ವಿಜಯಲಕ್ಷ್ಮೀ ಕಂಟ್ರೋಲ್‌ನಲ್ಲಿ D ಬಾಸ್.. ಪವಿತ್ರಗಾಗಿ ಕಾದು ಕುಳಿತ ಮಾಜಿ ಗಂಡ – ಮತ್ತೆ ಒಂದಾಗ್ತಾರಾ ಸುಬ್ಬ- ಸುಬ್ಬಿ?
ಡಿ-ಬಾಸ್ ದರ್ಶನ್ ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕಾಗಿ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಪಟ್ಟಣಗೆರೆ ಶೆಡ್‌ಗೆ ಎತ್ತಾಕ್ಕೊಂಡು ಬಂದು ಸರಿಯಾಗಿ ಬಾರಿಸಿ, ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಕೇಸ್‌ನಲ್ಲಿ 6 ತಿಂಗಳ ನರಳಾಟದ ನಂತರ ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರ ಬಂದಿರೋ ಪವಿತ್ರಾಗೌಡ ಮತ್ತು ದರ್ಶನ್ ಮುಂದಿನ ನಡೆ ಏನು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕಂದ್ರೆ ಮತ್ತೆ ನನ್ನ ಜೀವನದಲ್ಲಿ ಮಾಜಿ ಹೆಂಡತಿ ಮಗಳು ಬರ್ತಾಳೆ ಅಂತ ಪವಿತ್ರಾಗೌಡ ಮಾಜಿ ಗಂಡ ಕಾದು ಕುಳಿತ್ತಿದ್ದಾರೆ. ಹಾಗೇ ದರ್ಶನ್ ಆಪರೇಷನ್ ನಾಟಕಕ್ಕೆ ತೆರೆ ಬಿದ್ದಿದ್ದು, ಮನೆಯಲ್ಲೇ ದಾಸ ರೆಸ್ಟ್ ಮಾಡಲಿದ್ದಾರೆ.
ಇದನ್ನೂ ಓದಿ: 6 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! – ಹೆಡ್ ಶತಕ ಸಿಡಿಸಿದ ಪಂದ್ಯಗಳಲ್ಲೆಲ್ಲಾ ಭಾರತದ ಸೋಲು ಫಿಕ್ಸ್!
ರೇಣುಕಾಸ್ವಾಮಿ ಕೊಲೆ ಕೇಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ದರ್ಶನ್, ಪವಿತ್ರಾಗೌಡ ಜೈಲೇ ಫಿಕ್ಸ್ ಹೊರಗೆ ಬರೋಕೆ ಆಗಲ್ಲ ಅಂತಾ ಹೇಳಿದ್ದೇ ಹೇಳಿದ್ದು. ಫ್ಯಾನ್ಸ್‌ಗಳು ಕೂಡ ನಮ್ಮ ಬಾಸ್ ಜೈಲಲ್ಲೇ ಇರ್ತಾರೆ ಅಂತಾ ಭಯ ಪಟ್ಟಿದ್ರು. ಆದ್ರೆ ಈಗ ಪವಿತ್ರಗೌಡನೂ ಹೊರಗೆ ಬಂದು ಆಯ್ತು.. ಬೇಲ್ ಸಿಗುತ್ತಿದ್ದಂತೆ ಬೆನ್ನು ನೋವಿನ ನಾಟಕಕ್ಕೆ ಬ್ರೇಕ್ ಬಿದ್ದಿದೆ . ಆದ್ರೆ ಈಗ ಎಲ್ಲರಿಗೂ ಕಾಡ್ತಾ ಇರೋ ಕಟ್ಟಕಡೆಯ ಪ್ರಶ್ನೆ ದರ್ಶನ್ ಮತ್ತು ಪವಿತ್ರಾಗೌಡ ಮುಂದೆ ಮತ್ತೆ ಒಂದಾಗ್ತಾರಾ ಅನ್ನೋದು.
ಪವಿತ್ರಾಗೌಡಗಾಗಿ ಕಾದು ಕುಳಿತ ಮಾಜಿ ಗಂಡ
ಪವಿತ್ರಾ ಗೌಡ & ಅವರ ಮೊದಲ ಗಂಡ ಸಂಜಯ್ ಪ್ರೀತಿಸಿ ಮದುವೆ ಆಗಿದ್ದರು.. ವೈಯಕ್ತಿಕ ಕಾರಣಕ್ಕೆ ಮೊದಲ ಗಂಡನಿಂದ ದೂರ ಆಗಿದ್ರು ಪವಿತ್ರಾ. ಹೀಗಿದ್ದಾಗಲೇ ದರ್ಶನ್ ಜೊತೆಗೆ ಪವಿತ್ರಾಗೆ ಆತ್ಮೀಯ ಸಂಬಂಧ ಇತ್ತು ಅನ್ನೋದು ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಇಡೀ ಜಗತ್ತಿಗೇ ಗೊತ್ತಾಗಿತ್ತು. ಆದ್ರೆ ಗಂಡನಿಂದ ಪವಿತ್ರಗೌಡ ಬೇರ ಆಗಿದ್ರು.. ಪವಿತ್ರಾಗೌಡ ಗಂಡ ಬೆಟ್ಟದಷ್ಟು ಪ್ರೀತಿ ಇಟ್ಕೊಂಡಿದ್ದಾರೆ.. ನನ್ನ ಹೆಂಡತಿ ಮಗಳ ಜೊತೆ ಮತ್ತೆ ಜೀವನ ಮಾಡೋಕೆ ನಾನು ರೆಡಿ ಎನ್ನುತ್ತಿದ್ದಾರೆ. ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು ತುಳಿಯಲು ಬಿಡಲ್ಲ. ಹಾಗೇ ನಾನು ಅವರ ಬದುಕಿನಲ್ಲಿ ಎಂದಿಗೂ ಮುಳ್ಳು ಆಗುವುದಿಲ್ಲ ಅಂತಾ ಕೂಡ ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದಾರೆ.
ದರ್ಶನ್ ಜೊತೆ ಮಾತಾಡ್ತಾರಾ ಪವಿತ್ರಾಗೌಡ ಮಾಜಿ ಗಂಡ?
ಪವಿತ್ರಾ ಗೌಡ ಮಾಜಿ ಗಂಡನಿಗೆ ತನ್ನ ಹೆಂಡತಿಯನ್ನ ಬಿಟ್ಟು ಬದುಕಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಪ್ರತಿ ದಿನವೂ ನರಳುತ್ತಿರುವ ಪವಿತ್ರಾ ಗೌಡ ಮಾಜಿ ಗಂಡ ಸಂಜಯ್, ಹೆಂಡತಿ ಮಗು ಮತ್ತೆ ವಾಪಸ್ ನನ್ನ ಜೀವನಕ್ಕೆ ಬಂದರೆ ಸಾಕು ಅಂತಾ ಕಾಯುತ್ತಿದ್ದಾರೆ. ಈ ವಿಚಾರವನ್ನ ಅವರೇ ಸಾಕಷ್ಟು ಮಾಧ್ಯಮಗಳ ಮುಂದೆ ಈಗಾಗಲೇ ಹೇಳಿದ್ದಾರೆ. ಹಾಗೇ ಕನ್ನಡ ಮೀಡಿಯಾದ ರಿಪೋರ್ಟ್ಸ್ ಬಳಿ ದರ್ಶನ್ ನಂಬರ್ ಕೇಳುತ್ತಿದ್ದಾರಂತೆ..ದರ್ಶನ್ ಜೊತೆ ಮಾತನಾಡಬೇಕು.. ಹಾಗೇ ಪವಿತ್ರಾಗೌಡ ಜೊತೆ ಕೂಡ ಮಾತನಾಡಬೇಕು ಅಂತ ಹೇಳುತ್ತಿದ್ದಾರಂತೆ. ಪವಿತ್ರಾಗೌಡನನ್ನ ಸಂಪರ್ಕಿಸೋಕೆ ತುದಿಗಾಲಲ್ಲ ನಿಂತಿದ್ದಾರೆ ಪವಿತ್ರಗೌಡ ಮಾಜಿ ಪತಿ ಸಂಜಯ್.. ಆದ್ರೆ ಪ್ರತಿಷ್ಠಿತ ಏರಿಯಾದಲ್ಲಿ ಸ್ವಂತ ಮನೆ.. ಐಷರಾಮಿ ಕಾರುಗಳು ಸೇರಿದ್ದಂತೆ ಹೈಫೈ ಜೀವನ ನಡೆಸುತ್ತಿರುವ ಪವಿತ್ರಾಗೌಡ ಮಾಜಿ ಗಂಡನ ಜೊತೆ ಮತ್ತೆ ಹೋಗ್ತಾರಾ? ಅನ್ನೋದು ಅನುಮಾನವಾಗಿದೆ.
ದಾಸನಿಗೆ ಆಸ್ಪತ್ರೆಯಲ್ಲೇ ಮುಂದುವರಿದ ಚಿಕಿತ್ಸೆ
ಇನ್ನು ದರ್ಶನ್ ಸೋಮವಾರ BGS ಆಸ್ಪತ್ರೆಯಿಂದ ಹೊರ ಬಂದ್ರು.. ಎಲ್ಲರೂ ಕೂಡ ದರ್ಶನ್ ಡಿಸ್ಚಾರ್ಜ್ ಆದ್ರೂ ಅನ್ಕೊಂಡಿದ್ರು. ಆದ್ರೆ ದರ್ಶನ್ ಹೈಕೋರ್ಟ್‌ಗೆ ಹೋಗಿ ಬೆಲ್ ಪ್ರಕ್ರಿಯೆ ಮುಗಿಸಿ ವಾಪಾಸ್ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಲ್ಲಿ 3-4 ದಿನ ಚಿಕಿತ್ಸೆ ಪಡೆಯಲಿದ್ದು, ನಂತ್ರ ಮೆನೆಗೆ ಹೋಗಲಿದ್ದಾರೆ..
ದರ್ಶನ್ ಮೇಲೆ ವಿಜಯಲಕ್ಷ್ಮೀ ಫುಲ್ ಕಂಟ್ರೋಲ್
ಇನ್ನು ದರ್ಶನ್ ಜೈಲಿಗೆ ಹೋಗೋಕೆ ಕಾರಣವೇ ಪವಿತ್ರಾಗೌಡ.. ಹೊರಗೆ ಬರೋಕೆ ಕಾರಣ ಪತ್ನಿ ವಿಜಯಲಕ್ಷ್ಮೀ.. ಬೇರೆ ಹುಡುಗಿ ಕಾರಣಕ್ಕೆ ತನ್ನ ಗಂಡ ಜೈಲಿಗೆ ಹೋಗಿದ್ದಾನೆ.. ಹೋದ್ರೆ ಹೋಗಲಿ ಅಂತ ಸುಮ್ಮನೆ ಕುರಲಿಲ್ಲ ವಿಜಯಲಕ್ಷ್ಮೀ..ನಾನು ಇದ್ರೂ ಗಂಡನ ಜೊತೆ ಸತ್ತರು ಗಂಡನ ಜೊತೆ ಅಂತ ಶಪತ ಮಾಡಿ ಗಂಡನನ್ನ ಜೈಲಿನಿಂದ ಹೊರಗೆ ತರೋಕೆ ಹಗಲಿರಳು ಶ್ರಮಿಸಿದ್ದಾರೆ ವಿಜಯಲಕ್ಷ್ಮೀ..ಇದು ನಿಜಕ್ಕೂ ಗ್ರೇಟ್.. ಹೀಗಾಗಿ ದರ್ಶನ್ ಮೇಲೆ ಕಂಪ್ಲೀಟ್ ಹಿಡಿತವನ್ನ ವಿಜಯಲಕ್ಷ್ಮೀ ತೆಗೆದುಕೊಳ್ಳಬಹುದು.. ದಾಸನಿಗೂ ತಾನು ಮಾಡಿದ ತಪ್ಪಿನ ಅರಿವು ಆಗಿರಬಹುದು. ಹೀಗಿದ್ದೂ ಪವಿತ್ರಾಗೌಡ ಗೆಳೆತನವನ್ನ ದರ್ಶನ್ ಕಂಟಿನ್ಯೂವ್ ಮಾಡಿದ್ರೆ, ಗಂಡ ಹೆಂಡತಿ ಸಂಬಂಧಕ್ಕೆ, ಫ್ಯಾನ್ಸ್ ಅಭಿಮಾನಕ್ಕೆ, ವಿಜಯಲಕ್ಷ್ಮೀ ಇಷ್ಟು ದಿನ ಕಷ್ಟ ಪಟ್ಟಿದ್ದಕ್ಕೆ ಅರ್ಥವೇ ಇಲ್ಲದಂತಾಗುತ್ತೆ.. ನಾಲ್ಕು ಜನಕ್ಕೆ ಮಾದರಿ ಆದವರ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತೆ. ಹೀಗಾಗಿ ಪವಿತ್ರಗೌಡ ಸಂಬಂಧ ಬಿಟ್ಟು ವಿಜಯಲಕ್ಷ್ಮೀ ಅವರ ಜೊತೆಯಲ್ಲೇ ಇರಬೇಕು ಅನ್ನೋದು ಫ್ಯಾನ್ಸ್ ಮನದಾಳದ ಮಾತು.. ಹಾಗೇ ಪವಿತ್ರಾಗೌಡ ಜೊತೆ ಸಂಸಾರ ಮಾಡೋಕೆ ಮಾಜಿ ಗಂಡ ಸಂಜಯ್ ಕಾಯ್ತಾ ಇದ್ದಾರೆ.. ಒಂದು ವೇಳೆ ದರ್ಶನ್ ಗೆಳತ ಪವಿತ್ರಗೌಡ ಬಿಟ್ಟು ಮಾಜಿ ಗಂಡನ ಜೊತೆ ಹೋದ್ರೆ ಇಬ್ಬರ ಸಂಸಾರ ಕೂಡ ಬಂಗಾರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ಇದು ಇವರ ವೈಯಕ್ತಿಕ ಜೀವನ ಆದ್ರೂ ದರ್ಶನ್ ಇದೋದು ಸಾರ್ವಜನಿಕ ಜೀವನದಲ್ಲಿ.