ದರ್ಶನ್ ಜೈಲಿನಲ್ಲಿದ್ರೂ ರೈಫಲ್ ಸೀಜ್ ಮಾಡಿಲ್ಲ ಯಾಕೆ? – ಪೊಲೀಸರ ಮೇಲೆಯೇ ಶುರುವಾಯ್ತು ಡೌಟ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೆರೆವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ದಾಸನಿಗೆ ನರಕ ದರ್ಶನವಾಗಿದೆ. ಆದ್ರೀಗ ದರ್ಶನ್ ವಿಚಾರವಾಗಿ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದೆ. ಇದೀಗ ಪೊಲೀಸರೇ ಇದೊಂದು ವಿಚಾರದಲ್ಲಿ ಕಳ್ಳಾಟ ಮಾಡಿದ್ರಾ ಅನ್ನೋ ಅನುಮಾನ ಶುರುವಾಗಿದೆ.
ಇದನ್ನೂ ಓದಿ: ವಿಲನ್ ಆಟಕ್ಕೆ ದೊಡ್ಮನೆ ಮಂದಿ ವಿಲವಿಲ! – ಅಶ್ವಿನಿಗೆ ಟಾಸ್ಕ್.. ಮಾಳು ಕೂದಲಿಗೆ ಕತ್ತರಿ!
ನಟ ದರ್ಶನ್ ಬಳಿ ಪರವಾನಗಿ ಪಡೆದ ಎರಡು ಶಸ್ತ್ರಾಸ್ತ್ರಗಳಿದ್ದವು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗ್ತಿದ್ದಂತೆ ದರ್ಶನ್ಗೆ ನೀಡಲಾಗಿದ್ದ ಪಿಸ್ತೂಲ್ ಲೈಸೆನ್ಸ್ ಅನ್ನು ಸಸ್ಪೆಂಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ RR ನಗರ ಪೊಲೀಸರು ದರ್ಶನ್ ಅಪಾರ್ಟ್ಮೆಂಟ್ನಿಂದ .32 mm ವಾಲ್ಥರ್ PPK ಪಿಸ್ತೂಲನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಆದ್ರೆ .22 mm ರೈಫಲ್ ಮತ್ತು ಬುಲೆಟ್ಗಳನ್ನ ಇನ್ನೂ ಸೀಜ್ ಮಾಡಿಲ್ಲ. ಈ ರೈಫಲ್ ಮೈಸೂರಿನ ಫಾರ್ಮ್ ಹೌಸ್ನಲ್ಲಿ ಅಥವಾ ಬೆಂಗಳೂರಿನ ಮನೆಯಲ್ಲಿ ಅಡಗಿದೆ ಎನ್ನಲಾಗಿದೆ. ಇದೀಗ .22 mm ರೈಫಲ್ ಮತ್ತು ಬುಲೆಟ್ಗಳು ಇನ್ನೂ ಸೀಜ್ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ದಾಖಲಾಗಿ ತಿಂಗಳುಗಳು ಕಳೆದರೂ ಮೈಸೂರು ಗ್ರಾಮಾಂತರ ಪೊಲೀಸರು ದರ್ಶನ್ ಬಳಿ ಇರುವ ರೈಫಲ್ ಮತ್ತು ಬುಲೆಟ್ಗಳನ್ನು ಸೀಜ್ ಮಾಡಿಲ್ಲ. ಒಂದು ಕಡೆ ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಂಡರೆ, ಇನ್ನೊಂದು ಕಡೆ ಮೈಸೂರು ಗ್ರಾಮಾಂತರ ಪೊಲೀಸರು ಕೊಲೆ ಆರೋಪಿಯ ಬಳಿ ಇರುವ ಮಾರಕ ರೈಫಲ್ನ ಕುರಿತು ನಿರ್ಲಕ್ಷ್ಯ ತಾಳಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಪೊಲೀಸರ ಕರ್ತವ್ಯ ಲೋಪವೇ ಅಥವಾ ದರ್ಶನ್ನ ಪ್ರಭಾವಕ್ಕೆ ಮಣಿದಿರುವ ಕಳ್ಳಾಟವೇ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕೂಡಲೇ ಮೈಸೂರು ಗ್ರಾಮಾಂತರ ಪೊಲೀಸರು ಇನ್ನಾದ್ರೂ ಎಚ್ಚೆತ್ತುಕೊಂಡು ಈ ರೈಫಲನ್ನು ವಶಕ್ಕೆ ಪಡೆಯುತ್ತಾರಾ ಎಂದು ಕಾದುನೋಡ್ಬೇಕು.
ಅಂದ್ಹಾಗೆ, ಕೊಲೆ ಅಥವಾ ಗಂಭೀರ ಅಪರಾಧ ಪ್ರಕರಣದಲ್ಲಿ ಆರೋಪಿಯಾದ ತಕ್ಷಣವೇ ಆತನ ಬಳಿಯಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂಬ ನಿಯಮವಿದೆ. ಗನ್ ಬಳಸಿ ಆರೋಪಿಯು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ಬೇರೆ ಅಪರಾಧ ಚಟುವಟಿಕೆ ನಡೆಸುವ ಸಾಧ್ಯತೆ ಇರುವುದರಿಂದ ಈ ಕ್ರಮ ಅನಿವಾರ್ಯ. ಆರೋಪಿಯು ಶಸ್ತ್ರಾಸ್ತ್ರ ನೀಡಲು ನಿರಾಕರಿಸಿದರೆ, ಆತನ ಮೇಲೆ ‘ಆರ್ಮ್ಸ್ ಆ್ಯಕ್ಟ್’ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ಸಹ ದಾಖಲಿಸಬಹುದು.

ನೋಡಿರಿ

