ಮೊಟ್ಟೆಗಳಿಗೆ ಕೈ ಹಾಕಿದ್ರೆ ಹುಷಾರ್‌..! – ಮೊಟ್ಟೆ ಮುಟ್ಟಲು ಬಂದವನಿಗೆ ಹೆಬ್ಬಾವು ಮಾಡಿದ್ದೇನು?

ಮೊಟ್ಟೆಗಳಿಗೆ ಕೈ ಹಾಕಿದ್ರೆ ಹುಷಾರ್‌..! – ಮೊಟ್ಟೆ ಮುಟ್ಟಲು ಬಂದವನಿಗೆ ಹೆಬ್ಬಾವು ಮಾಡಿದ್ದೇನು?

ಸಾಕು ಪ್ರಾಣಿಗಳು ಮರಿ ಇಟ್ಟ ವೇಳೆ ತನ್ನ ಮರಿಗಳ ಹತ್ತಿರ ಯಾರನ್ನು ಬರಲು ಬಿಡುವುದಿಲ್ಲ. ಮರಿಗಳಿಗೆ ಯಾರಾದರು ತೊಂದರೆ ಮಾಡುತ್ತಾರೆ ಅಂತಾ ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತವೆ. ಮರಿಗಳನ್ನು ಯಾರಾದರೂ ಮುಟ್ಟಲು ಹತ್ತಿರ ಬಂದರೆ ಅವರ ಮೇಲೆ ದಾಳಿ ನಡೆಸುತ್ತವೆ. ಇಲ್ಲೊಂದು ಹೆಬ್ಬಾವು ಮೊಟ್ಟೆ ಇಟ್ಟಿದೆ. ಹೆಬ್ಬಾವಿನ ಮೊಟ್ಟೆಯನ್ನು ವ್ಯಕ್ತಿಯೊಬ್ಬ ಮುಟ್ಟಲು ಯತ್ನಿಸುತ್ತಾರೆ. ತಾಯಿ ಹೆಬ್ಬಾವು ಅವರ ಮೇಲೆಯೇ ದಾಳಿ ಮಾಡುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ..

ಇದನ್ನೂ ಓದಿ: ಹುಲಿಗೆ ಆಟ ಪ್ರವಾಸಿಗರಿಗೆ ಪ್ರಾಣ ಸಂಕಟ – ವಾಹನ ಹಿಡಿದು ಭಯ ಹುಟ್ಟಿಸಿದ ವ್ಯಾಘ್ರ

ಯಾವುದೇ ಪ್ರಾಣಿಗಲೇ ಆಗಲಿ, ಪಕ್ಷಿಗಳೇ ಆಗಲಿ ಅವುಗಳು ತಮ್ಮ ಮರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತವೆ. ಅವುಗಳನ್ನು ರಕ್ಷಿಸಿಕೊಳ್ಳುವುದೇ ತನ್ನ ಮೊದಲ ಆದ್ಯತೆ ಎಂಬಂಥ ಮನಸ್ಥಿತಿ ತಾಯಿಯಾತ್ತಿದ್ದ ಒಡನೆಯೇ ಅವುಗಳಲ್ಲಿ ಮೈಗೂಡಿಬಿಡುತ್ತದೆ. ಇದೀಗ ಜಯ್​ ಬ್ರೀವರ್​ ಎಂಬ ಪ್ರಾಣಿಪ್ರಿಯ ಮತ್ತು ಪಾಲಕ ತಾನು ಸಾಕಿದ ತಾಯಿಹೆಬ್ಬಾವಿನ ಬಳಿ ನಿಂತಿದ್ದಾನೆ. ಹಾಕಿದ ಮೊಟ್ಟೆಗಳನ್ನು ರಕ್ಷಿಸುವುದಕ್ಕಾಗಿ ಅವುಗಳೆಡೆ ಕೈಹಾಕುತ್ತಾನೆ. ಆದರೆ ತಾಯಿಹೆಬ್ಬಾವು ಅವನನ್ನು ಕಚ್ಚಲು ಪ್ರಯತ್ನಿಸುತ್ತಿದೆ. ಇದರ ವಿಡಿಯೋವನ್ನು ಜಯ್‌ ಬ್ರೀವರ್‌ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಜಯ್‌ ಬ್ರೀವರ್‌ ಅವರು ಹೆಬ್ಬಾವಿನ ಮೊಟ್ಟೆಗಳನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಆದರೆ ಹೆಬ್ಬಾವು ಅವರ ಮೇಲೆಯೇ ದಾಳಿ ಮಾಡುತ್ತದೆ. ಪ್ರತೀ ಬಾರೀಯೂ ಈ ಮೊಟ್ಟೆಗಳನ್ನು ಮುಟ್ಟಲು ಜಯ್​ ಪ್ರಯತ್ನಿಸಿದಾಗೆಲ್ಲ ತಾಯಿಹೆಬ್ಬಾವು ಹೀಗೆಯೇ ವರ್ತಿಸಿದೆ. ಅನೇಕರು ಈ ವಿಡಿಯೋ ನೋಡಿ ಭಯವಾಯಿತು ಎಂದು ಪ್ರತಿಕ್ರಿಯಿಸಿದ್ಧಾರೆ. ಈ ಹೆಬ್ಬಾವು ಮೊಟ್ಟೆಗಳನ್ನು ಎಣಿಸುವುದಕ್ಕೂ ಬಿಡಲಾರದು ಅಷ್ಟೊಂದು ರಕ್ಷಣಾತ್ಮಕ ಮನೋಭಾವವವನ್ನು ಹೊಂದಿದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಸಾಕಿದ ಹಾವಾದರೂ ಹಾವು ಹಾವೇ. ಅದರಲ್ಲೂ ಮೊಟ್ಟೆ ಇಟ್ಟ ಹಾವನ್ನು ಕೇಳಬೇಕೇ? ಕಚ್ಚಿಸಿಕೊಂಡರೂ ಪರ್ವಾಗಿಲ್ಲ ಎನ್ನುವ ಧೈರ್ಯ ಬೇಕು ಎಂದಿದ್ಧಾರೆ .

suddiyaana