ಶಬರಿಮಲೆಯಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನ ಆರಂಭ
ವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ದೇಗುಲ ಪ್ರವೇಶ

ಶಬರಿಮಲೆಯಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನ ಆರಂಭವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ದೇಗುಲ ಪ್ರವೇಶ

 ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ನವೆಂಬರ್ 17ರಿಂದ ಆರಂಭವಾಗಲಿದೆ. ನವೆಂಬರ್ 16ರಂದು ಅಯ್ಯಪ್ಪ ದೇಗುಲದ ಬಾಗಿಲು ತೆರೆದಿದ್ದು, ಎರಡು ತಿಂಗಳವರೆಗೆ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಭಕ್ತರು ಮಾಡಬಹುದು. ಇದರ ಜೊತೆಗೆ ವಾರ್ಷಿಕ ಮಂಡಲಂ-ಮಕರವಿಳುಕ್ಕು ಯಾತ್ರೆಗೂ ಚಾಲನೆ ಸಿಗಲಿದೆ

ಇದನ್ನೂ ಓದಿ: ಕೆಲವರಿಗೆ ಮಾತ್ರ ಸೊಳ್ಳೆ ಜಾಸ್ತಿ ಕಚ್ಚೋದು ಯಾಕೆ?

ನವೆಂಬರ್ 16ರಂದು ದೇಗುಲದ ಹಾಲಿ ಪ್ರಧಾನ ಅರ್ಚಕರಾದ ಕಂಡರಾರು ರಾಜೀವರು ಮತ್ತು ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂದಿರಿ ಅವರ ಸಮಕ್ಷಮದಲ್ಲಿ ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಅಯ್ಯಪ್ಪ ಮತ್ತು ಮಲಿಕಾಪುರಮ್ ದೇಗುಲಗಳ ಮುಖ್ಯ ಅರ್ಚಕರು ಪೂಜಾ ವಿಧಿಗಳನ್ನು ಆರಂಭಿಸುವ ಮೂಲಕ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ. 41 ದಿನಗಳ ಮಂಡಲ ಪೂಜಾ ವಿಧಿಗಳು ಡಿ 27ಕ್ಕೆ ಮುಕ್ತಾಯವಾಗಲಿದೆ.

ನಂತರ ಮೂರು ದಿನಗಳ ಕಾಲ ದೇಗುಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಡಿ 30ರಿಂದ ಮಕರವಿಳುಕ್ಕು ಯಾತ್ರೆಗಾಗಿ ದೇಗುಲವನ್ನು ಮತ್ತೆ ತೆರೆಯಲಾಗುವುದು. ಜನವರಿ 14ರಂದು ಮಕರವಿಳಕ್ಕು ಕಾರ್ಯಕ್ರಮವಿದೆ. ಸಂಕ್ರಾಂತಿ ಜ್ಯೋತಿಯ ದರ್ಶನ ಮತ್ತಿತರರ ಪೂಜಾ ವಿಧಿಗಳ ನಂತರ ಜನವರಿ 20ರಂದು ದೇಗುಲವನ್ನು ಮುಚ್ಚಲಾಗುವುದು. ಈ ವರ್ಷ ಯಾತ್ರಿಗಳಿಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮಾತ್ರವೇ ಪ್ರವೇಶ ಇರಲಿದೆ. ಒಂದು ದಿನಕ್ಕೆ ಗರಿಷ್ಠ 1.2 ಲಕ್ಷ ಮಂದಿಗೆ ದರ್ಶನ ಸಿಗಲಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಶಬರಿಮಲೆ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುಮಾರು 13,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

suddiyaana