D ಬಾಸ್ ಫ್ಯಾನ್ಸ್‌ಗೆ ರಮ್ಯಾ ‘ಚಾಲೆಂಜ್’ – ಕಮೆಂಟ್ ಮಾಡಿದವರಿಗೆ ಜೈಲೂಟ ಫಿಕ್ಸ್

D ಬಾಸ್ ಫ್ಯಾನ್ಸ್‌ಗೆ ರಮ್ಯಾ ‘ಚಾಲೆಂಜ್’ –  ಕಮೆಂಟ್ ಮಾಡಿದವರಿಗೆ ಜೈಲೂಟ ಫಿಕ್ಸ್

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿ ಹೋಗಿ ಬೇಲ್ ಮೇಲೆ ಹೊರ ಬಂದಿರೋ ದರ್ಶನ್‌ ಶೂಟಿಂಗ್ ಅದು ಇದು ಅಂತ ಸ್ವಲ್ಪ ನೆಮ್ಮದಿಯಾಗಿದ್ದಾರೆ.  ಇನ್ನೂ ಯಾರ್ ಸಹವಾಸವೇ ಬೇಡ ಅಂತ ತಮ್ಮ ಪಾಡಿಗೆ ತಾವ್ ಇದ್ದಾರೆ.. ಆದ್ರೆ ಡಿ ಬಾಸ್ ನೆಮ್ಮದಿಯಾಗಿರೋಕೆ ಅವರ ಫ್ಯಾನ್ಸ್ ಬಿಡ್ತಿಲ್ಲ.. ದರ್ಶನ್ ಅವರ ಮರಿಯಾದೆಯನ್ನೇ ಅವರೇ ತೆಗೆಯುತ್ತಿದ್ದಾರೆ.. ಅಶ್ಲೀಲ ಮ್ಯಾಸೇಜ್ ಮಾಡಿ ದರ್ಶನ್ ಗೌರವಕ್ಕೆ ಧಕ್ಕೆ ತರೋ ಕೆಲಸ ಮಾಡ್ತಿದ್ದಾರೆ.. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಅಸಹ್ಯವಾಗಿ ಮ್ಯಾಸೇಜ್ ಮಾಡುತ್ತಾ ಕಾಟ ಕೊಡುತ್ತಿದ್ದಾರೆ ಡಿ ಬಾಸ್ ಫ್ಯಾನ್ಸ್‌..

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಜೈಲಿಗೆ ಹೋಗಿದ್ರು.. ಆ ಮೇಲೆ ಹೈಕೋರ್ಟ್ ಷರತ್ತು ಬದ್ಧ ಬೇಲ್ ನೀಡಿತ್ತು..  ದರ್ಶನ್ ಹೊರ ಬಂದು ಶೂಟಿಂಗ್‌ನಲ್ಲೂ ಭಾಗಿಯಾಗುತ್ತಿದ್ದಾರೆ.. ಆದ್ರೆ ಬೆಂಗಳೂರು ಪೊಲೀಸರು ದಾಸನ ಬೇಲ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ರು.. ಈ ಕೇಸ್ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ವಿರುದ್ಧವಾಗಿ ಮತ್ತು ರೇಣುಕಾಸ್ವಾಮಿಗೆ ನ್ಯಾಯ ಕೊಡಿಸುವ ರೀತಿಯಲ್ಲಿ ವಾದ ವಿವಾದ ನಡೆದಿತ್ತು.. ಹಾಗೇ ಸುಪ್ರೀಂ ಕೋರ್ಟ್  ತೀರ್ಪನ್ನು ಕಾಯ್ದಿರಿಸಿದೆ.. ಈ ಬೆಳವಣಿಗೆ ನಂತ್ರ  ರಮ್ಯಾ ಈ ಬಗ್ಗೆ ಒಂದ್ ಸ್ಕ್ರೀನ್ ಶಾಟ್ ಜೊತೆ ಪೋಸ್ಟ್ ಮಾಡ್ತಾರೆ..ಭಾರತ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ..ರೇಣುಕಾಸ್ವಾಮಿ  ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ  ಎಂದು ಬರೆದುಕೊಂಡಿದ್ರು.. ಇದೊಂದೇ ಪೋಸ್ಟ್  ಡಿ ಬೆಂಕಿ ಹಚ್ಚಿಕೊಳ್ಳುವಂತೆ ಮಾಡ್ತು.. ಇಲ್ಲಿ ದರ್ಶನ್ ಹೆಸರು ಕೂಡ ಬಳಕೆ ಆಗಿಲ್ಲ .. ಆದ್ರೂ ಅವರ ಫ್ಯಾನ್ಸ್ ನುಡಿ ಮುತ್ತುಗಳನ್ನ ಉದಿರಿಸೋಕೆ ಶುರುಮಾಡಿದ್ರು.. ರಮ್ಯಾ ಪೋಸ್ಟ್‌ಗೆ  ಅಸಹ್ಯವಾಗಿ.. ಅಶ್ಲೀಲವಾಗಿ.. ಹೆಣ್ಣು ಮಕ್ಕಳು ಓದೋಕೆ ಆಗದಂತಹ ರೀತಿಯಲ್ಲಿ ಕೆಟ್ಟಾ ಕೊಳಕ ಕಮೆಂಟ್ ಹಾಕಿದ್ರು.

ನಿಜಕ್ಕೂ ಒಬ್ಬ ಸಾರ್ವಜನಿಕರ ಜೀವನದಲ್ಲಿರೋ ನಟನ ಫ್ಯಾನ್ಸ್ ಈ ತರ ಕಮೆಂಟ್ ಹಾಕ್ತಾರೆ ಅಂದ್ರೆ ನಿಜಕ್ಕೂ ಅಸಹ್ಯ ಅಲ್ವಾ  ದಾಸ ಫ್ಯಾನ್ಸ್ ಕಮೆಂಟ್‌ನಲ್ಲಿ ಜೋಡಿಸಿದ ಪದ ಪುಂಜಗಳನ್ನ ನೋಡಿ ಸ್ಯಾಂಡಲ್‌ವುಡ್ ಕ್ವೀನ್ ಮತ್ತಷ್ಟು ರೊಚ್ಚಿಗೆದ್ರು.. ದಾಸನ ಸೆಲೆಬ್ರಿಟಿಸ್ ಮಾಡಿದ ಕಮೆಂಟ್‌ಗಳನ್ನ ಶೇರ್ ಮಾಡಿ ನೇರವಾಗಿ ದಾಸನ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ರು.. ʼಡಿ ಬಾಸ್‌ ಫ್ಯಾನ್ಸ್‌ ಎಲ್ಲರೂ ನನ್ನ ಇನ್‌ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ನಿಮ್ಮ ಕೆಟ್ಟ ಸಂದೇಶಗಳೇ ಸಾಕ್ಷಿ. ಡಿ ಬಾಸ್‌ ಅಭಿಮಾನಿಗಳು ಮಾಡುವ ಸಂದೇಶಕ್ಕೂ, ರೇಣುಕಾಸ್ವಾಮಿ ಕಳಿಸಿದ್ದ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ನಿಮ್ಮಂಥ ಸ್ತ್ರೀನಿಂದಕರಿಂದಲೇ ಸಮಾಜದಲ್ಲಿ ಮಹಿಳೆಯರು/ಹುಡುಗಿಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಜಾಸ್ತಿಯಾಗುತ್ತಿದೆʼ ಎಂದಿದ್ದಾರೆ. ಅಷ್ಟೇ ದರ್ಶನ್ ಅವರ ಫ್ಯಾನ್ಸ್ ಕಮೆಂಟ್ ಶೇರ್ ಮಾಡಿದ್ದಾರೆ.  ಆ ಒಂದೊಂದು ಮೆಸೇಜ್‌ಗಳು ಅದೆಷ್ಟು ಕೆಟ್ಟದಾಗಿವೆ ಎಂದರೆ ಓದೋಕು ಸಾಧ್ಯವಾಗದಷ್ಟು ಅಶ್ಲೀಲವಾಗಿವೆ. ನಟ ದರ್ಶನ್‌ ಅಭಿಮಾನಿಗಳ ಗಲೀಜು ಮನಸ್ಥಿತಿಯನ್ನ ಎತ್ತಿ ತೋರಿಸುವಂಥ ಸಂದೇಶಗಳಾಗಿವೆ.

  ಡಿ ಫ್ಯಾನ್ಸ್ ವಿರುದ್ಧ ಸಿಡಿದೆದ್ದ ರಮ್ಯಾ 

ದರ್ಶನ್ ಫ್ಯಾನ್ಸ್ ಬಗ್ಗೆ ಮಾತನಾಡಿರೋ ರಮ್ಯಾ ಸಿಡಿದೆದ್ದಾರೆ.. ನಾನಂತು ಯಾವ್​ ನನ್ಮಗನಿಗೂ ನಾನು ಹೆದರಲ್ಲ.   ನಾನೊಬ್ಬ ಸಮಾಜಮುಖಿ, ನಟಿ. ನಮ್ಮನ್ನು ಟೀಕೆ ಮಾಡ್ತಾರೆ, ಟ್ರೋಲ್ ಮಾಡ್ತಾರೆ ಓಕೆ ಒಪ್ಪಿಕೊಳ್ಳೋಣ. ಆದರೆ ಬೇರೆ ಹೆಣ್ಮಕ್ಕಳ ಬಗ್ಗೆಯೂ ಹಾಗೆ ಮಾಡ್ತಾರೆ ಅಲ್ವಾ? ಅದಕ್ಕೆ ಏನು ಹೇಳೋಣ. ಏನ್ಮಾಡ್ತಾರೆ.. ರೇ*ಪ್​ ಮಾಡ್ತಾರಾ.. ಮ*ರ್ಡರ್ ಮಾಡ್ತಾರಾ.. ಕಾಲು ಕೈ ಮುರಿತಾರಾ.. ವ್ಯಕ್ತಿತ್ವಕ್ಕೆ ಮಸಿ ಬಳೀತಾರಾ..? ಅದಕ್ಕೆಲ್ಲ ನಾವ್ ಹೆದರಿಕೊಂಡು ಇದ್ರೆ, ಆಮೇಲೆ, who’s going to fight.. ದಟ್​ ಈಸ್​ ಮೈ ಕ್ವಶ್ಚನ್​.. ಇಂಥವರನ್ನೆಲ್ಲ ನಾವ್ ಸುಮ್ನೆ ಫ್ರೀಯಾಗಿ ಓಡಾಡೋಕೆ ನಾವ್ ಬಿಡಬೇಕಾ? ಅಂತ ರಮ್ಯಾ ಪ್ರಶ್ನೆ ಮಾಡಿದ್ದಾರೆ..  Vis flow..

ಅಲ್ಲದೇ  ಅಸಹ್ಯವಾಗಿ ಕಮೆಂಟ್ ಹಾಕಿದ ಡಿ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದಾರೆ..   ದರ್ಶನ್‌ ಫ್ಯಾನ್ಸ್‌‌ ತಮಗೆ ಕಳಿಸಿರುವ ಮೆಸೇಜ್‌ಗಳ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿಕೊಂಡಿರುವ ನಟಿ ರಮ್ಯಾ ಇದೀಗ ಅವರ ವಿರುದ್ಧ ಸೈಬರ್‌ ಕ್ರೈಮ್‌ ವಿಭಾಗಕ್ಕೆ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

 ರಮ್ಯಾ ಕಂಪ್ಲೇಂಟ್ ಕೊಟ್ರೆ ದಾಸನ ಫ್ಯಾನ್ ವಿರುದ್ಧ ಕ್ರಮ

ದರ್ಶನ್‌ ಫ್ಯಾನ್ಸ್‌ Vs ಮೋಹಕ ತಾರೆ ರಮ್ಯಾ ನಡುವಿನ ಜಟಾಪಟಿ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ನಟಿ ರಮ್ಯಾ ದೂರು ಕೊಟ್ಟರೆ, ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.  ಕಂಪ್ಲೇಂಟ್ ಆಗುತ್ತಿದ್ದಂತೆ ಯಾರ್ ಯಾರ್ ಕೆಟ್ಟದಾಗಿ ಮ್ಯಾಸೇಜ್ ಮಾಡಿದ್ದಾರೋ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಲಿದ್ದಾರೆ..

ರಮ್ಯಾಗೆ ಟಾಂಗ್ ಕೊಟ್ರಾ ರಕ್ಷಿತಾ ಪ್ರೇಮ್‌?

ರಮ್ಯಾ ಮತ್ತು ಡಿ ಬಾಸ್ ಫ್ಯಾನ್ಸ್ ವಾರ್ ಒಂದ್ಕಡೆ ನಡೆಯುತ್ತಿದ್ದರೆ ಮತ್ತೊಂದ್ಕಡೆ   ನಟಿ ರಕ್ಷಿತಾ ಪ್ರೇಮ್​ ಅವರು ಇನ್​​ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಕ್ಷಿತಾ ಏನ್ ಹೇಳಿದ್ದಾರೆ ಅಂದ್ರೆ..  ನೀವು ಜನರ ಮಾನಸಿಕ ಆರೋಗ್ಯವನ್ನು ನೋಡಲು ಸಾಧ್ಯವಿಲ್ಲ. ದಯವಿಟ್ಟು ಯಾವಾಗಲೂ ದಯೆಯಿಂದಿರಿ . ಹಾಗೇ ಮತ್ತೊಂದು ಪೋಸ್ಟ್​ನಲ್ಲಿ ನಿಜವಾಗಿಯೂ ಏನು ವೈರಲ್ ಆಗುತ್ತಿರೋದನ್ನು ನೋಡಲು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವ ಸಭ್ಯತೆ ಎಂದು ಬರೆದಿರೋ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಟಿ ರಕ್ಷಿತಾ ರಮ್ಯಾಗೆ ಟಾಂಗ್ ಕೊಟ್ಟಿದ್ದು, ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಸದ್ಯ ರಕ್ಷಿತಾ ಪೋಸ್ಟ್ ಡಿ-ಬಾಸ್ ಫ್ಯಾನ್ಸ್ ಪೇಜ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಟೆನ್ಷನ್ ಗಿಟ್ಟಿಸಿಕೊಳ್ಳುವವರಿಗೆ ರಕ್ಷಿತಾ ಅವರ ಸಂದೇಶ ಇಲ್ಲ ಎನ್ನುತ್ತಿದ್ದಾರೆ.

 ರಮ್ಯಾಗೆ ಹೆದರಿದ್ರಾ ಡಿ ಬಾಸ್ ಫ್ಯಾನ್ಸ್

ಇನ್ನೊಂದ್ಕಡೆ ಅಶ್ಲೀಲವಾಗಿ ಮ್ಯಾಸೇಜ್ ಮಾಡಿದ್ದಕ್ಕೆ ರಮ್ಯಾ ಸಿಡಿದೇಳುತ್ತಿದ್ದಂತೆ ದರ್ಶನ್ ಫ್ಯಾನ್ಸ್ ಫುಲ್ ಸೈಲೆಂಟ್ ಆಗಿದ್ದಾರೆ. ಕೆಲ ಫ್ಯಾನ್ಸ್‌ಗಳು ಯಾರು ಯಾವುದ್ದಕ್ಕೂ ರಿಪ್ಲೈ ಮಾಡಬೇಡಿ.. ಕಾಲಯ ತಸ್ಮೈ ನಮಃ ಅಂತ ಪೋಸ್ಟ್ ಹಾಕಿದ್ದಾರೆ. ಅಂದ್ರೆ ಕೆಟ್ಟದಾಗಿ ಮ್ಯಾಸೇಜ್ ಮಾಡಿದ್ರೆ ಅದು ನಮ್ಗೆ ಏಫೆಕ್ಟ್ ಆಗುತ್ತೆ ಅಂತ ಡಿ ಬಾಸ್ ಫ್ಯಾನ್ಸ್ ಅರಿತುಕೊಡಂತೆ ಕಾಣುತ್ತೆ..

 ರಮ್ಯಾಗೆ ಕೌಂಟರ್ ಕೊಟ್ರಾ ವಿಜಯಲಕ್ಷ್ಮೀ

ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ವಾರ್ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ.. ಒಂದು   ದರ್ಶನ್ ಫ್ಯಾನ್ಸ್ ಮಾಡಿರೋ .. ಕಾಲಯ ತಸ್ಮೈ ನಮಃ ಫೋಸ್ಟ್ ಹಾಕಿಕೊಂಡ್ರೆ, ಮತ್ತೊಂದು ಮೂರ್ಖನನ್ನ ಅವನ ಮಾತಿನಿಂದ ಗುರುತಿಸಬಹುದು. ಮತ್ತು ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು ಎಂದು ನಟಿ ವಿಜಯಲಕ್ಷ್ಮಿ ಅವರ ಇನ್ಸ್ಟಾ ಫೋಸ್ಟ್ ಹಾಕಿಕೊಂಡಿದ್ದಾರೆ..

Kishor KV