ಜೈಲಿನಲ್ಲಿ ವಾಕಿಂಗ್ ಶುರುಮಾಡಿದ ನಟ ದರ್ಶನ್! – ಕಂಡೀಷನ್ ಅಪ್ಲೈ.. ದಾಸನ ಮೇಲೆ ಪೊಲೀಸರ ನಿಗಾ!

ಇತ್ತೀಚೆಗಷ್ಟೇ ಇದ್ರೆ ನೆಮ್ದಿಯಾಗಿರ್ಬೇಕು ಹಾಡು ಹಾಡಿದ್ದ ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸ್ ನೆಮ್ಮದಿ ಹಾಳು ಮಾಡಿದೆ. ಬಿಸಿಲು ನೋಡದೇ ತಿಂಗಳೇ ಕಳೆದಿದೆ. ನಂಗೆ ವಿಷಬೇಕು ಎಂದು ಕೋರ್ಟ್ನಲ್ಲಿ ಕೇಳಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಜೈಲಿನಲ್ಲಿರುವ ನಟ ದರ್ಶನ್ಗೆ ಕನಿಷ್ಠ ಸವಲತ್ತುಗಳನ್ನು ನೀಡುವಂತೆ ಕೋರ್ಟ್ ಸೂಚಿಸಿತ್ತು. ಇದೀಗ ದರ್ಶನ್ಗೆ ಜೈಲಿನಲ್ಲಿ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಅಂಗ ಮತ್ತು ಅಂಗಾಂಶ ದಾನ ಮಾಡಿದ ಕಿಚ್ಚನ ಪತ್ನಿ – ಸುದೀಪ್ ಬರ್ತ್ಡೇಗೆ ಮಹತ್ತರ ಕಾರ್ಯ ಕೈಗೊಂಡ ಪ್ರಿಯಾ ಸುದೀಪ್
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮೊನ್ನೆಯಷ್ಟೇ ವಿಚಾರಣೆ ವೇಳೆ ದರ್ಶನ್ ಒಳ್ಳೆ ಹಾಸಿಗೆ, ದಿಂಬು ಕೊಡುವಂತೆ ಕೇಳಿದ್ರು. ಬಿಸಿಲು ನೋಡಿ ತಿಂಗಳಾಗಿದೆ. ಫಂಗಸ್ ಸಮಸ್ಯೆ ಆಗುತ್ತಿದೆ ಎಂದು ದರ್ಶನ್ ಗೋಗರೆದಿದ್ದರು. ನನಗೆ ವಿಷ ಕೊಟ್ಟು ಬಿಡಿ ಎಂದು ಹೇಳಿದ್ರು. ಈ ಬೆನ್ನಲ್ಲೇ ಜೈಲಿನಲ್ಲಿರುವ ನಟ ದರ್ಶನ್ಗೆ ಕನಿಷ್ಠ ಸವಲತ್ತುಗಳನ್ನು ನೀಡುವಂತೆ ಕೋರ್ಟ್ ಸೂಚಿಸಿತ್ತು. ಇದೀಗ ದರ್ಶನ್ ಗೆ ಬೆಳಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಬ್ಯಾರಕ್ನ ಹೊರಭಾಗದ ಕಾರಿಡಾರ್ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ. ಆದ್ರೆ ಕೆಲ ನಿಯಮಗಳನ್ನೂ ನಟ ದರ್ಶನ್ ಗೆ ಹಾಕಲಾಗಿದೆ.
ಹೌದು.. ನಟ ದರ್ಶನ್ ಗೆ ಬ್ಯಾರಕ್ನ ಹೊರಭಾಗದ ಕಾರಿಡಾರ್ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ. ಆದ್ರೆ ಈ ಸಮಯದಲ್ಲಿ ಈ ಸಮಯದಲ್ಲಿ ಬೇರೆ ವಿಚಾರಣಾಧೀನಾ ಕೈದಿಗಳು ವಾಕ್ ಮಾಡುವಂತಿಲ್ಲ. ದರ್ಶನ್ ವಾಕ್ ಮುಗಿದ ನಂತರವಷ್ಟೇ ಇತರರು ವಾಕ್ ಮಾಡಬಹುದಾಗಿದೆ. ವಾಕಿಂಗ್ ಸೇರಿದಂತೆ ಸೆಲ್ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ದಾಖಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ದರ್ಶನ್ ಸೆಲ್ ಬಳಿ ಕೆಲಸ ಮಾಡುವ ಎಲ್ಲಾ15 ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವಾರ್ನ್ ಕ್ಯಾಮರಾ ಹಾಕಿಕೊಂಡು ಕೆಲಸ ಮಾಡಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ.

ನೋಡಿರಿ

