ನಟ ದರ್ಶನ್ ಬೆನ್ನು ನೋವು ಎಂದು ಡ್ರಾಮಾ ಮಾಡಿದ್ರಾ? – ವೈದ್ಯರು ಫಿಸಿಯೊಥೆರಪಿ ನಿಲ್ಲಿಸಿದ್ಯಾಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಜೈಲುವಾಸಲ್ಲಿರುವ ದಾಸ ಇತ್ತೀಚೆಗೆ ಮತ್ತೆ ಬೆನ್ನುನೋವಿನ ಕಾರಣ ನೀಡಿದ್ರು. ಚಿಕಿತ್ಸೆ ಕೊಡಿಸುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿದ್ರು. ಆದ್ರೀಗ ದರ್ಶನ್‌ಗೆ ಬೆನ್ನು ನೋವು ಮಾಯವಾಗೇಬಿಡ್ತಾ ಅನ್ನೋ ಕುತೂಹಲ ಮೂಡಿದೆ.
ಇದನ್ನೂ ಓದಿ: ಇವರಿಗೆಲ್ಲ ತಿನ್ನಿಸೋದಿಕ್ಕೆ ನಮಗೆ ತೆವಲಾ ಎಂದ ರಘು ಮೇಲೆ ಮುಗಿಬಿದ್ದ ಮನೆ ಮಂದಿ!
ದರ್ಶನ್ ರೇಣುಕಾಸ್ವಾಮಿ ಪ್ರಕರಣದಲ್ಲಿ ಮೊದಲಬಾರಿಗೆ ಜೈಲು ಸೇರಿದ್ದಾಗ ಇದೇ ವಿಷಯದಲ್ಲಿ ಜಾಮೀನು ಪಡೆದಿದ್ದರು. ಬೆನ್ನುನೋವು ಜಾಸ್ತಿ ಇದೆ, ನಿಲ್ಲೋಕೂ ಆಗ್ತಿಲ್ಲ ಕೂರೋಕು ಆಗ್ತಿಲ್ಲ. ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಕೋರ್ಟ್ ಮೋರೆ ಹೋಗಿದ್ದರು. ಕೋರ್ಟ್ ಮೊದಲಿಗೆ ಮೆಡಿಕಲ್ ಬೇಲ್ ಮಂಜೂರು ಮಾಡಿತ್ತು. 2ನೇ ಬಾರಿ ದರ್ಶನ್ ಪರಪ್ಪನ ಅಗ್ರಹಾರ ಸೇರಿದಾಗಲೂ ದರ್ಶನ್ ಅದೇ ಸಮಸ್ಯೆ ಹೇಳಿದ್ದರು. ಆದ್ರೆ ಜಾಮೀನಿಗೆ ಒಪ್ಪದ ಕೋರ್ಟ್ ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಅದರಂತೆ ಸಿ.ವಿ ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡದಿಂದ ಫಿಸಿಯೋ ಮಾಡಲಾಗುತ್ತಿತ್ತು. ವಾರಕ್ಕೆ ಎರಡು ಅಥವಾ ಮೂರು ಬಾರಿ ಫಿಸಿಯೋಥೆರಫಿ ಮಾಡಲಾಗಿತ್ತು. ತಪಾಸಣೆ ಬಳಿಕ ವರದಿ ಸಲ್ಲಿಸಿಕೆ ಮಾಡಿರುವ ವೈದ್ಯರ ತಂಡ ದರ್ಶನ್‌ಗೆ ಫಿಸಿಯೋ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರಂತೆ.
ವೈದ್ಯರ ಶಿಫಾರಸಿನ ಆಧಾರದ ಮೇಲೆ ಫಿಸಿಯೋಗೆ ಜೈಲಾಧಿಕಾರಿಗಳು ಕರೆದುಕೊಂಡು ಹೋಗ್ತಿಲ್ಲ. ಇನ್ನೂ ಫಿಸಿಯೊ ಬಗ್ಗೆ ದರ್ಶನ್ ಯಾವುದೇ ನಕಾರ ಎತ್ತಿಲ್ಲ ಎಂದು ಹೇಳಲಾಗ್ತಿದೆ. ಇನ್ನೂ ಎರಡನೇ ಬಾರಿ ಜೈಲು ಸೇರಿದ ಬಳಿಕ 10 ರಿಂದ 12 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದು ಸಹಜವಾಗಿ ಬೆನ್ನು ನೋವು ಶಮನವಾಗಿರೊ ಸಾಧ್ಯತೆ ಇದೆ ಎಂದು ಜೈಲಾಧಿಕಾರಿ ಮೂಲಗಳು ತಿಳಿಸಿವೆ.

ನೋಡಿರಿ

