ಕೋರ್ಟ್‌ನಲ್ಲಿ ಸುಬ್ಬ-ಸುಬ್ಬಿಯ ಕಣ್ಣೀರು- ಡಿ ಬಾಸ್ ನೋಡಿ ಪವಿತ್ರಾ ಭಾವುಕ
ಗೆಳತಿಯನ್ನ ತಬ್ಬಿ ಸಂತೈಸಿದ ದರ್ಶನ್
7 ತಿಂಗಳ ಬಳಿಕ ದರ್ಶನ್ ಅವರನ್ನು ನೋಡಿ ಪವಿತ್ರಾ ಗೌಡ ಭಾವುಕರಾದ ಪ್ರಸಂಗ ನಡೆಯಿತು. 57ನೇ ಸಿಸಿಹೆಚ್ ಕೋರ್ಟ್‌ಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. 7 ತಿಂಗಳ ನಂತರ ಕೋರ್ಟ್‌ನಲ್ಲಿ ದರ್ಶನ್ ಅವರನ್ನು ನೋಡಿದ ಪವಿತ್ರಾ ಗೌಡ ಭಾವುಕರಾದರು. ಕೋರ್ಟ್ ಹಾಲ್‌ನಲ್ಲಿ ಪವಿತ್ರಗೌಡ ಪದೇ ಪದೇ ದರ್ಶನ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದರು. ಈ ವೇಳೆ ದರ್ಶನ್ ಬೆನ್ನುತಟ್ಟಿ ಪವಿತ್ರಾ ಅವರನ್ನು ಸಂತೈಸಿ ಕೆಲ ಕ್ಷಣ ಮಾತನಾಡಿದರು.
ಇದನ್ನೂ ಓದಿ : ತಾಲಿಬಾನ್ ಬೆನ್ನಿಗೆ ನಿಂತಿದ್ಯಾ ಭಾರತ? ದುಬೈ ಚರ್ಚೆ ಡಿಟೈಲ್ಸ್!
ಜಾಮೀನು ಸಿಕ್ಕಿದರೂ ಇಲ್ಲಿಯವರೆಗೆ ಪವಿತ್ರಾಗೌಡ- ದರ್ಶನ್ ಭೇಟಿಯಾಗಿಲ್ಲ. ಈ ಹಿಂದೆ ಕೋರ್ಟ್ ವಿಚಾರಣೆಯ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಿದ್ದೇ ಕೊನೆ. ಅದಾದ ಬಳಿಕ ದರ್ಶನ್ ಹಾಗೂ ಪವಿತ್ರಾ ದೂರವಾಗಿದ್ದರು. ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಇದ್ದರು ಆದರೆ ದರ್ಶನ್ ಜೈಲಿನ ಕೂಲ್ ಲೈಫ್ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಳ್ಳಾರಿಗೆ ಎತ್ತಂಗಡಿ ಮಾಡಿದ್ದರು. ಅಲ್ಲಿಂದ ದರ್ಶನ್ ಮತ್ತು ಪವಿತ್ರಾ ಗೌಡ ಇನ್ನೂ ದೂರ ದೂರ. ಜಾಮೀನು ಪಡೆದ ಹೊರ ಬಂದಾಗ ಪವಿತ್ರಾ ಗೌಡ ಅಲ್ಲೇ ಇದ್ದ ಮುನೇಶ್ವರ ಗುಡಿಗೆಯಲ್ಲಿ ಪೂಜೆ ಸಲ್ಲಿಸಿದ್ದರು. ಆಗ ಪವಿತ್ರಾ ಮೌನವಾಗಿ ನಿಂತಿದ್ದರೂ ಸಹ ಅವರ ತಾಯಿ ಅರ್ಚನೆ ಸಮಯದಲ್ಲಿ ದರ್ಶನ್ ಹೆಸರು ತೆಗೆದರು. ಅಯ್ಯೋ ಅಮ್ಮ ಮಗಳು ಇಬ್ಬರೂ ದರ್ಶನ್‌ನ ಬಿಡುವಂತೆ ಕಾಣಿಸುತ್ತಿಲ್ಲ ಎಂದು ಟ್ರೋಲ್ ಶುರುವಾಯ್ತು. ಹೊರಗಿರುವ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಪಡೆದು ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ಮತ್ತು ಮೈಸೂರು ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೀಗಾಗಿ ಪವಿತ್ರಾ ಹೊರ ಬಂದ ಮೇಲೆ ಭೇಟಿ ಆಗಿರಲಿಲ್ಲ. ಈಗ ಸುಮಾರು 7 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಆಗಿಯಾಗಿದ್ದಾರೆ. ದರ್ಶನ್‌ನ ನೋಡುತ್ತಿದ್ದಂತೆ ಪವಿತ್ರಾ ಗೌಡ ಭಾವುಕರಾಗುತ್ತಾರೆ. ಆಗ ಬೆನ್ನು ತಟ್ಟಿ ದರ್ಶನ್ ಸಂತೈಸಿದ್ದಾರೆ. ಆದರೆ ಫೆ.25ಕ್ಕೆ ವಿಚಾರ ಮುಂದೂಡಿಕೆ ಆಗಿದೆ. ಈ ಘಟನೆಯನ್ನು ನೋಡಿದರೆ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಮಾತನಾಡುತ್ತಿದ್ದಾರಾ? ಯಾಕೆ ಪವಿತ್ರಾ ದರ್ಶನ್ ಬಳಿ ಮಾತನಾಡಲು ಅಷ್ಟು ಪ್ರಯತ್ನ ಪಟ್ಟರು? ದರ್ಶನ್ ಇಷ್ಟು ದಿನದಿಂದ ಮಾತನಾಡಿಲ್ವಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.