ದರ್ಶನ್ ಕೇಸ್‌ನಲ್ಲಿ ಮತ್ತೆ ಟ್ವಿಸ್ಟ್! ವಿಜಯಲಕ್ಷ್ಮಿ ಮೇಲ್ಮನವಿ.. ಮುಂದೆ ಏನಾಗುತ್ತೆ?

ದರ್ಶನ್ ಕೇಸ್‌ನಲ್ಲಿ ಮತ್ತೆ ಟ್ವಿಸ್ಟ್! ವಿಜಯಲಕ್ಷ್ಮಿ ಮೇಲ್ಮನವಿ.. ಮುಂದೆ ಏನಾಗುತ್ತೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೊಂದು ಕಾನೂನು ಹೋರಾಟ ಎದುರಾಗಿದೆ.  ದರ್ಶನ್ ಪರವಾಗಿ ವಿಜಯಲಕ್ಷ್ಮಿ ರಿಂದಲೂ ಮೇಲ್ಮನವಿ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಒಟ್ಟು 3 ಮೇಲ್ಮನವಿ ಸಲ್ಲಿಸಿದ ದರ್ಶನ್ ಸದ್ಯ ಅದರ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಮೊದಲು ವಿಚಾರಣಾ ನ್ಯಾಯಾಲಯ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಆದೇಶ ನೀಡಿತ್ತು. ಇದನ್ನು ದರ್ಶನ್ ಪರವಾಗಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಸೆಪ್ಟೆಂಬರ್ 8ರಂದು ವಿಚಾರಣಾ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಪಡಿಸಿ, ಕಾನೂನು ಪ್ರಕಾರ ಹೊಸದಾಗಿ ಆದೇಶ ನೀಡುವಂತೆ ಸೂಚಿಸಿತ್ತು. ಬಳಿಕ ಸೆಪ್ಟೆಂಬರ್ 16ರಂದು ವಿಚಾರಣಾ ನ್ಯಾಯಾಲಯ ಮತ್ತೆ ಪ್ರದೋಷ್‌ಗೆ ಮಾಫಿ ನೀಡಿ ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಹೊಸ ಆದೇಶ ಹೊರಡಿಸಿತು.

ಇದನ್ನೂ ಓದಿ: ಶಾಲಾ ಬಸ್ ಹರಿದು 1.5 ವರ್ಷದ ಮಗು ಸಾ*ವು!- ಅಮ್ಮನ ಜೊತೆ ಖುಷಿಯಾಗಿ ಹೋದ ಕಂದಮ್ಮನ ದಾರುಣ ಅಂತ್ಯ!

ಈಗ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಒಟ್ಟು 3 ಮೇಲ್ಮನವಿ ಅರ್ಜಿ ದರ್ಶನ್ ಪರವಾಗಿ ಸಲ್ಲಿಸಲಾಗಿದೆ.
ಈ ಕೇಸ್​ನಲ್ಲಿ ಆರೋಪಿಯಾಗಿದ್ದ ಪ್ರದೋಷ್ ಈಗ ಆರೋಪಿ ಅಲ್ಲ. ಸದ್ಯ ಚಾರ್ಜ್​ಶೀಟ್ ಲಿಸ್ಟ್​ನಿಂದ ಪ್ರದೋಷ್ ಹೆಸರು ಡಿಲೀಟ್ ಮಾಡಲು ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ನಿಗದಿಯಾಗಿದ್ದಂತೆ ಸೆ. 28 ಹಾಗೂ 29ರಂದು ಅಂದರೆ ನಿನ್ನೆ ಹಾಗೂ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ನಡುವೆ ದರ್ಶನ್ ಲಾಯರ್ ಪ್ರದೋಷ್ ವಿರುದ್ಧ ಗರಂ ಆಗಿದ್ದು ಆ ಒಂದು ನಡೆಯನ್ನು ವಿರೋಧಿಸಿದ್ದಾರೆ. ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿ 15 ನಿಮಿಷ ಲಾಯರ್ ಜೊತೆ ಪ್ರದೋಷ್ ಮಾತನಾಡಿದ್ದು, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದರ್ಶನ್ ಲಾಯರ್ ಆರೋಪಿಸಿದ್ದಾರೆ.

ಈ ಹೊಸ ಆದೇಶವನ್ನೂ ಪ್ರಶ್ನಿಸಿ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸೆಪ್ಟೆಂಬರ್ 23ರಂದು ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿ, ಪ್ರದೋಷ್ ಮಾಫಿ ಸಾಕ್ಷಿಯಾಗಿರುವುದನ್ನು ಎತ್ತಿಹಿಡಿದಿದೆ. ಮಾಫಿ ಸಾಕ್ಷಿಯಾಗಲು ಆರೋಪಿಗೆ ಅವಕಾಶವಿದ್ದು, ಇತರ ಸಹ ಆರೋಪಿಗಳಿಗೆ ಆ ಪ್ರಕ್ರಿಯೆಯನ್ನು ವಿರೋಧಿಸಿ ಮುಂಚಿತವಾಗಿ ವಾದಿಸುವ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಿದ್ಧತೆ ನಡೆದಿದೆ. ಇದೇ ವೇಳೆ ಪ್ರದೋಷ್ ರಾವ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯೂ ಮುಂದುವರಿದಿದೆ. ಸೆಪ್ಟೆಂಬರ್ 28ರಂದು ಅವರ ಹೇಳಿಕೆ ದಾಖಲಿಸುವುದಕ್ಕೆ ವಿಚಾರಣಾ ನ್ಯಾಯಾಲಯ ಅನುಮತಿ ನೀಡಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದ ಕಾನೂನು ಹೋರಾಟ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Kishor KV

Leave a Reply

Your email address will not be published. Required fields are marked *