ಕಂಬಿ ಹಿಂದೆ ಕುಟುಂಬಕ್ಕಾಗಿ ದರ್ಶನ್ ಕಣ್ಣೀರು – ಒಡೆದ ಹೃದಯದೊಂದಿಗೆ ಪತಿ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ

ಕಂಬಿ ಹಿಂದೆ ಕುಟುಂಬಕ್ಕಾಗಿ ದರ್ಶನ್ ಕಣ್ಣೀರು – ಒಡೆದ ಹೃದಯದೊಂದಿಗೆ ಪತಿ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ

ಸ್ಯಾಂಡಲ್​​ ವುಡ್​​ ಸ್ಟಾರ್​​ ನಟ ದರ್ಶನ್ ಸ್ಥಿತಿ ಅಯ್ಯೋ ಅನಿಸುವಂತಾಗಿದೆ. ಜೊತೆಯಲ್ಲಿದ್ದಾಗ ಪ್ರೀತಿಯ ಬೆಲೆ ಗೊತ್ತಾಗಿರಲಿಲ್ಲ. ಕಷ್ಟಬಂದಾಗ ಜೊತೆಗೆ ನಿಂತ ಪತ್ನಿ, ಮಗ ಈಗ ಬೇಕು ಅನಿಸುತ್ತಿದೆ. ಆದರೆ, ಜೊತೆಯಲ್ಲಿ ನಿಲ್ಲಲ್ಲು ಜೈಲಿನ ಕಂಬಿಗಳಿಂದ ಹೊರಗೆ ಬರಲು ಸಾಧ್ಯವಿಲ್ಲ. ಇದೀಗ ದಾಸ ತನ್ನ ಪತ್ನಿ, ಮಗನ ನೋಡಬೇಕು ಎಂದು ಕಣ್ಣೀರು ಇಡುತ್ತಿದ್ದಾರೆ. ಈ ನೋವಿನ ವಿಚಾರ ಕೇಳಿ ಅಭಿಮಾನಿಗಳು ಕೂಡಾ ನೋವಲಿದ್ದಾರೆ.

ಇದನ್ನೂ ಓದಿ:ಸುಪ್ರೀಂ ನಲ್ಲಿ ಬೇಲ್‌ ಸಿಗದೇ ಮೌನಕ್ಕೆ ಜಾರಿದ ದರ್ಶನ್ – ವಿಜಯಲಕ್ಷ್ಮಿ ಭಾವುಕ ಪೋಸ್ಟ್!

ಮೇ 19. ದರ್ಶನ್ ಮತ್ತು ವಿಜಯಲಕ್ಷ್ಮೀ ಮದುವೆಯಾದ ದಿನ. ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರಬೇಕಾದ ದಂಪತಿ ದೂರ ದೂರ ಇರುವಂತಾಗಿದೆ. ಅಭಿಮಾನಿಗಳ ಶುಭಾಶಯಗಳು, ಸಂಭ್ರಮ ಕಾಣೆಯಾಗಿದೆ. ಕಳೆದ ವರ್ಷ ಜಾಮೀನಿನ ಮೇಲೆ ಹೊರ ಬಂದಿದ್ದ ದರ್ಶನ್, ಪತ್ನಿ ಜೊತೆ ಅದ್ಧೂರಿಯಾಗಿ ಆನಿವರ್ಸರಿ ಸೆಲಬ್ರೇಟ್ ಮಾಡಿದ್ರು. ಆದ್ರೆ ಈ ಬಾರಿ ದರ್ಶನ್ ಒಂಟಿಯಾಗಿ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಮನೆಯವರು ಹಾಗೂ ಹೆಂಡ್ತಿ-ಮಗನ ನೆನಪಲ್ಲಿ ದರ್ಶನ್ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸುಪ್ರೀಂ ಕದ ತಟ್ಟಿದ್ರೂ ಬೇಲ್ ಸಿಗ್ತಿಲ್ಲ. ಜಾಮೀನು ಸಿಗದೆ ನಿರಾಸೆಗೊಂಡಿರೋ ದರ್ಶನ್ ಕುಗ್ಗಿ ಹೋಗಿದ್ದಾರೆ ಎನ್ನಲಾಗ್ತಿದೆ. ಹೊರಗೆ ಹೆಂಡ್ತಿ-ಮಗನ ಜೊತೆ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಬೇಕಿದ್ದ ನನಗೆ ಜೈಲಿನಲ್ಲಿ ಬಂಧಿಯಾಗೋ ಸ್ಥಿತಿ ಬಂದಿದೆ ಎಂದು ಸೆಲ್ ನಲ್ಲಿ ದರ್ಶನ್ ಕಣ್ಣೀರು ಹಾಕಿದ್ದಾರಂತೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​​ಗೆ ಒಂಟಿತನ ಕಾಡ್ತಿದೆ. ಇತ್ತ ಪತ್ನಿ ವಿಜಯಲಕ್ಷ್ಮಿ ಕೂಡ ಭಾವುಕರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಗಂಡನ ಕೈ ಹಿಡಿದಿರುವ ಒಂದು ಫೋಟೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿದ ವಿಜಯಲಕ್ಷ್ಮಿ ಏನೇ ಆದ್ರೂ ನಿನ್ನ ಜೊತೆಗೆ ನಿಲ್ಲುವೆ ಎಂದಿದ್ದಾರೆ. ಮತ್ತೊಂದೆಡೆ ಚೂರದ ಹೃದಯ ಇಮೋಜಿ ಹಾಕಿ, ಅದರ ಜೊತೆ ದರ್ಶನ್ ಫೋಟೋ ಹಾಕಿ ನೋವು ವ್ಯಕ್ತಪಡಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಮುಖಾಮುಖಿ ಭೇಟಿ ಮಾಡಲು ಅವಕಾಶ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ವಿಜಯಲಕ್ಷ್ಮಿ ಅವರು ಬಂದು ಕೇಳಿಕೊಂಡಿದ್ದಾರೆ. ಮೇ 19ರಂದು ಅವರ ವಿವಾಹ ವಾರ್ಷಿಕೋತ್ಸವ ಇದೆ. ಸುಪ್ರೀಂ ಕೋರ್ಟ್​​ನಲ್ಲಿ ಜಾಮೀನು ರದ್ದಾದ ಬಳಿಕ ದರ್ಶನ್ ಅವರು ಮಾನಸಿಕವಾಗಿ ಬಹಳ ಕುಗ್ಗಿದ್ದಾರೆ. ನಮಗೆ ಮನವಿ ಕೊಟ್ಟಿದ್ದಾರೆ. ಸಂಜೆಯೊಳಗೆ ನಾವು ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

Sulekha

Leave a Reply

Your email address will not be published. Required fields are marked *