3 ಕಾದಂಬರಿ.. ಡೆವಿಲ್ ಕಥೆ ಇದಾ? – ಫಾರಿನ್ ಸ್ಟೋರಿ ದಾಸನ ಕೈ ಹಿಡಿಯುತ್ತಾ?

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಅಂದ್ರೆ ಡೆವಿಲ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಚೆನ್ನಾಗಿದ್ರೆ ಇಷ್ಟೊತ್ತಿಗೆ ಸಿನಿಮಾ ರಿಲೀಸ್ ಆಗಿರ್ತಿತ್ತು. ಆದ್ರೆ ದಾಸ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ರು. ಆರು ತಿಂಗಳ ಕಾಲ ಸೆರೆವಾಸದಲ್ಲಿ ಇದ್ದಿದ್ರಿಂದ ಸಿನಿಮಾ ಶೂಟಿಂಗ್ ಕೂಡ ಮುಂದಕ್ಕೆ ಹೋಗಿತ್ತು. ಇದೀಗ ಡೆವಿಲ್ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ ಎಂದು ಹೇಳಲಾಗ್ತಿದೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗ್ತಿದೆ. ಇದ್ರ ಬೆನ್ನಲ್ಲೇ ಡೆವಿಲ್ ಸಿನಿಮಾ ಸ್ಟೋರಿ ಏನು? ಯಾವುದ್ರ ಮೇಲೆ ಸಿನಿಮಾ ಮಾಡಿದ್ದಾರೆ? ದರ್ಶನ್ ಪಾತ್ರ ಏನು ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ. ಇದೀಗ ಡೆವಿಲ್ ಸಿನಿಮಾ ಸ್ಟೋರಿ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಇದನ್ನೂ ಓದಿ: ಸುನೀಲ್ ಅಮ್ರಿಟಾ ವಿನ್ನರ್? – ಫಿನಾಲೆ ಮುನ್ನವೇ ರಿಸಲ್ಟ್ ಲೀಕ್?
ನಟ ದರ್ಶನ್ ಜೈಲಿಗೆ ಹೋಗಿ ಬಂದ್ಮೇಲೆ ರಿಲೀಸ್ ಆಗ್ತಿರೋ ಮೊದಲ ಸಿನಿಮಾ ಡೆವಿಲ್.. ದಾಸ ಅಭಿನಯಿಸಿದ್ದಾರೆ ಅನ್ನೋ ಕಾರಣಕ್ಕೆ ಡೆವಿಲ್ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿದೆ. ಈಗಾಗಲೇ ಶೂಟಿಂಗ್ ಅಲ್‌ಮೋಸ್ಟ್ ಕಂಪ್ಲೀಟ್ ಆಗಿದೆ. ಡೆವಿಲ್ ಚಿತ್ರದಲ್ಲಿ ಸಿಜಿ ವರ್ಕ್ ಜಾಸ್ತಿ ಇದೆ. ಹೀಗಾಗಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹೆಚ್ಚು ಸಮಯ ತಗೊತಿದೆ. ಆದ್ರೆ ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ವರ್ಷ ತೆರೆಗೆ ಬರೋದು ಪಕ್ಕಾ.. ಆದ್ರೆ ದಸರಾಗೆ ಬರುತ್ತಾ? ಅಥವಾ ಕ್ರಿಸ್ ಮಸ್ ಗೆ ಬರುತ್ತಾ ಅನ್ನೋ ಕ್ಲಾರಿಟಿ ಇನ್ನೂ ಸಿಕ್ಕಿಲ್ಲ.. ಆದ್ರೆ ದರ್ಶನ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಲೆಕ್ಕಾಚಾರ ಜೋರಾಗಿದೆ.
ಅಂದ್ಹಾಗೆ ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮೂಡಿ ಬರ್ತಿದೆ. ಡೆವಿಲ್ ಸಿನಿಮಾ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ದಾಸನನ್ನ ಕಂಡು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ರು. ತಾರಕ್ ಸಿನಿಮಾ ಬಳಿಕ ದರ್ಶನ್ ಹಾಗೂ ಪ್ರಕಾಶ್ ವೀರ್ ಡೆವಿಲ್ ಚಿತ್ರಕ್ಕಾಗಿ ಮತ್ತೆ ಕೈ ಜೋಡಿಸಿದ್ದಾರೆ. ಕಳೆದ ವರ್ಷ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಅದ್ರಲ್ಲಿ ನಮ್ಮ ಮನೆಯಲ್ಲೊಂದು ಸಣ್ಣ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು.. ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು ಅನ್ನೋ ಸಖತ್ ಸೌಂಡ್ ಮಾಡಿತ್ತು. ಅದರಲ್ಲಿ ದರ್ಶನ್ ಲುಕ್, ಮ್ಯಾನರಿಸಂ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇತ್ತೀಚೆಗೆ ರಿಲೀಸ್ ಆದ ಪೋಸ್ಟರ್ ಕೂಡ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಟೀಸರ್ ಪೋಸ್ಟರ್ ನೋಡಿದ ಫ್ಯಾನ್ಸ್ ಸಿನಿಮಾ ಕತೆ ಏನು ಅನ್ನೋ ಕುತೂಹಲ ಮೂಡಿದೆ. ಇದೀಗ ದರ್ಶನ್ ಅಭಿಮಾನಿಗಳು ಸಿನಿಮಾ ಬಗ್ಗೆ ಸಾಕಷ್ಟು ರೀಸರ್ಚ್ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್, ಟೀಸರ್ ಹಾಗೂ ಮೇಕಿಂಗ್ ವೀಡಿಯೋದಲ್ಲಿರುವ ಕೆಲ ಸಂಗತಿಗಳನ್ನು ಆಧರಿಸಿ ಚಿತ್ರದ ಕಥೆ ಏನು? ಕಾನ್ಸೆಪ್ಟ್ ಏನಿರಬಹುದು? ಎಂದು ಗೆಸ್ ಮಾಡಿದ್ದಾರೆ. ಅಮೆರಿಕದ ಲೇಖಕ ಡಾನ್ ಬ್ರೌನ್ ಬರೆದ 3 ಕಾದಂಬರಿಗಳೇ ಡೆವಿಲ್ ಚಿತ್ರದ ಕಥೆಗೆ ಸ್ಫೂರ್ತಿ ಅನ್ನೋ ವಿಚಾರ ಕಂಡು ಹಿಡಿದಿದ್ದಾರೆ.
ಹೌದು, ಡೆವಿಲ್ ಸಿನಿಮಾದಲ್ಲಿ ಕರುನಾಡ ಪ್ರಜಾ ಪಕ್ಷದಿಂದ ಗೆದ್ದು ಮುಖ್ಯಮಂತ್ರಿ ಆಗಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ಡೆವಿಲ್ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎಂದು ಕೆಲವರು ಭಾವಿಸಿದ್ದರು. ಆದರೆ ಅದಕ್ಕಿಂತ ಭಿನ್ನವಾಗಿ ನಿರ್ದೇಶಕ ಪ್ರಕಾಶ್ ವೀರ್ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ. ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಟೀಸರ್, ಪೋಸ್ಟರ್ ಮೇಕಿಂಗ್ ವಿಡಿಯೋದಲ್ಲಿ ಬಳಸಿರೋ ಕೆಲ ಲೋಗೊಗಳು, ಚಿತ್ರಗಳು ಆದರಿಸಿ ಇದೊಂದು ಕಾದಂಬರಿ ಆಧಾರಿತ ಸಿನಿಮಾ ಅಂತ ಕಂಡು ಹಿಡಿದಿದ್ದಾರೆ. ಈ ಚಿತ್ರದಲ್ಲಿ ಇಲ್ಯುಮಿನಾಟಿ ಕಾನ್ಸೆಪ್ಟ್ ಅನ್ನು ಕೂಡ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕಿದ್ದಾರೆ. ಡಾನ್ ಬ್ರೌನ್ ಬರೆದ ಲೆ ಸಿಂಬೋಲ್ ಪೆರ್ಡು, ಇಲ್ಯುಮಿನಾಟಿ ಹಾಗೂ ಏಂಜಲ್ಸ್ ಅಂಡ್ ಡಿಮೊನ್ಸ್ ಎಂಬ ಕಾದಂಬರಿಗಳನ್ನು ಆಧರಿಸಿ ಪ್ರಕಾಶ್ ಡೆವಿಲ್ ಸಿನಿಮಾ ಕಥೆ ಮಾಡಿದ್ದಾರೆ ಅನ್ನೋ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.
ಇನ್ನು ಪ್ರಕಾಶ್ ವೀರ್ ಡೆವಿಲ್ ಸಿನಿಮಾ ನಿರ್ದೇಶನದ ಜೊತೆಗೆ ತಾವೇ ಚಿತ್ರಕ್ಕೆ ಬಂಡವಾಳ ಸಹ ಹೂಡಿದ್ದಾರೆ. ಡೆವಿಲ್ ಸಿನಿಮಾದ ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗು ಥಾಯ್ಲೆಂಡ್‌ನಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ದರ್ಶನ್ ತಂದೆ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್ ನಟಿಸಿದ್ದಾರೆ ಎನ್ನಲಾಗ್ತಿದೆ. ಅಚ್ಯುತ್ ಕುಮಾರ್, ಅವಿನಾಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಚನಾ ರೈ ನಾಯಕಿಯಾಗಿ ಮಿಂಚಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ‘ಡೆವಿಲ್’ ಚಿತ್ರಕ್ಕಿದೆ. ಕಾಟೇರ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಬರುತ್ತಿರುವ ದರ್ಶನ್ ಸಿನಿಮಾ ಇದ್ದಾಗಿದ್ದು, ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಕಮಾಲ್ ಮಾಡಲಿದೆ ಅಂತಾ ಕಾದು ನೋಡ್ಬೇಕು.

ನೋಡಿರಿ

