ರದ್ದಾಗುತ್ತಾ ದರ್ಶನ್ ಮೆಡಿಕಲ್ ಬೇಲ್!? – ದಾಸನ ಕಳ್ಳಾಟ ಬಯಲಿಗೆಳೆದ SPP!
2 ರೂ. ಮಾತ್ರೆಯಲ್ಲಿ ದಚ್ಚು ರಹಸ್ಯ!
ಸ್ಯಾಂಡಲ್ ವುಡ್ನಲ್ಲಿ ಡಿ ಬಾಸ್ , ದಾಸ, ಕರಿಯಾ ಅಂತಾ ಕರೆಸಿಕೊಳ್ಳುವ ನಟ ದರ್ಶನ್ ಗೆ ಕೊಲೆ ಕೇಸ್ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಮಂಧ್ಯತರ ಬೇಲ್ ಮೇಲೆ ಹೊರ ಬಂದ ದಾಸ ಈಗ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇದು ನಾಟಕ ಅಂತ ಕೂಡ ಕೆಲವರು ಹೇಳುತ್ತಿದ್ದಾರೆ. ಅವರಿಗೆ ಏನೂ ಆಗಿಲ್ಲ ಆದ್ರೂ ಡವ್ ಮಾಡಿ ಬೇಲ್ ತಗೊಂಡಿದ್ದಾರೆ ಎನ್ನುತ್ತಿದ್ದಾರೆ. ಬೇಲ್ ತೆಗೆದುಕೊಂಡು 5 ವಾರ ಕಳೆದಿದ್ದು, ದರ್ಶನ್ ಇನ್ನೂ ಯಾವುದೇ ಸರ್ಜರಿ ಮಾಡಿಸಿಕೊಂಡಿಲ್ಲ. ಈ ನಡುವೆ ಬೇಲ್ ಅರ್ಜಿ ವಿಚಾರಣೆ ಕೂಡ ನಡೆದಿದ್ದು, ದರ್ಶನ್ ಬಿಗ್ ಶಾಕ್ ಎದುರಾಗಿದೆ.
ಇದನ್ನೂ ಓದಿ: ಭಾರತಕ್ಕೆ ಬೆನ್ನೆಲುಬಾದ KL, ರೆಡ್ಡಿ.. ಸ್ಟಾರ್ಕ್ ಸೇಡಿಗೆ ಜೈಸ್ವಾಲ್ ಡಕ್ ಔಟ್ – ಕೈಕೊಟ್ಟ ಬ್ಯಾಟರ್ಸ್.. 180ಕ್ಕೆ ಆಲೌಟ್
ದರ್ಶನ್ ಒಂದ್ಕಡೆ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಚಿಕೆತ್ಸೆ ಪಡೆಯುತ್ತಿದ್ದಾನೆ ಅಂತಾ ಹೇಳುತ್ತಿದ್ದಾರೆ.. ಅವರಿಗೆ ಯಾವುದೇ ಬೆನ್ನು ನೋವು ಇಲ್ಲ.. ಕೋರ್ಟ್ಗೆ ಸುಳ್ಳು ಹೇಳಿ ಜಾಮೀನು ಪಡೆದ ಆಸ್ಪತ್ರೆ ಅಂತ ಕಥೆ ಕಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಬೆನ್ನು ಆಪರೇಷನ್ ಮಾಡಿಸಿಲ್ಲ ಅಂದ್ರೆ ಜೀವಕ್ಕೆ ಕುತ್ತು ಅನ್ನೋ ಕಾರಣಕ್ಕೆ ಬೇಲ್ ನೀಡಲಾಗಿತ್ತು. ಆದ್ರೆ ದರ್ಶನ್ಗೆ ಯಾವುದೇ ಆಪರೇಷನ್ ಆಗಿಲ್ಲ ಇಲ್ಲಿ ತನಕ ಆಗಿಲ್ಲ. ಅದರ್ರೆ ಬಿಪಿ ನಾರ್ಮಲ್ ಅಲ್ಲ ಅನ್ನೋ ಕಾರಣ ಹೇಳಲಾಗುತ್ತಿದೆ. ಹೀಗಾಗಿ ಮಧ್ಯಂತರ ಜಾಮೀನು ವಿಸ್ತರಣೆಗೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಸೋಮವಾರ ದರ್ಶನ್ ಬೇಲ್ ಭವಿಷ್ಯ ನಿರ್ಧಾರ
ಮಂಗಳವಾರಕ್ಕೆ ದರ್ಶನ್ ಅವರ ಮಧ್ಯಂತರ ಜಾಮೀನು ಮುಕ್ತಾಯವಾಗಲಿದೆ. ಒಂದು ವೇಳೆ ಸಾಮಾನ್ಯ ಜಾಮೀನು ಸಿಗದಿದ್ದರೆ ಮಧ್ಯಂತರ ಜಾಮೀನು ಸಿಗಬಹುದು ಎಂದು ನಟ ಅರ್ಜಿ ಹಾಕಿದ್ದಾರೆ. ಈಗಾಗಲೇ ಕಳೆದ ಒಂದು ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ಅವರ ಆರೋಗ್ಯದಲ್ಲಿ ಬಿಪಿ ಏರುಪೇರು ಆಗುತ್ತಿದ್ದು, ಹೀಗಾಗಿ ಸರ್ಜರಿ ಮಾಡಲು ಆಗುತ್ತಿಲ್ಲ ಎಂದು ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಪದೇ ಪದೇ ರಕ್ತದೊತ್ತಡ ಏರುಪೇರಿನಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಕೋರ್ಟಿಗೆ ಮಾಹಿತಿ ನೀಡಿದ್ದಾರೆ.ಹೀಗಾಗಿ ಶಸ್ತ್ರಚಿಕಿತ್ಸೆಗಾಗಿ ಮೆಡಿಕಲ್ ಬೇಲ್ ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್ ಜಾಮೀನು ಅವಧಿ ವಿಸ್ತರಣೆ ಮಾಡಲು ಮಧ್ಯಂತರ ಆದೇಶ ನೀಡಬೇಕೆಂದು ವಾದಮಾಡಲಾಯ್ತು. ಶಸ್ತ್ರಚಿಕಿತ್ಸೆ ಮಾಡುವವರೆಗೂ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಾಧ್ಯವಿಲ್ಲ. ಹೀಗಾಗಿ ಬೇಲ್ ಅವಧಿ ವಿಸ್ತರಿಸಲು ಮಧ್ಯಂತರ ಆದೇಶ ನೀಡಬೇಕೆಂದು ವಕೀಲರು ಕೋರ್ಟ್ ಮೆಟ್ಟಿಲೇರಿದ್ದಾರೆ.. ವಾದ ಆಲಿಸಿದ ಕೋರ್ಟ್ ಸೋಮವಾರಕ್ಕೆ ವಿಚಾರಣೆ ಮಂದೂಡಿದೆ.
ಬೇಲ್ ಸಿಗದಿದ್ದರೆ ಮತ್ತೆ ದಾಸ ಜೈಲಿಗೆ
ಒಂದು ವೇಳೆ ಸೋಮವಾರ ಮಧ್ಯಂತರ ಜಾಮೀನಿಗೆ ಒಪ್ಪಿಗೆ ಸೂಚಿಸದಿದ್ದರೆ ನಟ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಬೇಕು. ಎಷ್ಟೇ ಬೆನ್ನು ನೋವು ಇದ್ದರು ಕೂಡ ದರ್ಶನ್ ಜೈಲಿಗೆ ಹೋಗಲೇ ಬೇಕು. ಕೋರ್ಟ್ ಡಾಕ್ಟರ್ ನೀಡುವ ಎಲ್ಲಾ ರೆಕಾರ್ಡ್ ಪರಿಶೀಲನೆ ಮಾಡಿ ಮಂಧ್ಯತರ ಜಾಮೀನು ಅವಧಿ ವಿಸ್ತಾರಣೆ ಮಾಡುತ್ತೆ. ಹೀಗಾಗಿ ಸೋಮವಾರದ ತೀರ್ಪಿನ ಮೇಲೆ ಸಾಕಷ್ಟು ಕುತೂಹಲವಿದೆ.
ಹೈಕೋರ್ಟ್ ಬೇಲೆ ನೀಡಿದ್ರು ಸುಪ್ರೀಂ ಸಂಕಷ್ಟ
ಇನ್ನೊಂದೆಡೆ ನಟ ದರ್ಶನ್ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ. ಸೋಮವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ನಟ ಜೈಲಿಗೆ ಹಿಂದಿರುಗಬೇಕಾಗುತ್ತದೆ. ಹೀಗಾಗಿ ದರ್ಶನ್ ಬೇಲ್ ಭವಿಷ್ಯದ ಮೇಲೆ ಎಲ್ಲಾರ ಕಣ್ಣು ನೆಟ್ಟಿದೆ.
ದರ್ಶನ್ ಆಪರೇಷನ್ ತಡವೇಕೆ?
ನವೆಂಬರ್ ಮೊದಲ ವಾರದಲ್ಲಿಯೇ ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳಾದರೂ ಬೆನ್ನುನೋವಿನ ಶಸ್ತ್ರಚಿಕಿತ್ಸೆಯಾಗಿಲ್ಲ. ಈ ಬಗ್ಗೆ ಹೈಕೋರ್ಟ್ಗೆ ದರ್ಶನ್ ಪರ ವಕೀಲ ಮಾಹಿತಿ ನೀಡಿದ್ದು, ರಕ್ತದೊತ್ತಡವು ವ್ಯತ್ಯಾಸವಾಗುತ್ತಿರುವ ಹಿನ್ನೆಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಲ್ಲ. ಫಿಜಿಯೋ ಥೆರಪಿ ನಡೆಯುತ್ತಿದೆ. ಕೆಲ ದಿನಗಳಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದ್ರೆ ಕೊನೆ ದಿಗಳಲ್ಲಿ ಆಪರೇಷನ್ ಮಾಡಿದ್ರೆ ಮತ್ತಷ್ಟು ದಿನ ಹೊರಗೆ ಇರಬಹುದು ಅನ್ನೋ ಲೆಕ್ಕಚಾರ ಕೂಡ ಇರಬಹುದು. ಆಪರೇಷನ್ ಆದ ಮೇಲೆ ಒಂದು ತಿಂಗಳು ರೆಸ್ಟ್ ಬೇಕು ಅಂದ್ರೆ ದರ್ಶನ್ ಜೈಲಿಗೆ ಹೋಗದೇ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ರೆಸ್ಟ್ ಮಾಡಬಹುದು.. ಹಾಗೇ ದರ್ಶನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಇತ್ತಿಟ್ಟಿಗೆ ವೈರಲ್ ಆಗಿತ್ತು. ಫೋಟೋದಲ್ಲಿ ನಟ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿಕೊಂಡಿದ್ದರು. ಸುತ್ತಮುತ್ತ ಚಿಕಿತ್ಸಾ ಪರಿಕರಗಳಿದ್ದವು. ಇದನ್ನ ಕೂಡ ಕೋರ್ಟ್ಗೆ ತೋರಿಸಿ ಮಂಧ್ಯತರ ಜಾಮೀನು ಅವಧಿ ವಿಸ್ತಾರೆ ಮಾಡಬಹುದು.. ಆದ್ರೆ ಪೊಲೀಸ್ ಹಾಗೂ ದರ್ಶನ್ ಜಟಾಪಟಿಯಲ್ಲಿ ಗೆಲುವು ಯಾರಿಗೆ ಅನ್ನೋದು ಸೋಮವಾರ ಗೊತ್ತಾಗಲಿದೆ.