾಲ ಕಳೆಯಲಿದ್ದಾರೆ.  ದರ್ಶನ್ ಮೈಸೂರಿನಲ್ಲಿ ಅರೆಸ್ಟ್ ಆದ ನಂತ್ರ ಮತ್ತೆ ಮೈಸೂರಿಗೆ ಹೋಗಿಲ್ಲ.. 6 ತಿಂಗಳ ನಂತ್ರ ದರ್ಶನ್ ಮತ್ತೆ ಮೈಸೂರಿಗೆ ಹೋಗಲಿದ್ದು, ರಿಲ್ಯಾಕ್ಸ್ ಮೂಡ್‌ಗೆ ಜಾರಲಿದ್ದಾರೆ..

Kishor KV

Leave a Reply

Your email address will not be published. Required fields are marked *