ಪ್ರೀತಿಯ ʼಪರಿʼಯನ್ನ ಮನೆಗೆ ಬರಮಾಡಿಕೊಂಡ ಸ್ಯಾಂಡಲ್‌ ವುಡ್‌ ಕ್ಯೂಟ್‌ ಕಪಲ್‌ – ಮಗಳ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ದಂಪತಿ

ಪ್ರೀತಿಯ ʼಪರಿʼಯನ್ನ ಮನೆಗೆ ಬರಮಾಡಿಕೊಂಡ ಸ್ಯಾಂಡಲ್‌ ವುಡ್‌ ಕ್ಯೂಟ್‌ ಕಪಲ್‌ – ಮಗಳ ಮುಖ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ ದಂಪತಿ

ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಸ್ಯಾಂಡಲ್‌ ವುಡ್‌ನ ಕ್ಯೂಟ್‌ ಕಪಲ್.. ಸೆ. 5 ರಂದು ಮಿಲನಾ ನಾಗರಾಜ್‌ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಈ ಜೋಡಿ ಮುದ್ದಿನ ಮಗಳನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIRಗೆ ಕೋರ್ಟ್​ ಆದೇಶ

ನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ ಪರಿ ಎಂದು ಅಡಿಬರಹ ನೀಡಿ ಮಗಳ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಪತ್ನಿ ಮಿಲನಾ ಜೊತೆಗೆ ಮನೆಯೊಳಗೆ ಕಾಲಿಟ್ಟಿದ್ದಾರೆ. ಈ ವೇಳೆ, ಮನೆಯ ತುಂಬಾ ಬಲೂನ್‌ಗಳಿಂದ ಅಲಂಕಾರ ಮಾಡಲಾಗಿದೆ. ಬಳಿಕ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ‘ಪರಿ’ ಎಂದು ಮಗಳಿಗೆ ಚೆಂದದ ಹೆಸರನ್ನು ಇಟ್ಟಿದ್ದಾರೆ. ಇನ್ನೂ ಹಿಂದಿ ಭಾಷೆಯಲ್ಲಿ ‘ಪರಿ’ ಅಂದರೆ ಅಪ್ಸರೆ ಎಂದರ್ಥವಾಗಿದೆ. ಒಟ್ನಲ್ಲಿ ಮಗುವಿನ ಮುಖ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಮಗುವಿನ ಆಗಮನದ ಖುಷಿಯಲ್ಲಿರುವ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

Shwetha M