ಜೈಲಿನಲ್ಲಿರುವ ದಾಸನಿಗೆ ಶಾಕ್‌ ಕೊಟ್ಟ IT ಅಧಿಕಾರಿಗಳು! – ದರ್ಶನ್‌ಗೆ 82 ಲಕ್ಷ ಹಣ ಫ್ಯಾನ್ಸ್‌ ಕೊಟ್ಟಿದ್ದಾ?  

ಜೈಲಿನಲ್ಲಿರುವ ದಾಸನಿಗೆ ಶಾಕ್‌ ಕೊಟ್ಟ IT ಅಧಿಕಾರಿಗಳು! – ದರ್ಶನ್‌ಗೆ 82 ಲಕ್ಷ ಹಣ ಫ್ಯಾನ್ಸ್‌ ಕೊಟ್ಟಿದ್ದಾ?  

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದಾರೆ. ಒಂದ್ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರಣೆ ನಡೆಯುತ್ತಿದ್ರೆ, ಮತ್ತೊಂದ್ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ. ಜೈಲಿನಲ್ಲಿರುವ ದಾಸನಿಗೆ ಹೊಸ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕಣ್ಣೀರು ಹಾಕಬೇಡ.. ನಿನ್ನ ಜೊತೆ ನಾನಿದ್ದೇನೆ! – ಡಿವೈನ್‌ ಸ್ಟಾರ್‌ಗೆ ವರಾಹ ಪಂಜುರ್ಲಿ ಅಭಯ

ರೇಣುಕಾಸ್ವಾಮಿ ಕೊಲೆ ಕೇಸ್‌ ತನಿಖೆ ವೇಳೆ ದರ್ಶನ್‌ ಮನೆಯಲ್ಲಿ 82 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇದೀಗ ಮತ್ತೆ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ ಬಳಿ 82 ಲಕ್ಷ ಹಣದ ಮೂಲವನ್ನ ಐಟಿ ಕೆದಕಿದೆ. ಜೈಲಿಗೆ ತೆರಳಿ ದರ್ಶನ್‌ ಅವರನ್ನ ವಿಚಾರಣೆ ನಡೆಸಿದ್ದಾರೆ. 82 ಲಕ್ಷ ರೂ. ಮೂಲ ಏನು? ಇಷ್ಟು ಹಣ ಯಾರು ಕೊಟ್ರು.. ಎಲ್ಲಿಂದ ಬಂತು..? ಎಂಬೆಲ್ಲಾ ಐಟಿ ಪ್ರಶ್ನೆ ಮಾಡಿದ್ದು, ದರ್ಶನ್‌ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ನಾನು ಕೃಷಿ ಮಾಡಿದ್ದೆ, ಪ್ರಾಣಿಗಳ ಮಾರಾಟವನ್ನೂಮಾಡಿದ್ದೆ. ಅಲ್ಲದೇ ನನ್ನ ಅಭಿಮಾನಿಗಳು ಹುಟ್ಟುಹಬ್ಬದ ದಿನ ನನಗೆ ದುಡ್ಡು ಕೊಟ್ಟಿದ್ರು ಎಂದಿದ್ದಾರೆ. ನಾನು ಮಾಡಿದ ಕೃಷಿಯಿಂದಲೇ 82 ಲಕ್ಷ ರೂ. ಹಣ ಸಿಕ್ಕಿದ್ದು ಅಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದರ್ಶನ್‌ ಹೇಳಿಕೆ ನೀಡಿದ್ದಾರೆ. ಅಲ್ಲದೇ ಇಲ್ಲ ನನ್ನ ಬಳಿ ಸಿಕ್ಕ ಹಣಕ್ಕೆ ಮತ್ತು ನನ್ನ ಪತ್ನಿಯ ಬಳಿ ಸಿಕ್ಕ ಹಣಕ್ಕೆ ಸಧ್ಯಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ. ನಾನು 2024-2025 ರಲ್ಲಿ ಸಲ್ಲಿಕೆ ಮಾಡುವ ಆದಾಯ ತೆರಿಗೆ ಮಾಹಿತಿಯಲ್ಲಿ ಉಲ್ಲೇಖ ಮಾಡುತ್ತೇನೆ.

Shwetha M