ಮೂರು ಸಿಂಹ.. ಒಂದು ಮುಂಗುಸಿ ನಡುವೆ ಬಿಗ್‌ ಫೈಟ್! –‌ ದೊಡ್ಡ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?

ಮೂರು ಸಿಂಹ.. ಒಂದು ಮುಂಗುಸಿ ನಡುವೆ ಬಿಗ್‌ ಫೈಟ್! –‌ ದೊಡ್ಡ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?

ಕಾಡಿನಲ್ಲಿ ಪ್ರಾಣಿಗಳು ಆಗಾಗ ಕಾದಾಟ ನಡೆಸುತ್ತಿರುತ್ತವೆ. ಹುಲಿ, ಸಿಂಹ ಹಾಗೂ ಇತರ ಪ್ರಾಣಿಗಳು ಆಹಾರಕ್ಕಾಗಿ ಕಾದಾಟ ನಡೆಸುತ್ತಿರುತ್ತವೆ. ಹಾವು ಮತ್ತು ಮುಂಗಸಿಯ ನಡುವಿನ ಕಾದಾಟವನ್ನು ನೀವು ಅನೇಕ ಬಾರಿ ನೋಡಿರುತ್ತೆವೆ. ಇದರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಆದ್ರೆ ಮುಂಗುಸಿ ಕಾಡಿನ ರಾಜ ಸಿಂಹದೊಂದಿಗೆ ಕಾದಾಡುವುದನ್ನು ಯಾವತ್ತಾದ್ರೂ  ನೋಡಿದ್ದೀರಾ? ಮುಂಗುಸಿಯೊಂದು ಕಾಡಿನ ರಾಜ ಸಿಂಹದೊಂದಿಗೆ ಕಾದಾಟ ನಡೆಸುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ:

ಮುಂಗುಸಿ ಮತ್ತು ಸಿಂಹಗಳ ನಡುವಿನ ಕಾಳಗದ ಈ ಕುತೂಹಲಕಾರಿ ವಿಡಿಯೋವನ್ನು @Zhenya225004 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋದಲ್ಲಿ ಮುಂಗುಸಿಯು ತನ್ನ ಮೇಲೆ ದಾಳಿ ಮಾಡಲು ಬಂದಂತಹ ಸಿಂಹಗಳನ್ನು  ಧೈರ್ಯಯಿಂದ ಎದುರಿಸುವ ಮೂಲಕ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವಂತಹ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಒಂದು ಕಾಡಿನಲ್ಲಿ ಸಿಂಹವೊಂದು ತನ್ನ ಕೂತಿರುತ್ತದೆ, ಅಷ್ಟರಲ್ಲಿ ತನ್ನ ಗೂಡಿನಿಂದ ಹೊರ ಬಂದ ಮುಂಗುಸಿಯೊಂದು ಸಿಂಹವನ್ನು ಕಂಡು ಜೋರಾಗಿ ಕಿರುಚಲು ಪ್ರಾರಂಭಿಸುತ್ತದೆ, ಒಮ್ಮೆಲೆ ಬೆಚ್ಚಿ ಬಿದ್ದ ಸಿಂಹವು ಇದ್ಯಾವ ಪ್ರಾಣಿ ಅಂತ ಮುಂಗುಸಿಯನ್ನೇ ನೋಡುತ್ತಾ ಕುಳಿತುಕೊಳ್ಳುತ್ತೆ. ಅಷ್ಟರಲ್ಲಿ ಏನದು ಸದ್ದು ಎಂದು ಇನ್ನೊಂದು ಸಿಂಹ ಓಡೋಡಿ ಬಂದು ಮುಂಗುಸಿಯ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಈ ದೈತ್ಯರ ಮುಂದೆ ಭಯಪಟ್ಟು ಬಾಲ ಮುದುರಿಕೊಂಡು ಕೂತ್ರೆ, ಖಂಡಿತವಾಗಿ ಇವರುಗಳು ನನ್ನನ್ನು ತಿಂದು ತೇಗಿಬಿಡುತ್ತಾರೆ ಎಂದು ಭಾವಿಸಿದ ಮುಂಗುಸಿ, ಧೈರ್ಯ ತೆಗೆದುಕೊಂಡು ನಿಮ್ಮ ಆಟ ನನ್ನ ಮುಂದೆ ನೆಡೆಯೊಲ್ಲಾ ಎನ್ನುತ್ತಾ ಸಿಂಹದ ಮೇಲೆಯೇ ದಾಳಿ ಮಾಡಲು ಮುಂದಾಗುತ್ತದೆ. ಮುಂಗುಸಿಯ ಆರ್ಭಟಕ್ಕೆ ಭಯಪಟ್ಟ   ಸಿಂಹ ಹಿಂದೆ ಹಿಂದೆ ಹೆಜ್ಜೆಯನ್ನಿಡುತ್ತಾ, ಮುಂಗುಸಿಯ ದಾಳಿಯಿಂದ ತಪ್ಪಿಸಿಕೊಳ್ಳುವಂತಹ ದೃಶ್ಯವನ್ನು ಕಾಣಬಹುದು.

ಈ ವಿಡಿಯೋದಲ್ಲಿ ಧೈರ್ಯ ಒಂದಿದ್ದರೆ, ಎಂತಹ ಬಲಿಷ್ಟರನ್ನು ಬೇಕಾದರೂ ಎದುರಿಸಬಹುದು, ಜೀವನದಲ್ಲಿ ಬರುವ ಯಾವುದೇ ಸಂಕಷ್ಟವನ್ನು ಎದುರಿಸಿ ಜಯಿಸಬಹುದೆಂದು ಈ ಮುಂಗುಸಿಯು ತೋರಿಸಿಕೊಟ್ಟಿದೆ.  ಸಿಂಹಗಳು ಮತ್ತು ಮುಂಗುಸಿನ ನಡುವಿನ ಕಾಳಗದ ಕುತೂಹಲಕಾರಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್  ಆಗಿದೆ.

Shwetha M