ಸುಬ್ಬನ ಬದುಕಿಗೆ ಸುಬ್ಬಿ ರೀಎಂಟ್ರಿ!? ಲಿಫ್ಟ್‌ನಲ್ಲಿ ಅರಳಿತೇ ಹಳೇ ಸ್ನೇಹ?
ವಿಜಯಲಕ್ಷ್ಮೀ ಕನಸು ನುಚ್ಚುನೂರು!

ದರ್ಶನ್ ಜೈಲಿಗೆ ಹೋಗಿದ್ದು ಹಳೇ ಕಥೆ..ಜೈಲಿನಿಂದ ಹೊರ ಬಂದಿದ್ದು ಹಳೇ ಕಥೆ. ಹೊಸ ಕಥೆ ಏನು ಅಂದ್ರೆ ದೂರ ದೂರ ಆಗಿದ್ದ ದರ್ಶನ್ ಮತ್ತು ಪವಿತ್ರಗೌಡ ಮತ್ತೆ ಒಂದಾಗ್ತಾರಾ ಅನ್ನೋದು. ದರ್ಶನ್ ಮತ್ತು ಪವಿತ್ರಗೌಡ ಕಳೆದ 10 ವರ್ಷಗಳಿಂದ ಸ್ನೇಹತರು.. ಈ ಸ್ನೇಹಕ್ಕೆ ಅಡ್ಡಿ ಬಂದ ರೇಣುಕಾಸ್ವಾಮಿ ಕಥೆ ಏನು ಆಯ್ತು ಅನ್ನೋದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಇದೇ ವಿಚಾರಕ್ಕೆ ಜೈಲಿಗೆ ಹೋದ ದರ್ಶನ್ ರಿಲೀಸ್ ಆದ ಮೇಲೆ ತಮ್ಮ ಪಾಡಿಗೆ ತಾವಿದ್ರು. ಹೆಂಡತಿ ಮಗನ ಜೊತೆ ಕಾಲ ಕಳೆಯುತ್ತಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದರು. ಯಾವ ಹಾಳು ತಂಟೆ ಬೇಡ ಅಂತ ಪಾರ್ಟಿ, ಪಬ್, ಫ್ರೆಂಡ್ಸ್ ಗೆ ಬ್ರೇಕ್ ಹಾಕಿದ್ರು. ದಾಸನ ಪತ್ನಿ ವಿಜಯಲಕ್ಷ್ಮೀ ಕೂಡ ಗಂಡ ಅಂತು ಸರಿ ಹೋದ್ರು, ನನ್ ಕಷ್ಟಕ್ಕೆ ಬ್ರೇಕ್ ಬಿತ್ತು. ಕಷ್ಟ ಪಟ್ಟು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಕ್ಕೂ ಸಾರ್ಥಕ ಆಯ್ತು ಅಂತ ಅಂದ್ಕೊಂಡಿದ್ರು.. ಅಷ್ಟೇ ಯಾಕೆ ಇದೇ 19 ರಂದು ದರ್ಶನ್ ಮತ್ತು ವಿಜಯಲಕ್ಷ್ಮೀ, ಮದುವೆ ವಾರ್ಷಿಕೋತ್ಸವನ್ನ ಅದ್ಧೂರಿಯಾಗಿ ಆಚರಿಸಿಕೊಂಡಿದ್ರು. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವಿಜಯಲಕ್ಷ್ಮಿ ಪತಿ ದರ್ಶನ್ ಜೊತೆಗಿನ ಒಂದು ಸ್ಪೆಷಲ್ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದ್ರು. ಈ ಫೋಟೋಗೆ ʻಶಾಶ್ವತ ಬಂಧʼ ಎಂದು ಕ್ಯಾಪ್ಶನ್ ಕೂಡ ಬರೆದುಕೊಂಡಿದ್ರು.. ಇದ್ದನ್ನ ನೋಡಿ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ರು. ಅಣ್ಣ ಅತ್ತಿಗೆ ಜೊತೆ ಸುಖವಾಗಿ ಇರಲಿ ಅಂತ ಹರಿಸಿ ಹಾರೈಸಿದ್ರು. “ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣ-ಅತ್ತಿಗೆ. ನೂರು ಕಾಲ ಹೀಗೆ ಜೊತೆಯಾಗಿ ಬಾಳಿ. 22ನೇ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮಿಬ್ಬರ ದಾಂಪತ್ಯ ಜೀವನ ಸುಖಕರವಾಗಿರಲಿ. ಈ ಮುದ್ದಾದ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ. ಎಲ್ಲಾ ಸಮಯದಲ್ಲೂ ಜೊತೆ ಇರುವವಳು ನಿಜವಾದ ಮಡದಿ. ಪ್ರೀತಿ ಎಲ್ಲರೂ ಮಾಡುತ್ತಾರೆ ಆದರೆ ಆ ಪ್ರೀತಿನಾ ಕೊನೆಯವರೆಗೂ ಉಳಿಸಿಕೊಂಡು ಹೋಗುವುದೇ ನಿಜವಾದ ಪ್ರೀತಿ” ಎಂದೆಲ್ಲಾ ಅಭಿಮಾನಿಗಳು ಬರೆದುಕೊಂಡಿದ್ರು. ಅಷ್ಟೇ ಅಲ್ಲ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ದರ್ಶನ್ ಹೊರ ಬಂದಮೇಲೆ, ದರ್ಶನ್ ಅವರು ಶೂಟಿಂಗ್ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆಯಾಗಿರುತ್ತಿದ್ದರು. ಈ ಜೋಡಿಯನ್ನು ಜೊತೆಯಾಗಿ ನೋಡೋದೆ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿತ್ತು. ಅಲ್ಲದೇ ಈ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಆದ್ರೆ ಅಷ್ಟು ಬೇಗ ಈ ಜೋಡಿ ಮೇಲೆ ಪವಿತ್ರಗೌಡ ದೃಷ್ಟಿ ಬಿದ್ದಿದೆ.
ವಿಜಯಲಕ್ಷ್ಮೀ ದರ್ಶನ್ ಮಧ್ಯೆ ಮತ್ತೆ ಬಂದ್ರಾ ಪವಿತ್ರಗೌಡ?
ಸುಖ ಸಂಸಾರದಲ್ಲಿದ್ದ ವಿಜಯಲಕ್ಷ್ಮೀ ದರ್ಶನ್ ಮಧ್ಯೆ ಮತ್ತೆ ಪವಿತ್ರಗೌಡ ಬಂದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟುಕೊಂಡಿದೆ. ಇದ್ದಕ್ಕೆ ಕಾರಣ ಕೋರ್ಟ್‌ನಲ್ಲಿ ಆದ ಬೆಳವಣಿಗೆ.. ದರ್ಶನ್ ಮತ್ತು ಪವಿತ್ರಗೌಡ ಜೈಲಿನಿಂದ ಹೊರ ಬಂದ ಮೇಲೆ ಒಬ್ಬರನ್ನ ಒಬ್ಬರು ಭೇಟಿ ಮಾಡಿರಲಿಲ್ಲ. ಕೋರ್ಟ್‌ನಲ್ಲಿ ಕೂಡ ಇಬ್ಬರಮಾತು ಕಥೆ ಇರಲಿಲ್ಲ.. ಆದ್ರೆ ದರ್ಶನ್ ವಾರ್ಷಿಕೋತ್ಸವದ ಮಾರನೇ ದಿನ ಅಂದ್ರೆ ಇವತ್ತು ದರ್ಶನ್ ಮತ್ತು ಪವಿತ್ರಗೌಡ ಕೋರ್ಟ್‌ನಲ್ಲಿ ಒಟ್ಟಾಗಿದ್ದಾರೆ.
ಲಿಫ್ಟ್ ನಲ್ಲಿ ಪವಿತ್ರಾಗೆ ನಂಬರ್ ಕೊಟ್ರಾ ಡಿ ಬಾಸ್
ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಪ್ರಕರಣದ ಎ1 ಪವಿತ್ರಾ ಗೌಡ ಹಾಗೂ ಎ2 ದರ್ಶನ್ ಸೇರಿ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಮೊದಲೇ ಕೋರ್ಟ್ ಹಾಲ್ ಒಳಗೆ ಪವಿತ್ರಗೌಡ ಅವರು ನಿಂತಿದ್ದರು. ನಟ ಧನ್ವೀರ್ ಜೊತೆ ನಟ ದರ್ಶನ್ ಅವರು ಕಪ್ಪು ಟೀ ಶರ್ಟ್‌ನಲ್ಲಿ ಕೋರ್ಟ್‌ಗೆ ಆಗಮಿಸಿದರು. ಮೊದಲಿಗೆ ದರ್ಶನ್ ಅವರು ಒಳಗೆ ಬರದೆ ಹೊರಗೆ ನಿಂತಿದ್ದರು. ಪವಿತ್ರಾಗೌಡ ಅವರಿಂದ ದರ್ಶನ್ ದೂರ ನಿಂತಿದ್ದು ನ್ಯಾಯಾಧೀಶರು 1ನೇ ಆರೋಪಿತೆ ಪಕ್ಕ ನಿಲ್ಲಿ ಎಂದು ಸೂಚಿಸಿದರು. ನಂತರ ದರ್ಶನ್ ಹಾಗೂ ಆರೋಪಿಗಳು ಸರತಿ ಸಾಲಿನಲ್ಲಿ ನಿಂತುಕೊಂಡರು. ವಿಚಾರಣೆ ಮುಗಿಸಿ ಹೊರಗೆ ಬರುವಾಗ ಫೋನ್ ನಂಬರ್ ಕೊಡುವಂತೆ ದರ್ಶನ್ ಅವರಿಗೆ ಪವಿತ್ರಾ ಗೌಡ ದುಂಬಾಲು ಬಿದ್ದಿದ್ದರು ಎಂದು ವರದಿಯಾಗಿದೆ.
ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ
ಕೋರ್ಟ್ ಹಾಲ್ ಒಳಗೆ ದರ್ಶನ್ ಸೈಲೆಂಟ್ ಆಗಿದ್ರು. ಆದರೆ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ಅವರು ದುಂಬಾಲು ಬಿದ್ದು ಮಾತನಾಡಿಸಿದ್ರಂತೆ.. ದರ್ಶನ್ ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದ್ರಂತೆ.. ದರ್ಶನ್ ಸ್ವಲ್ಪ ಹೊತ್ತು ಸುಮ್ಮನಿದ್ದು, ಕೊನೆಗೆ ದರ್ಶನ್ ಪವಿತ್ರಾ ಮೊಬೈಲ್ ತಗೊಂಡು ತನ್ನ ಫೋನ್ ನಂಬರ್ ಅನ್ನ ಡಯಲ್ ಮಾಡಿಕೊಟ್ಟಿದ್ದಾರಂತೆ. ನಂತ್ರ ಕೋರ್ಟ್‌ನಿಂದ ಕೈ ಕೈ ಹಿಡಿದುಕೊಂಡು ಹೊರ ಬಂದಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಇಬ್ಬರು ಕೈ ಕೈ ಹಿಡಿದುಕೊಂಡು ಬರುವ ಫೋಟೋ ಆಗಲಿ ವಿಡಿಯೋ ಆಗಲಿ ಯಾರಿಗೂ ಸಿಕ್ಕಿಲ್ಲ. ಇನ್ನು ಕಳೆದ ಬಾರಿ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣೆಗೆ ಹಾಜರಾಗಿದ್ದ ವೇಳೆ ಒಬ್ಬರ ಮುಖ ಒಬ್ಬರು ನೋಡಿರಲಿಲ್ಲ ಎಂದು ಹೇಳಲಾಗಿತ್ತು. ಈ ಬಾರಿ ಕೂಡ ಕೋರ್ಟ್ ಒಳಗೆ ಇಬ್ಬರ ನಡುವೆ ಯಾವುದೇ ಸಂಭಾಷಣೆ ನಡೆದಿರಲಿಲ್ಲ,. ಆದರೆ ನಾಲ್ಕನೇ ಮಹಡಿಯ ಕೋರ್ಟ್‌ನಿಂದ ಕೆಳಗೆ ಇಳಿದು ಬರುವಾಗ ಇಬ್ಬರು ಒಮ್ಮೆಲೆ ಲಿಫ್ಟ್‌ನಲ್ಲಿ ಇಳಿದು ಕೆಳಗೆ ಬಂದಿದ್ದು ಈ ವೇಳೆ ಫೋನ್ ನಂಬರ್ ಕೊಡುವಂತೆ ಪವಿತ್ರಾ ಗೌಡ ಕೇಳಿದ್ದಾರೆ ಅನ್ನೋ ಬಗ್ಗೆ ವರದಿಯಾಗಿವೆ. ಒಟ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ನಂತ್ರ ವಿಜಯಲಕ್ಷ್ಮೀ ಅವರಿಗೆ ಹೊಸ ಬದುಕು ಸಿಕ್ಕಿತ್ತು,.. ಪರರ ಪಲಾಗಿದ್ದ ದಾಸ ಮತ್ತೆ ಮಡದಿಯ ಜೊತೆ ಖುಷಿಯಾಗಿದ್ರು. ಇದು ಅಭಿಮಾನಿಗಳಿಗೂ ಖುಷಿ ನೀಡಿತ್ತು. ಆದ್ರೆ ಪವಿತ್ರಗೌಡ ಮಾತ್ರ ದಾಸನನ್ನ ಬಿಡೋ ಲಕ್ಷಣಗಳೇ ಕಾಣುತ್ತಿಲ್ಲ.. ಈಗ ನಂಬರ್ ಪಡೆದಿರೋ ಪವಿತ್ರಗೌಡ ಮತ್ತೆ ದರ್ಶನ್ ಬದುಕಲ್ಲಿ ಬರ್ತಾರಾ? ಮತ್ತೆ ವಿಜಯಲಕ್ಷ್ಮೀ ಬದುಕಲ್ಲಿ ಬಿರುಗಾಳಿ ತರ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.