ದಚ್ಚುಗೆ ಕೊಲೆ ಕೇಸ್ ನಲ್ಲಿ ಜೈಲು ಫಿಕ್ಸ್? – ಹಣ ಹೂಡಿ ಕೆಟ್ರಾ ನಿರ್ಮಾಪಕರು?
ಚಿತ್ರರಂಗದಿಂದಲೂ ಬ್ಯಾನ್ ಗೆ ನಿರ್ಧಾರ?

ದಚ್ಚುಗೆ ಕೊಲೆ ಕೇಸ್ ನಲ್ಲಿ ಜೈಲು ಫಿಕ್ಸ್? – ಹಣ ಹೂಡಿ ಕೆಟ್ರಾ ನಿರ್ಮಾಪಕರು?ಚಿತ್ರರಂಗದಿಂದಲೂ ಬ್ಯಾನ್ ಗೆ ನಿರ್ಧಾರ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ಈಗ ತನ್ನ ಕ್ರೌರ್ಯದ ಅರಿವಾಗ್ತಿದೆ. ಒಂದು ಅಮಾಯಕ ಜೀವವನ್ನ ತೆಗೆದ ತಪ್ಪಿಗೆ ಜೈಲಲ್ಲೇ ದಿನ ಕಳೆಯುವಂತಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ರೆ ದರ್ಶನ್ ಎ2 ಆರೋಪಿ ಆಗಿದ್ದಾರೆ. ಕೊಲೆ ಕೇಸ್​ನಲ್ಲಿ ಇನ್ವೆಸ್ಟಿಗೇಷನ್ ಚುರುಕುಗೊಳಿಸಿರೋ ಪೊಲೀಸ್ರು ಒಂದೊಂದೇ ರಹಸ್ಯಗಳನ್ನ ಹೊರಗೆಳೆಯುತ್ತಿದ್ದಾರೆ. ಬಟ್ ಈ ಒಂದು ಕೊಲೆ ಕೇಸ್ ದರ್ಶನ್​ನ ಕರಿಯರ್​ನೇ ಮುಗಿಸೋ ಲಕ್ಷಣ ಕಾಣ್ತಿದೆ. ಚಿತ್ರರಂಗದಿಂದಲೇ ಬ್ಯಾನ್ ಆಗ್ತಾರೆ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಅಷ್ಟಕ್ಕೂ ಕೇಸ್ ಮುಚ್ಚಿ ಹಾಕೋಕೆ ದರ್ಶನ್ ಎಷ್ಟು ಲಕ್ಷಕ್ಕೆ ಡೀಲ್ ಕುದುರಿಸಿದ್ರು? ಚಿತ್ರರಂಗದಿಂದಲೇ ಬ್ಯಾನ್ ಆಗ್ತಾರಾ? ಈಗಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳ ಕಥೆ ಏನು? ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಅಪ್ಪ HERO ಅಲ್ಲ ವಿಲನ್.. ಹೇಗಿರ್ತಾನೆ ಮಗ? -ಪವಿತ್ರಾಗಾಗಿ ವಿಕೃತಿ.. ವಿಜಯಲಕ್ಷ್ಮೀ ಮೌನ

ಹೇಳಿಕೊಳ್ಳುವಂಥ ದೊಡ್ಡ ವಿಚಾರವೂ ಅಲ್ಲ. ಕೊಲೆ ಮಾಡುವಂತ ಘೋರ ಕೃತ್ಯವೂ ಅದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದ ಅನ್ನೋದಷ್ಟೇ ವಿಷಯ. ಹಾಗೆ ನೋಡಿದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡದೇ ಇರೋ ವಿಷಯವೇ ಇಲ್ಲ. ಸೋ ಪೊಲೀಸರಿಗೆ ದೂರು ಕೊಟ್ಟಿದ್ರೆ ಕಾನೂನು ಮೂಲಕ ಪಾಠ ಕಲಿಸ್ತಿದ್ರು. ಅದನ್ನ ಬಿಟ್ಟು ಸಿನಿಮಾಗಳಲ್ಲಿ ವಿಲನ್​ಗಳು ಮಾಡೋ ಕೆಲ್ಸವನ್ನ ರಿಯಲ್ ಲೈಫಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿಬಿಟ್ಟಿದ್ದಾರೆ. ಒಂದು ಅಮಾಯಕ ಜೀವವನ್ನೇ ತೆಗೆದಿದ್ದಾರೆ. ಇದೇ ಕಾರಣಕ್ಕೆ ದರ್ಶನ್​, ಪವಿತ್ರಾ ಗೌಡ ಸೇರಿದಂತೆ 13 ಜನ ಪೊಲೀಸರ ಅತಿಥಿಗಳಾಗಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್​ನ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಬುಧವಾರ ಪೊಲೀಸರು ಡಿ ಗ್ಯಾಂಗ್ ಸದಸ್ಯರನ್ನ ವಿಚಾರಣೆಗೆ ಒಳಪಡಿಸಿದ್ರು. ಇದ್ರ ನಡುವೆ ದರ್ಶನ್ ಬ್ಯಾನ್ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ.

ನಿರ್ಮಾಪಕರಿಗೆ ಆತಂಕ!    

ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಮಾಸ್ ಹೀರೋ ಅಂತಾ ಕರೆಸಿಕೊಳ್ಳೋ ದರ್ಶನ್​ಗೆ ಬಹುದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾ ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಹೀಗಾಗಿ ದರ್ಶನ್​ರನ್ನ ನಂಬಿಕೊಂಡು ಕೋಟ್ಯಂತರ ರೂಪಾಯಿ ಬಂಡವಾಳವನ್ನು ಸಿನಿಮಾ ನಿರ್ಮಾಪಕರು ಹಾಕಿದ್ದಾರೆ. ಆದ್ರೀಗ ದರ್ಶನ್ ಜೈಲು ಪಾಲಾಗಿದ್ದರಿಂದ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ದರ್ಶನ್ ಪ್ರಸ್ತುತ ‘ಡೆವಿಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಈ ಮಧ್ಯೆ ದರ್ಶನ್ ಬಂಧನವಾಗಿದ್ದು, ಡೆವಿಲ್ ನಿರ್ಮಾಪಕರಿಗೆ ದಿಕ್ಕು ತೋಚದಂತಾಗಿದೆ. ಡೆವಿಲ್ ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು. ಆ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡುವ ನಿರೀಕ್ಷೆ ಇತ್ತು. ಆ ಸಿನಿಮಾಕ್ಕಾಗಿ ಪ್ರೇಮ್ ಈಗಾಗಲೇ ಸಿದ್ಧತೆ ಆರಂಭಿಸಿದ್ದರು. ಆದರೆ ಈಗ ಅದೂ ಸಹ ತಟಸ್ಥವಾಗುವ ಸಾಧ್ಯತೆ ಇದೆ. ಹಾಗೇ  ನಿರ್ಮಾಪಕ ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾಕ್ಕಾಗಿ ದರ್ಶನ್ ಕಾಲ್​ಶೀಟ್ ಕೊಟ್ಟಿದ್ರು. ಸೂರಪ್ಪ ಬಾಬು ಸಹ ದರ್ಶನ್ ಜೊತೆ ಸಿನಿಮಾ ಮಾಡಲು ಹಣಕಾಸಿನ ಹೊಂದಾಣಿಕೆಯಲ್ಲಿ ತೊಡಗಿದ್ದರು. ಬಟ್ ಈಗ ದರ್ಶನ್ ಬಂಧನದಿಂದ ಈ ಸಿನಿಮಾ ಸಹ ಬಂದ್ ಆಗಲಿದೆ. ಇದಾದ ಬಳಿಕ ಕಾಟೇರ ಸಿನಿಮಾದ ತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡೋಕೆ ದರ್ಶನ್ ರೆಡಿಯಾಗಿದ್ರು. ರಾಕ್​ಲೈನ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ಹೊಸ ಸಿನಿಮಾವನ್ನು ದರ್ಶನ್ ಕೈಗೆತ್ತಿಕೊಳ್ಳಬೇಕಿತ್ತು. ಸೋ ಈಗ ಈ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಶಾಕ್​ನಲ್ಲಿದ್ದಾರೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸಾಕ್ಷಿಗಳನ್ನ ಕಲೆ ಹಾಕುತ್ತಿರೋ ಪೊಲೀಸರು ಈಗಾಗಲೇ ಅಪರಾಧಕ್ಕೆ ಬಳಕೆಯಾಗಿದೆ ಎನ್ನಲಾಗುತ್ತಿರುವ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್ ವಿರುದ್ಧ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದರೆ ದರ್ಶನ್​ಗೆ ಸುಲಭಕ್ಕೆ ಜಾಮೀನು ಸಿಗುವುದು ಅನುಮಾನ. ಅಲ್ಲದೆ ಪ್ರಕರಣದಲ್ಲಿ ದರ್ಶನ್​ಗೆ ಶಿಕ್ಷೆ ಆಗುವ ಸಾಧ್ಯತೆಯೂ ಹೆಚ್ಚಿಗಿದೆ. ಇದೇ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಸೇರಿದಂತೆ ಕೆಲವು ಸಿನಿಮಾ ನಿರ್ಮಾಪಕರು ತೀವ್ರ ಆತಂಕದಲ್ಲಿದ್ದಾರೆ. ಹಾಗೇ ಅವ್ರ ಸಿನಿ ಕರಿಯರ್ ಕೊನೆಗೊಳ್ಳುತ್ತದೆಯೇ ಎನ್ನುವ ಪ್ರಶ್ನೆ ಕೂಡ ಮೂಡಿದೆ.

ಚಿತ್ರರಂಗದಿಂದ ಬ್ಯಾನ್!   

ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ರೆ ದರ್ಶನ್ ಎ2 ಆರೋಪಿ ಆಗಿದ್ದಾರೆ. ಸದ್ಯ ಅವ್ರನ್ನ 6 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ದರ್ಶನ್​ರನ್ನ ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಬಗ್ಗೆ ಚರ್ಚೆ ನಡೀತಿದೆ.  ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿದ್ರೂ ಸ್ಯಾಂಡಲ್​ವುಡ್​ನ ಬಹುತೇಕ ಸೆಲೆಬ್ರಿಟಿಗಳು ಮೌನ ತಾಳಿದ್ದಾರೆ. ಕೆಲವೇ ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ತಪ್ಪಾಗಿದ್ದರೆ ಶಿಕ್ಷೆ ಆಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.​ಎಂ ಸುರೇಶ್ ಈ ಕೇಸ್ ಬಗ್ಗೆ ಮಾತನಾಡಿದ್ದು, ದರ್ಶನ್ ಚಿತ್ರರಂಗದ ಮಾನ-ಮರ್ಯಾದೆ ಕಳೆದಿರುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ. ಈ ವಿಚಾರದಲ್ಲಿ ಕಲಾವಿದರ ಸಂಘದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಆದ್ರೆ ಕಲಾವಿದರ ಸಂಘದ ವಿಚಾರಕ್ಕೆ ಬರೋದಾದರೆ ಅದು ಸಂಪೂರ್ಣ ನಿಷ್ಕ್ರಿಯವೇ ಆಗಿ ಬಿಟ್ಟಿದೆ. ಅಂಬರೀಷ್ ಅವರು ಈ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಅವರು ಮೃತಪಟ್ಟ ಬಳಿಕ ಮತ್ತೊಬ್ಬರ ಆಯ್ಕೆ ಆಗಿಲ್ಲ. ಸಭೆಗಳು ಕೂಡ ನಡೆಯುತ್ತಿಲ್ಲ. ಹೀಗಿರುವಾಗ ಸಂಘದವರು ದರ್ಶನ್​ನ ಬ್ಯಾನ್ ಮಾಡೋದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.

ಬಟ್ ಇಲ್ಲಿ ದರ್ಶನ್ ಅವ್ರನ್ನ ಅಷ್ಟು ಸುಲಭಕ್ಕೆ ಬ್ಯಾನ್ ಮಾಡೋಕೆ ಆಗಲ್ಲ. ಯಾಕಂದ್ರೆ ದರ್ಶನ್ ಒಬ್ಬ ಸ್ಟಾರ್ ಹೀರೋ. ಸೋ ಅವ್ರ ಚಿತ್ರಗಳೂ ಸೂಪರ್ ಡೂಪರ್ ಹಿಟ್ ಆಗಿವೆ. ಈಗಲೂ ಕೂಡ ಅವ್ರ ಸಿನಿಮಾಗಳಿಗೆ ಬೇಡಿಕೆ ಇದೆ. ಅವರ ಸಿನಿಮಾಗಳಿಂದ ಅನೇಕರಿಗೆ ಕೆಲಸ ಸಿಗುತ್ತಿದೆ. ಹೀಗಾಗಿ ಯಾವ ರೀತಿ ಕ್ರಮ ಕೈಗೊಳ್ತಾರೋ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *