ಸೂರ್ಯನಿಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದ್ದೀನಿ ಚಿನ್ನ! – ಡೆವಿಲ್ನಲ್ಲಿ ದಾಸನ ಮಾಸ್ ಡೈಲಾಗ್ಗೆ ಫ್ಯಾನ್ಸ್ ಥ್ರಿಲ್!

ನಟ ದರ್ಶನ್ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾ ರಿಲೀಸ್ ಆಗ್ತಿದೆ. ಇದೀಗ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾ ಹೇಗಿರಲಿದೆ ಅನ್ನೋ ಹಿಂಟ್ ಸಿಕ್ಕಿದೆ. ಹೊಸ ಅವತಾರದಲ್ಲಿ ದಾಸನನ್ನ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿರುವ ದಾಸನಿಗೆ ಶಾಕ್ ಕೊಟ್ಟ IT ಅಧಿಕಾರಿಗಳು! – ದರ್ಶನ್ಗೆ 82 ಲಕ್ಷ ಹಣ ಫ್ಯಾನ್ಸ್ ಕೊಟ್ಟಿದ್ದಾ?
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 11 ರಂದು ರಿಲೀಸ್ ಆಗ್ತಿದೆ. ಡೆವಿಲ್ ಸಿನಿಮಾಗೆ ಪ್ರಕಾಶ್ ನಿರ್ದೇಶನ ಮಾಡುವುದರಿಂದ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ ಹಲವು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಆರಂಭದಲ್ಲಿ ಅವಲಕ್ಕಿ ಪವಲಕ್ಕಿ ಕಾಂಚನ ಮಿಣ ಮಿಣ ಡಾಮ್ ಡೂಮ್ ಅನ್ನುತ್ತಾ ದರ್ಶನ್ ಎಂಟ್ರಿಯಾಗಿದೆ. ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ ಅನ್ನುತ್ತಿದ್ದಂತೆ, ದರ್ಶನ್ ಹೊಸ ಹೊಸ ಅವತಾರವನ್ನ ತೋರಿಸಲಾಗಿದೆ. ಟ್ರೈಲರ್ನಲ್ಲಿ ದರ್ಶನ್ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಹೈಲೈಟ್ ಆಗಿದೆ. ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ ಎಂದು ದರ್ಶನ್ ಡೈಲಾಗ್ ಹೇಳುವಾಗ ರಿಲೀಸ್ ದಿನಾಂಕ ತೋರಿಸಲಾಗುತ್ತದೆ. ವಿನಯ್ ಗೌಡ, ಅಚ್ಯುತ್ ಕುಮಾರ್ ಹಾಗೂ ಗಿಲ್ಲಿ ನಟ, ಹುಲಿ ಕಾರ್ತಿಕ್ ಮೊದಲಾದವರನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರ ನಿರ್ಮಿಸಿದ್ದಾರೆ.

ನೋಡಿರಿ

