DDP ಫೈರ್.. BCCI ಶೇಕ್ – 5 ಪಂದ್ಯಗಳಲ್ಲೇ 4 ಭರ್ಜರಿ ಶತಕ
ಟೀಂ ಇಂಡಿಯಾಗೆ ಪ್ರಚಂಡ ಪಡಿಕ್ಕಲ್?

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅಕ್ಷರಶಃ ವಿಶ್ವರೂಪ ತಾಳಿದ್ದಾರೆ. ಎದುರಾಳಿ ಬೌಲರ್ಗಳ ಬೆವರಿಳಿಸುತ್ತಾ ಶತಕಗಳನ್ನೇ ಮೆಟ್ಟಿಲು ಮಾಡ್ಕೊಂಡು ಮುನ್ನುಗ್ತಿದ್ದಾರೆ. ಪ್ರತಿಭಾವಂತ ಕ್ರಿಕೆಟಿಗರ ಪಾಲಿಗೆ ದೇಶೀಯ ಪಂದ್ಯಾವಳಿಗಳು ಭವಿಷ್ಯದ ದಾರಿ ತೋರುವ ಗುರುಗಳಾಗ್ತಿದ್ದಾರೆ. ಒಳ ರಾಜಕೀಯವೋ ಅಥವಾ ತಮ್ಮ ಕೋಟಾದ ಆಟಗಾರರು ಆಡ್ಬೇಕು ಅನ್ನೋ ನಿಟ್ಟಿನಲ್ಲೋ ಕೆಲ ಟ್ಯಾಲೆಂಟೆಡ್ ಪ್ಲೇಯರ್ಗಳಿಗೆ ಬಿಸಿಸಿಐ ಬಾಸ್ಗಳು ಅವಕಾಶ ಕೊಡಲ್ಲ. ಹೀಗಾಗಿ ಕೆಲವ್ರು ತಮ್ಮಲ್ಲಿ ಸಾಮರ್ಥ್ಯ ಇದೆ ಅನ್ನೋದನ್ನ ಮೈದಾನದಲ್ಲಿ ತೋರಿಸಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಪೈಕಿ ದೇವದತ್ ಪಡಿಕ್ಕಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ಉಗ್ರರೂಪಿಯಾಗಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸಿ ಬಿಸಿಸಿಐನೇ ಶೇಕ್ ಮಾಡಿದ್ದಾರೆ.
ತ್ರಿಪುರ ವಿರುದ್ಧವೂ ಶತಕ ಬಾರಿಸಿದ ದೇವದತ್ ಪಡಿಕ್ಕಲ್!
2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಐದನೇ ಪಂದ್ಯಗಳು ಇವತ್ತು ನಡೀತಿವೆ. ಹಾಗೇ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ತ್ರಿಪುರ ವಿರುದ್ಧ ಅಖಾಡಕ್ಕಿಳಿದಿದೆ. ಮೊದ್ಲಿಗೆ ಟಾಸ್ ಗೆದ್ದ ತ್ರಿಪುರ ಬೌಲಿಂಗ್ನ ಆಯ್ಕೆ ಮಾಡಿಕೊಳ್ತು. ಸೋ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದ್ರು. ಬ್ಯಾಡ್ಲಕ್ ಅಂದ್ರೆ ಮಯಾಂಕ್ 5 ರನ್ಗಳಿವೆ ಔಟಾದ್ರು. ಆ ನಂತ್ರ 3ನೇ ಸ್ಲಾಟಲ್ಲಿ ಬಂದ ಕರುಣ್ ನಾಯರ್ ಡಕ್ಔಟ್. ಅಲ್ಲಿಗೆ 6 ರನ್ಗಳು ಆಗುವಷ್ಟ್ರಲ್ಲೇ ಕರ್ನಾಟಕ 2 ವಿಕೆಟ್ ಕಳ್ಕೊಂಡಿತ್ತು. ಆದ್ರೆ ಮೂರನೇ ವಿಕೆಟ್ಗೆ ಜೊತೆಯಾದ ಪಡಿಕ್ಕಲ್ ಮತ್ತು ಸ್ಮರಣ್ ರವಿಚಂದ್ರನ್ ಜೊತೆಯಾಟ ಕ್ಲಿಕ್ ಆಯ್ತು. 3ನೇ ವಿಕೆಟ್ ವೇಳೆಗೆ 142 ರನ್ಗಳನ್ನ ಈ ಜೋಡಿ ಕಲೆ ಹಾಕಿತ್ತು. 60 ರನ್ ಗಳಿಸಿ ಸ್ಮರಣ್ ಔಟಾದ್ರು. ಇನ್ನು ಐದನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಎಂಟ್ರಿ ಕೊಡ್ತಾರೆ. ಪಡಿಕ್ಕಲ್ ಮತ್ತು ರಾಹುಲ್ ಪಾರ್ಟ್ನರ್ಶಿಪ್ ಬಿಲ್ಡ್ ಆಗ್ತಿದೆ ಅನ್ನುವಾಗ್ಲೇ ರಾಹುಲ್ 35 ರನ್ ಗಳಿಸಿ ಔಟಾದ್ರು. ಆದ್ರೆ ಪಡಿಕ್ಕಲ್ ಮಾತ್ರ ಸಿಂಗಲ್ಲಾಗಿ ನಿಂತು ತ್ರಿಪುರ ಬೌಲರ್ಗಳನ್ನ ಕಾಡಿದ್ರು. 120 ಎಸೆತಗಳಲ್ಲಿ 8 ಫೋರ್, 3 ಸಿಕ್ಸ್ಗಳೊಂದಿಗೆ 108 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಌಂಡ್ ಅಭಿನವ್ ಮನೋಹರ್ ಕೂಡ ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದು 43 ಎಸೆತಗಳಲ್ಲೇ 79 ರನ್ಸ್ ಕಲೆ ಹಾಕಿದ್ರು. ಶ್ರೇಯಸ್ ಗೋಪಾಲ್ 29 ರನ್ಸ್ ಸ್ಕೋರ್ ಮಾಡಿದ್ರು. ಹೀಗಾಗಿ ಕರ್ನಾಟಕ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 332 ರನ್ಗಳನ್ನ ಕಲೆ ಹಾಕಿತು. ಬಟ್ ಇಡೀ ಟೂರ್ನಿಯಲ್ಲಿ ಕರ್ನಾಟಕ ಬ್ಯಾಟಿಂಗ್ನ ಬಲವಾಗಿರೋದೇ ದೇವದತ್ ಪಡಿಕ್ಕಲ್.
5 ಪಂದ್ಯಗಳಲ್ಲೇ 4 ಶತಕ ಬಾರಿಸಿದ ದೇವದತ್ ಪಡಿಕ್ಕಲ್!
ಯೆಸ್. ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಐದು ಪಂದ್ಯಗಳು ಮುಗಿದಿವೆ. ಈ ಪೈಕಿ ದೇವದತ್ ಪಡಿಕ್ಕಲ್ ಕರ್ನಾಟಕ ಪರ 4 ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ಇನ್ನೂ ತಂಡವನ್ನು ಘೋಷಿಸದ ಕಾರಣ ಪಡಿಕ್ಕಲ್ ಅವರ ಅದ್ಭುತ ಫಾರ್ಮ್ ಆಯ್ಕೆದಾರರು ಸರಣಿಗೆ ಅವರ ಹೆಸರನ್ನು ಪರಿಗಣಿಸುವಂತೆ ಪ್ರೆಶರ್ ಬಿಲ್ಡ್ ಮಾಡಿದೆ. ಯಾಕಂದ್ರೆ ಇಡೀ ಟೂರ್ನಿಯಲ್ಲಿ ಸಾಲಿಡ್ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 118 ಎಸೆತಗಳಲ್ಲಿ 147 ರನ್ ಗಳಿಸುವ ಮೂಲಕ ಪಂದ್ಯಾವಳಿಯನ್ನು ಸ್ಟಾರ್ಟ್ ಮಾಡಿದ್ರು. 412 ರನ್ಗಳ ಬೃಹತ್ ಚೇಸಿಂಗ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ನಂತ್ರ ಕೇರಳ ವಿರುದ್ಧ 137 ಎಸೆತಗಳಲ್ಲಿ 124 ರನ್ ಗಳಿಸಿದರು. ಬಟ್ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 22 ರನ್ ಗಳಿಸಿದ್ರು. ಆದ್ರೆ ನೆಕ್ಸ್ಟ್ ಮ್ಯಾಚ್ನಲ್ಲೇ ಕಂ ಬ್ಯಾಕ್ ಮಾಡಿದ ಪಡಿಕ್ಕಲ್ ಪುದುಚೇರಿ ವಿರುದ್ಧ 116 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ಮತ್ತೊಂದು ಶತಕದೊಂದಿಗೆ ಅಬ್ಬರಿಸಿದ್ರು. ಈಗ ತ್ರಿಪುರ ವಿರುದ್ಧ ಶತಕ ಸಿಡಿಸಿ ಸುನಾಮಿ ಎಬ್ಬಿಸಿದ್ದಾರೆ.
ಲಿಸ್ಟ್ ಎ 37 ಇನ್ನಿಂಗ್ಸ್ ಗಳಲ್ಲಿ 13 ಶತಕ ಬಾರಿಸಿದ ಡಿಡಿಪಿ!
ಲಿಸ್ಟ್ ಎ ಕ್ರಿಕೆಟ್ ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಿರೋ ದೇವದತ್ ಪಡಿಕ್ಕಲ್ 37 ಇನ್ನಿಂಗ್ಸ್‌ಗಳಲ್ಲೇ ಅವರು 13 ಶತಕ ಬಾರಿಸಿದ್ದಾರೆ. ಹಾಗೇ 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವ್ರ ಸರಾಸರಿ 80 ಕ್ಕಿಂತ ಹೆಚ್ಚಿದೆ. ಅಂದ್ರೆ 50-ಓವರ್‌ಗಳ ಸ್ವರೂಪದಲ್ಲಿ ಸಾಕಷ್ಟು ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತ ಚೆನ್ನಾಗಿದೆ. ವಿಪರ್ಯಾಸ ಅಂದ್ರೆ ಟೆಸ್ಟ್ ಮತ್ತು ಟಿ20ಐ ನಲ್ಲಿ ಭಾರತದ ಪರ ತಲಾ ಎರೆಡರಡು ಪಂದ್ಯಗಳನ್ನ ಮಾತ್ರವೇ ಆಡಿದ್ದಾರೆ. ಬಟ್ ಏಕದಿನ ಮಾದರಿಯಲ್ಲಿ ಇನ್ನೂ ಪದಾರ್ಪಣೆ ಭಾಗ್ಯವೂ ಸಿಕ್ಕಿಲ್ಲ. ಟಾಪ್ ಆರ್ಡರ್ನಲ್ಲಿ ಡೇಂಜರಸ್ ಬ್ಯಾಟರ್ ಆಗುವ ಪಡಿಕ್ಕಲ್ಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಗಲೇಬೇಕಿದೆ. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಪಡಿಕ್ಕಲ್ ಅವಕಾಶ ನೀಡಿಲ್ಲ ಅನ್ನೋದೇ ವಿಪರ್ಯಾಸ.

ನೋಡಿರಿ

