ದರ್ಶನ್ಗೆ ಜಡ್ಜ್ ವಾರ್ನಿಂಗ್ – ವಿಜಯಲಕ್ಷ್ಮೀಗೆ ಖುಷಿನೋ ಖುಷಿ
ಫಾರಿನ್ ಹೋಗೋಕೆ ಡಿಬಾಸ್ ರೆಡಿ!?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಮಂಗಳವಾರ ಅಂದ್ರೆ ಇವತ್ತು ಕೋರ್ಟ್‌ಗೆ ಹಾಜರಾಗಬೇಕಿತ್ತು. ಸಿಸಿಎಸ್ ಕೋರ್ಟ್‌ನಲ್ಲಿ ದರ್ಶನ್ ಸೇರಿ ಒಟ್ಟು 17 ಜನ ಆರೋಪಿಗಳು ವಿಚಾರಣೆಗೆ ಇಂದು ಹಾಜರಾಗಬೇಕಿತ್ತು. ಆದರೆ ದರ್ಶನ್ ಕೋರ್ಟ್‌ಗೆ ಹಾಜರಾಗಿಲ್ಲ. ದರ್ಶನ್ ಅವರನ್ನು ಹೊರತುಪಡಿಸಿ ನಟಿ ಪವಿತ್ರಾ ಗೌಡ ಕೋರ್ಟ್‌ಗೆ ಹಾಜರಾಗಿದ್ದಾರೆ. ಜೊತೆಗೆ ಉಳಿದ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಆದ್ರೆ ದರ್ಶನ್ ಕೋರ್ಟ್ ಹಾಜರಾಗದ ಹಿನ್ನಲೇ, ಕೋರ್ಟ್ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿದೆ.
ಇತ್ತೀಚೆಗೆ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ತುಂಬಾ ಬ್ಯೂಸಿ ಆಗಿದ್ದಾರೆ. ಶೂಟಿಂಗ್ ಪ್ರಯುಕ್ತ ದೇಶದಾದ್ಯಂತ ಸುತ್ತುವ ಅನುಮತಿಯನ್ನು ಪಡೆದಿರುವ ದಾಸ ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಜೈಪುರಕ್ಕೆ ಹೋಗಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಜೊತೆಗೆ ಬೆಂಗಳೂರು, ಮೈಸೂರಿನಲ್ಲೂ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾಗುತ್ತಿದ್ದಾರೆ. ಶೂಟಿಂಗ್ ಸಮಯದಲ್ಲಿ ದರ್ಶನ್ ಅರ್ಧಕ್ಕೆ ಶೂಟಿಂಗ್ ಸಿಲ್ಲಿಸಿ ವಾಪಸ್ ಬಂದಿರೋ ಸುದ್ದಿಗಳಿಲ್ಲ. ಆದರೆ ಕೋರ್ಟ್‌ಗೆ ಹಾಜರಾಗಲು ದರ್ಶನ್ ಬೆನ್ನು ನೋವಿನ ಕಾರಣ ನೀಡಿದ್ದಾರೆ. ದರ್ಶನ್‌ಗೆ ಬೆನ್ನು ನೋವು ಇದ್ದಿದ್ದರೆ ಸಿನಿಮಾ ಶೂಟಿಂಗ್‌ಗೆ ಹೇಗೆ ಹಾಜರಾದರೂ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಶೂಟಿಂಗ್‌ಗಾಗಿ ಬೆಂಗಳೂರು, ಮೈಸೂರು, ರಾಜಸ್ಥಾನ ಸುತ್ತುತ್ತಿರುವ ದರ್ಶನ್‌ಗೆ ಕೋರ್ಟ್‌ಗೆ ಹಾಜರಾಗಲು ಬೆನ್ನು ನೋವು ಕಾಣಿಸಿಕೊಂಡಿತಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾಡತೊಡಗಿದೆ.
ದರ್ಶನ್‌ಗೆ ಜಡ್ಜ್ ಕ್ಲಾಸ್
ಇನ್ನೂ ದರ್ಶನ್ ಗೈರಿಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆಗೆ ಹಾಜರಾಗದೇ ಇದ್ದಿದ್ದರಿಂದ ದರ್ಶನ್‌ಗೆ ಜಡ್ಜ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತೀ ವಿಚಾರಣೆಗ ಹಾಜರಾಗಲೇ ಬೇಕು ಎಂದು ಜಡ್ಜ್ ಎಚ್ಚರಿಕೆ ಕೊಟ್ಟಿದ್ದಾರೆ. ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ದರ್ಶನ್ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಕೋರ್ಟ್, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಈ ವೇಳೆ ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್‌ಗಳ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು.
ಸುಪ್ರೀಂ ಮೊರೆ ಹೋದ ಬೆಂಗಳೂರು ಖಾಕಿ
ಇದರ ನಡುವೆ ಜಾಮೀನ ರದ್ದತಿ ಕೋರಿ ಬೆಂಗಳೂರು ಪೊಲೀಸರು ಸುಪ್ರಿಂಕೋರ್ಟ್ ಮೊರೆ ಹೋಗಿದ್ದಾರೆ ಏಪ್ರಿಲ್ 2ರಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಏಪ್ರಿಲ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಒಂದು ವೇಳೆ ಸುಪ್ರಿಂಕೋರ್ಟ್‌ನಲ್ಲಿ ಜಾಮೀನು ರದಾದರೆ, ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ಮತ್ತೆ ಜೈಲು ಪಾಲಾಗಬೇಕಾಗುತ್ತದೆ.
ವಿದೇಶದ ವಿಮಾನ ಹತ್ತೋಕೆ ಡಿಬಾಸ್‌ಗೆ ಪರ್ಮಿಷನ್ ಸಿಗುತ್ತಾ?
ಗನ್ ಲೈಸೆನ್ಸ್ ರದ್ದು ಬಳಿಕ ಮತ್ತೊಂದು ಲೈಸೆನ್ಸ್ ಪಡೆಯಲು ದರ್ಶನ್ ಕೋರ್ಟ್‌ಗೆ ಹೋಗಲು ಸಜ್ಜಾಗಿದ್ದಾರೆ. ವಿದೇಶಕ್ಕೆ ಹೋಗಬೇಕಾದ್ದರಿಂದ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಕೊಲೆ ಆರೋಪಿಯಾಗಿರುವ ದರ್ಶನ್ ವಿದೇಶಕ್ಕೆ ಹೋಗಲು ಕೋರ್ಟ್ ನಿರ್ಬಂಧ ಹೇರಿತ್ತು. ಡೆವಿಲ್ ಶೂಟಿಂಗ್‌ಗೆ ವಿದೇಶಕ್ಕೆ ಹೋಗಲು ಕೋರ್ಟ್ ಪರವಾನಗಿ ಕೇಳಲು ದರ್ಶನ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವರ್ಷ ಜೂನ್, ಜುಲೈನಲ್ಲಿ ಚಿತ್ರತಂಡವು ವಿದೇಶದಲ್ಲಿ ಶೂಟಿಂಗ್ ಮಾಡಲು ಪ್ಲಾನ್ ಮಾಡಿದೆ. ಡೆವಿಲ್ ಚಿತ್ರವನ್ನು ಈ ವರ್ಷವೇ ರಿಲೀಸ್ ಮಾಡಲು ನಿರ್ದೇಶಕ ಪ್ರಕಾಶ್ ಪ್ಲಾನ್ ಮಾಡಿಕೊಂಡಿದ್ದು, ಡೆವಿಲ್ 50% ಶೂಟಿಂಗ್ ನಿರ್ದೇಶಕ ಪ್ರಕಾಶ್ ಮುಗಿಸಿದ್ದಾರೆ. ಫಾರಿನ್ ನಲ್ಲಿ ಸಾಂಗ್ ಹಾಗೂ ಆಕ್ಷನ್ ಸೀಕ್ವೆನ್ಸ್ ಗಳ ಶೂಟಿಂಗ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಕೊಲೆ ಆರೋಪಕ್ಕೂ ಮೊದಲು ಬ್ಯಾಂಕಾಕ್ ನಲ್ಲಿ 30 ದಿನಗಳ ಶೂಟಿಂಗ್ ಪ್ಲಾನ್ ಮಾಡಿತ್ತು ಚಿತ್ರತಂಡ. ಈಗ ಅದೇ ಶೇಡ್ಯೂಲ್ ಅನ್ನು ಮಾಡಲು ಸಿದ್ದತೆ ಮಾಡುತ್ತಿದ್ದು, ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಕೇಳಲು ದರ್ಶನ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ . ಆದ್ರೆ ಇದ್ದಕ್ಕೆ ಕೋರ್ಟ್ ಪರ್ಮಿಷನ್ ಕೊಡುತ್ತಾ ಅನ್ನೋದು ಎಲ್ಲರನ್ನ ಕಾಡುತ್ತಿರೋ ಯಕ್ಷ ಪ್ರಶ್ನೆಯಾಗಿದೆ.
ಸಖತ್ ಖುಷಿಯಲ್ಲಿರೋ ವಿಜಯಲಕ್ಷ್ಮೀ..
ಹೌದು.. ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಖತ್ ಖುಷಿಯಲ್ಲಿದ್ದಾರೆ. ಪಿಂಕ್ ಕಲರ್ ಸೀರೆಯಲ್ಲಿ ವಿಜಯಲಕ್ಷ್ಮೀ ಮಿಂಚುತಿದ್ದು, ತಮ್ಮ ಫೋಟೋವನ್ನ ಇನ್ಸ್ಟಾ ಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ದರ್ಶನ್ ಜೈಲಿಗೆ ಹೋಗಿ ಬಂದ ಮೇಲೆ ದರ್ಶನ್ ಕೂಡ ಹೆಂಡತಿ ಜೊತೆ ಕಾಲ ಕಳೆಯುತಿದ್ದು, ವಿಜಯಲಕ್ಷ್ಮೀ ಬದುಕು ಕೂಡ ಬದಲಾಗಿದೆ. ಒಟ್ನಲ್ಲಿ ಕೊಲೆ ಕೇಸ್‌ನಲ್ಲಿ ಜೈಲಿನಿಂದ ಹೊರ ಬಂದ ದರ್ಶನ್ ಕಾನೂನು ಕುಣಿಯಿಂದ ಯಾವಾಗ ತಪ್ಪಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮೂಲಕ ಹಂಚಿಕೊಳ್ಳಿ. ನಮಸ್ಕಾರ..