D ಬಾಸ್‌ ಬೇಲ್ ರಹಸ್ಯ ಬಯಲು!! – ಡೇವಿಲ್ ಡೈರೆಕ್ಟರ್ ಪ್ಲ್ಯಾನ್ ವರ್ಕೌಟ್‌!
ಒಂದಾಗುತ್ತಾ ದರ್ಶನ್‌, ಪವಿತ್ರಾ ಜೋಡಿ?

D ಬಾಸ್‌ ಬೇಲ್ ರಹಸ್ಯ ಬಯಲು!! – ಡೇವಿಲ್ ಡೈರೆಕ್ಟರ್ ಪ್ಲ್ಯಾನ್ ವರ್ಕೌಟ್‌!ಒಂದಾಗುತ್ತಾ ದರ್ಶನ್‌, ಪವಿತ್ರಾ ಜೋಡಿ?

ದಾಸ.. ಡಿ ಬಾಸ್‌.. ಕರಿಯಾ.. ಡೇವಿಲ್‌.. ಹೀಗೆ ಹತ್ತು ಹಲವು ಹೆಸರುಗಳಿಂದ ಅಭಿಮಾನಿಗಳ ಮನದಲ್ಲಿ ಮನೆ ಕಟ್ಟಿದ್ದರು ದರ್ಶನ್‌..ಆದ್ರೆ ಒಂದೇ ಒಂದು ಕೊಲೆ ಕೇಸ್‌ನಲ್ಲಿ ದರ್ಶನ್‌ ಅಂದರ್ ಆಗಿದ್ರು.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ  ದರ್ಶನ್ ಮಾತ್ರ ಅಲ್ಲ ಅವರ ಗೆಳತಿ ಪವಿತ್ರಗೌಡ ಸೇರಿದಂತೆ 17 ಜನ ಆರೋಪಿಗಳು ಲಾಕ್ ಆಗಿದ್ರು. ದಾಸ ಜೈಲಿನ ಕಂಬಿ ಹಿಂಸೆ ಸೇರುತ್ತಿದ್ದಂತೆ ಫ್ಯಾನ್ಸ್ ಆಕ್ರಂದನ ಮುಗಿಲು ಮುಟ್ಟಿತ್ತು. ದರ್ಶನ್ ಇದ್ದ  ಜೈಲಿ ಬಳಿ, ದೇವಸ್ಥಾನದಲ್ಲಿ ದರ್ಶನ್ ರಿಲೀಸ್ ಆಗಲಿ ಅಂತ ಸಿಕ್ಕ ಸಿಕ್ಕ ದೇವರಿಗೆ ಪ್ರಾರ್ಥನೆ ಮಾಡಿದ್ರು..  ಈಗ ಆ ಪ್ರಾರ್ಥನೆ ಫಲ ಫಲಿಸಿದೆ. ದರ್ಶನ್, ಪವಿತ್ರಗೌಡ ಸೇರಿ 7 ಜನ ಆರೋಪಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ.. ಅಂದ್ರೆ ಪೂರ್ಣವಧಿ ಬೇಲ್ ಸಿಕ್ಕಿದೆ.. ಇದನ್ನ ಕೇಳಿದವರಿಗೆ ಶಾಕ್ ಅನಿಸಿದ್ರು, ಇದು ನಿಜ.. ಹಾಗಿದ್ರೆ ದರ್ಶನ್‌ಗೆ ಬೇಲ್ ಸಿಕ್ಕಿದ್ದು ಹೇಗೆ? ಫ್ಯಾನ್ಸ್ ಸಂಭ್ರಮ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆದ ಗುಕೇಶ್ – ಗುಕೇಶ್ ಯಾರು?, ಕನಸು ನನಸಾಗಿದ್ದು ಹೇಗೆ?

ಅಭಿಮಾನಿಗಳ ಪಾಲಿನ ದಾಸ & ಕನ್ನಡ ಸಿನಿಮಾ ಇಂಡಸ್ಟ್ರಿ ಡಿ-ಬಾಸ್ ದರ್ಶನ್ ತೂಗುದೀಪ್ ಇದೇ ವರ್ಷ  ಜೈಲಿಗೆ ಹೋಗಿದ್ರು.. 2024ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಂದರ್ ಅಗಿದ್ದರು. ಈ ಸುದ್ದಿ ಕೇಳಿ ಇಡೀ ದೇಶವೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಅಲ್ಲದೆ ದರ್ಶನ್ ತೂಗುದೀಪ್ ಕೇಸ್‌ ಇಡೀ ಭಾರತದಲ್ಲಿ ಸಖತ್ ಸೌಂಡ್ ಮಾಡಿತ್ತು. ಹೀಗಿದ್ದಾಗ ಡಿ-ಬಾಸ್ ದರ್ಶನ್ ಅವರ ಕೋಟಿ ಕೋಟಿ ಅಭಿಮಾನಿಗಳು, ತಮ್ಮ ನೆಚ್ಚಿನ ನಟ ಎಲ್ಲಾ ಕಂಟಕ ಎದುರಿಸಿ ಪಾರಾಗಿ ಹೊರಗೆ ಬರಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದರು. ದರ್ಶನ್ ಕೂಡ ಜೈಲಿಗೆ ಹೋದ ಮೇಲೆ ಬೆನ್ನು ನೋವಿನಿಂದ ನರಳಿ ಬೆಂಡಾಗಿ ಹೋಗಿದ್ರು. ಆದ್ರೆ ಈಗ ಡಿ ಗ್ಯಾಂಗ್ ಫುಲ್ ಹ್ಯಾಪಿ ಆಗಿದೆ.. ಲಡ್ಡು ಬಂದು  ಬಾಯಿಗೆ ಬಿದ್ದಿದೆ.

ದರ್ಶನ್, ಪವಿತ್ರಾಗೌಡಗೆ ಜಾಮೀನು ಮಂಜೂರು!

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳ ಪ್ರಾರ್ಥನೆ ಇದೀಗ ಫಲಿಸಿದೆ ಅಂತಾ ಕಾಣುತ್ತದೆ. ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ಪವಿತ್ರಗೌಡ ಸೇರಿ 7 ಆರೋಪಿಗಳಿಗೂ ಜಾಮೀನು ಮಂಜೂರು ಆಗಿದೆ. ಮಾನ್ಯ ಕರ್ನಾಟಕ ಹೈಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ ನ್ಯಾಯಮೂರ್ತಿ ಎಸ್‌ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ.

ಡಿ ಗ್ಯಾಂಗ್‌ಗೆ ಜಾಮೀನು

  • ಎ1 – ಪವಿತ್ರಾ ಗೌಡ
  • ಎ2 –  ದರ್ಶನ್
  • ಎ4 – ಜಗದೀಶ್
  • ಎ7 – ಅನುಕುಮಾರ್ ಅಲಿಯಾಸ್ ಅನು
  • ಎ12 – ಲಕ್ಷ್ಮಣ್,
  • ಎ11 – ನಾಗರಾಜ್
  • ಎ14 – ಪ್ರದೋಷ್

ಡೆವಿಲ್ ಸಿನಿಮಾ ಶೂಟಿಂಗ್ ಯಾವಾಗ?

ಕಾಟೇರ ಸಿನಿಮಾ ಚಂದನವನದಲ್ಲಿ ಹೊಸ ದಾಖಲೆ ಬರೆದಿದ್ದ ಚಿತ್ರ, ದರ್ಶನ್ ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದ್ದರು. ಕಾಟೇರ ಬಳಿಕ ಅವರು ಡೆವಿಲ್ ಸಿನಿಮಾದಲ್ಲಿ ನಟಿಸುತ್ತಿದ್ದರು, ಸಿನಿಮಾ ಶೂಟಿಂಗ್ ಆಗಲೇ ಆರಂಭವಾಗಿತ್ತು, ಮೈಸೂರಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಇದರಿಂದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಈಗ ದರ್ಶನ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲು ಅವಕಾಶವಿರುವ ಕಾರಣ ಅವರು ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸುವ ಸಾಧ್ಯತೆ ಇದೆ. ಹಾಗೇ  ದರ್ಶನ್ ಜೈಲು ಸೇರಿದ್ದ ಪತಿ ದರ್ಶನ್‌ ಅವರನ್ನು ಹೊರಗಡೆ ತರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದೀಗ ಕೊನೆಗೂ ವಿಜಯಲಕ್ಷ್ಮಿ ಆಸೆ ನೆರವೇರಿದಂತಾಗಿದೆ.

ಜೈಲಿನಿಂದ ಹೊರಬಂದು ಒಂದಾಗುತ್ತಾ ಜೋಡಿ?

ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಹಾಗೂ ಎ2 ಆರೋಪಿ ದರ್ಶನ್ ಇಬ್ಬರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜೈಲಿನಿಂದ ಇಬ್ಬರೂ ಕೂಡ ಜಾಮೀನು ಪಡೆದಿದ್ದಾರೆ. ಹೀಗಾಗಿ ಒಟ್ಟಿಗೆ ಜೈಲಿಗೆ ಹೋದ ಜೋಡಿ ಹಕ್ಕಿ ಒಟ್ಟಿಗೆ ಜಾಮೀನು ಪಡೆದುಕೊಂಡಿದೆ. ಇನ್ನೇನು ಪವಿತ್ರಾ ಗೌಡ ಜೈಲಿನಿಂದ ಹೊರಬರಲಿದ್ದಾರೆ. ಈಗಾಗಲೇ ಜೈಲಿನಿಂದ ಹೊರಗಿರುವ ದರ್ಶನ್‌ಗೂ ಕೂಡ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅಲ್ಲಿಗೆ ಇಬ್ಬರೂ ಕೂಡ ಜೈಲಿನಿಂದ ಹೊರಬರಲಿದ್ದು ಇಬ್ಬರೂ ಮತ್ತೆ ಒಂದಾಗ್ತಾರಾ? ಅಥವಾ ದೂರ ಇರ್ತಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ದರ್ಶನ್‌ ಹೊರ ಬರುತ್ತಿದ್ದಂತೆ ಮುಗಿಲು ಮುಟ್ಟಿದ ಸಂಭ್ರಮ

ದಾಸನಿಗೆ ಬೇಲ್ ಸಿಗುತ್ತಿದ್ದಂತೆ ಫ್ಯಾನ್ಸ್ ಕೂಡ ಫುಲ್ ಖುಷಿಯಾಗಿದ್ದಾರೆ. ಪಟಾಕಿ ಸಿಡಿಸಿ, ದರ್ಶನ್‌ ಫೋಟೋಗೆ ಪೊಜಿ ಸಲ್ಲಿಸಿದ್ದಾರೆ. ಹಾಗೇ ತರುಣ್ ಸಧೀರ್‌, ಸೋನಲ್‌ ,ರಕ್ಷಿತಾ ಪ್ರೇಮ್ ಕೂಡ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.ಆದ್ರೆ ರೇಣುಕಾಸ್ವಾಮಿ ಕುಟುಂಬ ಮಾತ್ರ ದುಖಃದಲ್ಲಿದ್ದು, ನ್ಯಾಯ ಎಲ್ಲಿದೆ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.. ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿಲ್ಲ ಅಂದ್ರೆ ಕೊಲೆ ಮಾಡಿದ್ದು ಯಾರು ಅನ್ನೋ ಪ್ರಶ್ನೆಗಳಿಗೆ ಉತ್ತರ ಇಲ್ಲದಂತಾಗಿದೆ. ಒಟ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಜೈಲಿಗೆ ಒಟ್ಟಿಗೆ ಹೋದಂತೆ ಒಟ್ಟಿಗೆ ಜಾಮೀನು ಪಡೆದುಕೊಂಡಿದ್ದಾರೆ. ಇವರಿಬ್ಬರು ಮುಂದೆ ಮತ್ತೊಬ್ಬರಿಗೆ ಮಾದರಿಯಾಗಿ ಜೀವನ ಮಾಡ್ತಾರಾ? ಜೈಲಿಗೆ ಹೋಗಿ ಬದಲಾಗಿದ್ದಾರಾ? ಅಥವಾ ಇಲ್ವಾ? ಅನ್ನೊದನ್ನು ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *