ವಿಜಯಲಕ್ಷ್ಮಿ ಮುಂದೆ ದಾಸನ ಗೋಳಾಟ! – ಜೈಲಿಗೆ ಬರಬೇಡ ಎಂದು ಹೇಳಿದ ದರ್ಶನ್!

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಗೆ ನರಕ ದರ್ಶನವಾಗಿದೆ. ಐಶರಾಮಿ ಜೀವನ ನಡೆಸ್ತಿದ್ದ ದರ್ಶನ್ ಈಗ ಜೈಲಿನಲ್ಲಿ ಸೌಲಭ್ಯ ವಂಚಿತರಾಗಿದ್ದಾರೆ. ಹಾಸಿಗೆ ದಿಂಬು ನೀಡುವಂತೆ ಅಂಗಲಾಚಿದ್ರೂ ಜೈಲಾಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ. ಇದೀಗ ಗಂಡನ ಸ್ಥಿತಿಯನ್ನ ನೋಡಿ ವಿಜಯಲಕ್ಷ್ಮೀ ಕಣ್ಣಿರು ಹಾಕಿದ್ರೆ, ದರ್ಶನ್ ನನ್ನನ್ನ ನೋಡೋಕೆ ಬರ್ಬೇಡ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮೊದಲ ವಾರ ಒಬ್ಬರಲ್ಲ.. ಇಬ್ಬರು ಔಟ್! – ದೊಡ್ಮನೆಯಿಂದ ಆಚೆ ಹೋಗೋ ಸ್ಪರ್ಧಿ ಇವರೇ!
ರೇಣುಕಾಸ್ವಾಮಿ ಕೇಸ್‌ಲ್ಲಿ ನಲ್ಲಿ ನಟ ದರ್ಶನ್ ಗೆ ಸಂಕಷ್ಟ ತಪ್ಪುತ್ತಿಲ್ಲ. ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದರ್ಶನ್, ಮತ್ತೆ ಜೈಲು ಸೇರಿದ್ದಾರೆ. ಇದೀಗ ಪರಪ್ಪನ ಅಗ್ರಹಾರದಲ್ಲಿದ್ದು, ನರಕಯಾತನೆ ಅನುಭವಿಸ್ತಿದ್ದಾರೆ. ಹಾಸಿಗೆ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಜೈಲಧಿಕಾರಿಗಳ ಮುಂದೆ ಅಂಗಲಾಚಿದರೂ ಕೂಡ ಏನು ಲಾಭವಿಲ್ಲ. ಇನ್ನೂ ಕೂರಲು ಖುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ದೇಹಕ್ಕೆ ಆಕ್ಟಿವಿಟಿಯಿಲ್ಲದೆ ಕಷ್ಟವಾಗುತ್ತಿದೆ ಎಂದು ವಿಜಯಲಕ್ಷ್ಮಿ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ. ದಾಸನ ಸ್ಥಿತಿಯನ್ನ ನೋಡಿ ವಿಜಯಲಕ್ಷ್ಮೀ ಕಣ್ಣಿರು ಹಾಕಿದ್ದಾರೆ.
ಮತ್ತೊಂದ್ಕಡೆ ವಿಜಯಲಕ್ಷ್ಮಿ ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿಗೆ ಬಂದು ಗಂಟೆಗಟ್ಟಲೇ ಕಾದು ಬಳಿಕ ದರ್ಶನ್ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್ ನಮ್ಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನ್ಮುಂದೆ ಜೈಲಿಗೆ ಬರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನಲಾಗ್ತಿದೆ.

ನೋಡಿರಿ

